Joe Root: ಶೂನ್ಯ ಸುತ್ತಿ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಜೋ ರೂಟ್
Australia vs England 1st Test: ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು ಆರಂಭಿಕ ಬ್ಯಾಟ್ಸ್‌ಮನ್ ಜ್ಯಾಕ್ ಕ್ರಾಲಿ ಅವರನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡು ಕಳಪೆ ಆರಂಭ ಕಂಡಿತು. ಮಿಚೆಲ್ ಸ್ಟಾರ್ಕ್ ಅವರ ಬೆಂಕಿ ಉಂಡೆಗಳ ವೇಗದ ಬೌಲಿಂಗ್ ಮುಂದೆ ಆಂಗ್ಲ ಬ್ಯಾಟರ್‌ಗಳು ಪರದಾಡಿ 172 ರನ್‌ಗೆ ಸರ್ವಪತನ ಕಂಡರು. ಮಿಚೆಲ್ ಸ್ಟಾರ್ ಕೇವಲ 58 ರನ್‌ಗೆ 7 ವಿಕೆಟ್ ಕಿತ್ತು ಮಿಂಚಿದರು.
ಜೋ ರೂಟ್ -
ಪರ್ತ್, ನ.21: ಇಂಗ್ಲೆಂಡ್‌ನ ಅನುಭವಿ ಬ್ಯಾಟರ್ ಜೋ ರೂಟ್(Joe Root) ಅವರು 2025-26ರ ಆಶಸ್ ಸರಣಿಯ ಆಸ್ಟ್ರೇಲಿಯಾ ವಿರುದ್ಧದ(Australia vs England 1st Test) ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಅತ್ಯಂತ ಕಳಪೆ ಆರಂಭ ಕಂಡರು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಇಂಗ್ಲಿಷ್ ಬ್ಯಾಟರ್ ಏಳು ಎಸೆತಗಳಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ತಮ್ಮ ಹೆಸರಿಗೆ ಅನಗತ್ಯ ದಾಖಲೆಯೊಂದನ್ನು ಸೇರಿಸಿಕೊಂಡರು.
ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ರೂಟ್ ಅವರ ಒಂಬತ್ತನೇ ಶೂನ್ಯ ಸಂಪಾದನೆ. ಈ ಮೂಲಕ, ಎಲ್ಲಾ ಮಾದರಿಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶೂನ್ಯಕ್ಕೆ ಔಟಾದ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಸರಿಗಟ್ಟಿದರು. ಉಭಯ ಆಟಗಾರರು ಒಟ್ಟು 9 ಬಾರಿ ಶೂನ್ಯ ಸುತ್ತಿದ್ದಾರೆ. ಕರ್ಟ್ನಿ ವಾಲ್ಷ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 16 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು ಆರಂಭಿಕ ಬ್ಯಾಟ್ಸ್‌ಮನ್ ಜ್ಯಾಕ್ ಕ್ರಾಲಿ ಅವರನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡು ಕಳಪೆ ಆರಂಭ ಕಂಡಿತು. ಮಿಚೆಲ್ ಸ್ಟಾರ್ಕ್ ಅವರ ಬೆಂಕಿ ಉಂಡೆಗಳ ವೇಗದ ಬೌಲಿಂಗ್ ಮುಂದೆ ಆಂಗ್ಲ ಬ್ಯಾಟರ್‌ಗಳು ಪರದಾಡಿ 172 ರನ್‌ಗೆ ಸರ್ವಪತನ ಕಂಡರು. ಮಿಚೆಲ್ ಸ್ಟಾರ್ಕ್ ಕೇವಲ 58 ರನ್‌ಗೆ 7 ವಿಕೆಟ್ ಕಿತ್ತು ಮಿಂಚಿದರು.
ಇದನ್ನೂ ಓದಿ IND vs SA: ಊಟದ ಹೊತ್ತಿಗೆ ಚಹಾ!; ಗುವಾಹಟಿ ಟೆಸ್ಟ್ ಸಮಯದಲ್ಲಿ ಬದಲಾವಣೆ
ಇಂಗ್ಲೆಂಡ್ ತಂಡಕ್ಕೆ ಆಸರೆಯಾದದ್ದು ಹ್ಯಾರಿ ಬ್ರೂಕ್ ಮಾತ್ರ. ಆಸೀಸ್ ಬೌಲರ್‌ಗಳ ದಾಳಿಯನ್ನು ಕೆಲ ಕಾಲ ಸಮರ್ಥವಾಗಿ ಎದುರಿಸಿ ನಿಂತ ಅವರು ಭರ್ಜರಿ ಅರ್ಧಶತಕ ಬಾರಿಸಿದರು. ಐದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 52ರನ್ ಬಾರಿಸಿದರು. ಉಳಿದಂತೆ ಓಲಿ ಫೋಪ್ 46, ಸ್ಮಿತ್ 33 ರನ್ ಗಳಿಸಿದರು. ನಾಯಕ ಬೆನ್ ಸ್ಟೋಕ್ಸ್ 6ಕ್ಕೆ ಆಟ ಮುಗಿಸಿದರು. ಒಟ್ಟು ಮೂವರು ಶೂನ್ಯ ಸುತ್ತಿದರು. ರೂಟ್, ಕ್ರಾಲಿ ಮತ್ತು ವುಡ್.
ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ಶೂನ್ಯ ಸಾಧನೆ
ಕರ್ಟ್ನಿ ವಾಲ್ಷ್ - 16
ಇಶಾಂತ್ ಶರ್ಮಾ - 13
ಕರ್ಟ್ಲಿ ಆಂಬ್ರೋಸ್- 12
ಇಯಾನ್ ಬೋಥಮ್ - 12
ಜೇಮ್ಸ್ ಆಂಡರ್ಸನ್ - 11
ಮಾರ್ಕ್ ಬೌಚರ್ - 11
ಡ್ಯಾರೆನ್ ಗೌ - 11
ಡೇನಿಯಲ್ ವೆಟ್ಟೋರಿ - 11
ವಾಸಿಮ್ ಬಾರಿ - 11
ಜಿಮ್ಮಿ ಆಡಮ್ಸ್ - 10
ಸ್ಟೂವರ್ಟ್ ಬ್ರಾಡ್ - 10
ಜಸ್ಪ್ರೀತ್ ಬುಮ್ರಾ - 10
ಹರ್ಭಜನ್ ಸಿಂಗ್ - 10
ಸನತ್ ಜಯಸೂರ್ಯ - 10
ವಿರಾಟ್ ಕೊಹ್ಲಿ - 9*
ಜೋ ರೂಟ್ - 9*
ಉಭಯ ಆಡುವ ಬಳಗ
ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ,ಜೇಕ್ ವೆದರಾಲ್ಡ್, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಬ್ರೆಂಡನ್ ಡಾಗೆಟ್, ಸ್ಕಾಟ್ ಬೋಲ್ಯಾಂಡ್.
ಇಂಗ್ಲೆಂಡ್: ಬೆನ್ ಡಕೆಟ್, ಜಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿ.ಕೀ.), ಗಸ್ ಅಟ್ಕಿನ್ಸನ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಮಾರ್ಕ್ ವುಡ್.