ನಾಳೆ ಭಾರತಕ್ಕೆ ಮೆಸ್ಸಿ ಆಗಮನ; ಪ್ರವಾಸದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
Lionel Messi in India: ಹೈದರಾಬಾದ್‌ನಲ್ಲಿ, ಮೆಸ್ಸಿ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 7v7 ಫುಟ್ಬಾಲ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಈ ಪಂದ್ಯದಲ್ಲಿ ಆಡಲಿದ್ದಾರೆ. ಸಂಜೆ ಮೆಸ್ಸಿ ಗೌರವಾರ್ಥ ಸಂಗೀತ ಕಾರ್ಯಕ್ರಮವೂ ನಡೆಯಲಿದೆ.
Lionel Messi -
ನವದೆಹಲಿ, ಡಿ.11: ಅರ್ಜೆಂಟೀನಾದ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿ(Lionel Messi in India) ಶುಕ್ರವಾರ ಭಾರತಕ್ಕೆ ಆಗಮಿಸಲಿದ್ದಾರೆ. ಮೂರು ದಿನಗಳ ಕಾಲ ಮೆಸ್ಸಿ(Lionel Messi) ಭಾರತದಲ್ಲಿ ಇರಲಿದ್ದಾರೆ. ಇದು 2011ರ ಬಳಿಕ ಮೆಸ್ಸಿಯ ಭಾರತದ ಮೊದಲ ಭೇಟಿಯಾಗಿರಲಿದೆ. ಮೆಸ್ಸಿ ಭೇಟಿಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ.
ಡಿ.12ರಂದು ರಾತ್ರಿ ಮೆಸ್ಸಿ ಕೋಲ್ಕತಾಗೆ ಆಗಮಿಸಲಿದ್ದು, ಡಿ.13ರಂದು ಕೆಲ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅದೇ ದಿನ ಮೆಸ್ಸಿ ವಿಶ್ವದಲ್ಲೇ ತಮ್ಮ ಅತಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಬಳಿಕ ದುರ್ಗಾ ಪೂಜೆ ವೇಳೆ 25 ಅಡಿ ಎತ್ತರ, 20 ಅಡಿ ಅಗಲವಿರುವ ತಮ್ಮ ವರ್ಣಚಿತ್ರ ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಸೌರವ್ ಗಂಗೂಲಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗಿನ ಸಭೆ ನಡೆಸಿ ಮಧ್ಯಾಹ್ನ 2 ಗಂಟೆಗೆ ಹೈದರಾಬಾದ್‌ಗೆ ತೆರಳಲಿದ್ದಾರೆ.
ಹೈದರಾಬಾದ್‌ನಲ್ಲಿ, ಮೆಸ್ಸಿ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 7v7 ಫುಟ್ಬಾಲ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಈ ಪಂದ್ಯದಲ್ಲಿ ಆಡಲಿದ್ದಾರೆ. ಸಂಜೆ ಮೆಸ್ಸಿ ಗೌರವಾರ್ಥ ಸಂಗೀತ ಕಾರ್ಯಕ್ರಮವೂ ನಡೆಯಲಿದೆ.
ಇದನ್ನೂ ಓದಿ Lionel Messi: ಇಂಟರ್ ಮಿಯಾಮಿಯಲ್ಲಿ ಒಪ್ಪಂದ ವಿಸ್ತರಿಸಿದ ಮೆಸ್ಸಿ; 2028ರ ತನಕ ಆಟ
ಹೈದರಾಬಾದ್ ನಂತರ, ಮೆಸ್ಸಿ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಡಿ.14ರಂದು ಮೆಸ್ಸಿ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಮೀಟ್ ಆ್ಯಂಡ್ ಗ್ರೀಟ್, ಗೋಟ್ ಕನ್ಸರ್ಟ್‌ನಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ವಾಂಖೇಡೆ ಕ್ರೀಡಾಂಗಣದಲ್ಲಿ ಪೆಡಲ್ ಗೋಟ್ ಕಪ್‌ನಲ್ಲಿ ಸೆಲೆಬ್ರಿಟಿಗಳ ಜೊತೆಗೂಡಿ ಆಡಲಿದ್ದಾರೆ. ಮತ್ತು 2022 ರ ವಿಶ್ವಕಪ್‌ನ ಆಯ್ದ ಸ್ಮರಣಿಕೆಗಳನ್ನು ಹರಾಜು ಹಾಕಲಿದ್ದಾರೆ.
ಡಿ.15ರಂದು ಮೆಸ್ಸಿ, ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲೇ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮೋದಿ ಜೊತೆ ಔತಣ ಕೂಟದಲ್ಲೂ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಳಿಕ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗಿಯಾಗಲಿದ್ದಾರೆ.
ವೇಳಾಪಟ್ಟಿ ಹೀಗಿದೆ
ಡಿಸೆಂಬರ್ 13, ಕೋಲ್ಕತ್ತಾ
ಬೆಳಿಗ್ಗೆ 1:30: ಕೋಲ್ಕತ್ತಾಗೆ ಆಗಮನ
ಬೆಳಿಗ್ಗೆ 9:30 ರಿಂದ 10:30 ರವರೆಗೆ: ಭೇಟಿ ಮತ್ತು ಶುಭಾಶಯ ಕಾರ್ಯಕ್ರಮ
ಬೆಳಿಗ್ಗೆ 10:30 ರಿಂದ 11:15 ರವರೆಗೆ: ಮೆಸ್ಸಿ ಪ್ರತಿಮೆಯ ವರ್ಚುವಲ್ ಉದ್ಘಾಟನೆ
ಬೆಳಿಗ್ಗೆ 11:15 ರಿಂದ 11:25 ರವರೆಗೆ: ಯುವ ಭಾರತಿಗೆ ಆಗಮನ
ಬೆಳಿಗ್ಗೆ 11:30: ಶಾರುಖ್ ಖಾನ್ ಯುವ ಭಾರತಿಗೆ ಆಗಮನ
ಮಧ್ಯಾಹ್ನ 12:00: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸೌರವ್ ಗಂಗೂಲಿ ಕ್ರೀಡಾಂಗಣಕ್ಕೆ ಆಗಮನ
ಮಧ್ಯಾಹ್ನ 12:00 ರಿಂದ 12:30 ರವರೆಗೆ: ಸೌಹಾರ್ದ ಪಂದ್ಯ, ಸನ್ಮಾನ ಮತ್ತು ಸಂವಾದ
ಮಧ್ಯಾಹ್ನ 2:00: ಹೈದರಾಬಾದ್‌ಗೆ ನಿರ್ಗಮನ
ಡಿಸೆಂಬರ್ 13, ಹೈದರಾಬಾದ್
ಸಂಜೆ 7:00: ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 7v7 ಪಂದ್ಯ, ಮೆಸ್ಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಗವಹಿಸಲಿದ್ದಾರೆ.
ಡಿಸೆಂಬರ್ 14, ಮುಂಬೈ
ಮಧ್ಯಾಹ್ನ 3:30: ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಪ್ಯಾಡೆಲ್ ಕಪ್‌ನಲ್ಲಿ ಭಾಗವಹಿಸುವಿಕೆ
ಸಂಜೆ 4:00: ಸೆಲೆಬ್ರಿಟಿ ಫುಟ್ಬಾಲ್ ಪಂದ್ಯ
ಸಂಜೆ 5:00: ವಾಂಖೆಡೆ ಕ್ರೀಡಾಂಗಣದಲ್ಲಿ ಕಾರ್ಯಕ್ರಮ, ನಂತರ ದತ್ತಿ ಫ್ಯಾಷನ್ ಶೋ
ಡಿಸೆಂಬರ್ 15, ನವದೆಹಲಿ
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ
ಮಧ್ಯಾಹ್ನ 1:30: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಿನರ್ವಾ ಅಕಾಡೆಮಿ ಆಟಗಾರರ ಸನ್ಮಾನ ಸೇರಿದಂತೆ ಕಾರ್ಯಕ್ರಮ.