ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೋಲಿನೊಂದಿಗೆ WWEಗೆ ವಿದಾಯ ಹೇಳಿದ ಜಾನ್‌ ಸೀನಾ

john cena: ಟೊರಾಂಟೊದಲ್ಲಿ ನಡೆದ ‘ಮನಿ ಇನ್ ಬ್ಯಾಂಕ್’ ಪ್ರೀಮಿಯಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಾನ್ ಸೀನಾ ಈ ಘೋಷಣೆ ಮಾಡಿದ್ದು, 'ದಿ ಲಾಸ್ಟ್ ಟೈಮ್ ಈಸ್ ನೌ' ಎಂದು ಬರೆದ ಟೀ ಶರ್ಟ್ ಧರಿಸಿ ಬಂದಿದ್ದರು. ಇದರೊಂದಿಗೆ ರೆಸ್ಲಿಂಗ್ ನಲ್ಲಿ 2025 ಅವರ ಕೊನೆಯ ವರ್ಷ ಎಂದು ಬಹಿರಂಗಪಡಿಸಿದ್ದರು.

23 ವರ್ಷಗಳ WWE ವೃತ್ತಿಜೀವನಕ್ಕೆ ತೆರೆ ಎಳೆದ ಜಾನ್ ಸೀನಾ

john cena -

Abhilash BC
Abhilash BC Dec 14, 2025 3:10 PM

ನ್ಯೂಯಾರ್ಕ್‌,ಡಿ.14: ಡಬ್ಲ್ಯೂಡಬ್ಲ್ಯೂಇ(WWE) ಸೂಪರ್‌ಸ್ಟಾರ್‌, 17 ಬಾರಿ ಚಾಂಪಿಯನ್‌ ಆಗಿರುವ ಜಾನ್‌ ಸೀನಾ(john cena) ಅವರು ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಶನಿವಾರ ತಡರಾತ್ರಿ ನಡೆದ ಗುಂಥರ್(Gunther) ವಿರುದ್ಧದ ವಿದಾಯ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ತಮ್ಮ ಅದ್ಭುತ ಕುಸ್ತಿ ವೃತ್ತಿಜೀವನಕ್ಕೆ ವಿದಾಯ ಹೇಳಿದರು.

2024ರಲ್ಲಿ ನಡೆದ ಲಾಸ್ ಏಂಜಲೀಸ್‌ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಬೆಸ್ಟ್ ಕಾಸ್ಟೂಮ್ ಡಿಸೈನರ್‘ ಪ್ರಶಸ್ತಿ ಘೋಷಣೆ ವೇಳೆ ಜಾನ್ ಸೀನಾ ಬೆತ್ತಲೆಯಾಗಿ ವೇದಿಕೆಗೆ ಬಂದಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಮತ್ತು ಟೀಕೆ ವ್ಯಕ್ತವಾಗಿತ್ತು.

2002ರ ಜೂನ್ 27 ರಂದು ಸ್ಮ್ಯಾಕ್‌ಡೌನ್‌ನಲ್ಲಿ ಜಾನ್‌ ಸೀನಾ WWE ಗೆ ಪಾದಾರ್ಪಣೆ ಮಾಡಿದರು. ಮುಂದಿನ ಎರಡು ದಶಕಗಳಲ್ಲಿ, ಸೀನಾ ಪ್ರಚಾರದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾದರು. 17 ಬಾರಿ WWE ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕಂಪನಿಯ ಪ್ರಶಸ್ತಿ ಇತಿಹಾಸದಲ್ಲಿ ಅವರು ಅಗ್ರಸ್ಥಾನದಲ್ಲಿರುವ ದಾಖಲೆಯನ್ನು ಹೊಂದಿದ್ದಾರೆ. ಅವರು ಆರು ಬಾರಿ ರೆಸಲ್‌ಮೇನಿಯಾದಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ.



ಇಂಟರ್‌ಕಾಂಟಿನೆಂಟಲ್ ಪ್ರಶಸ್ತಿ ಸೇರಿದಂತೆ WWE ನ ಪ್ರಮುಖ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವ ಮೂಲಕ ಗ್ರ್ಯಾಂಡ್ ಸ್ಲಾಮ್ ಅನ್ನು ಪೂರ್ಣಗೊಳಿಸಿದ್ದಾರೆ. ಜಾನ್‌ ಸೀನಾ ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ ಮೆಸ್ಸಿ ಭಾರತ ಪ್ರವಾಸದ ಸಂಘಟಕ ಸತಾದ್ರು ದತ್ತ 14 ದಿನಗಳ ಪೊಲೀಸ್ ಕಸ್ಟಡಿಗೆ

ಟೊರಾಂಟೊದಲ್ಲಿ ನಡೆದ ‘ಮನಿ ಇನ್ ಬ್ಯಾಂಕ್’ ಪ್ರೀಮಿಯಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಾನ್ ಸೀನಾ ಈ ಘೋಷಣೆ ಮಾಡಿದ್ದು, 'ದಿ ಲಾಸ್ಟ್ ಟೈಮ್ ಈಸ್ ನೌ' ಎಂದು ಬರೆದ ಟೀ ಶರ್ಟ್ ಧರಿಸಿ ಬಂದಿದ್ದರು. ಇದರೊಂದಿಗೆ ರೆಸ್ಲಿಂಗ್ ನಲ್ಲಿ 2025 ಅವರ ಕೊನೆಯ ವರ್ಷ ಎಂದು ಬಹಿರಂಗಪಡಿಸಿದ್ದರು. ಜಾನ್ ಸೀನಾ ‘ರಾ’ ಮೊದಲ ಸಂಚಿಕೆಯಲ್ಲಿ ನಟಿಸುತ್ತಿದ್ದು, ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.



ಶ್ರೇಷ್ಠ ಕುಸ್ತಿ ತಾರೆಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟ ಜಾನ್ ಸೀನಾ ಅವರನ್ನು ವಿಶ್ವದ ಅತ್ಯಂತ ಶ್ರೀಮಂತ WWE ತಾರೆಗಳಲ್ಲಿ ಒಬ್ಬರೆಂದು ಪರಿಗಣಿಸಬಹುದು.