ʻಆ ಮನುಷ್ಯ ಇನ್ನೂ ಬದಲಾಗಿಲ್ಲʼ: ಗೌತಮ್ ಗಂಭೀರ್ ವಿರುದ್ದ ಶಾಹಿದ್ ಅಫ್ರಿದಿ ಕಿಡಿ!
ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ದೊಡ್ಡ ಹೇಳಿಕೆ ನೀಡಿದ್ದಾರೆ. ತಾವು ಕ್ರಿಕೆಟ್ ಆಡುವ ಸಮಯದಲ್ಲಿ ಗಂಭೀರ್ ವರ್ತನೆ ಹೇಗಿತ್ತೋ, ಈಗಲೂ ಅದೇ ರೀತಿ ಇದೆ, ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಹೇಳಿದ್ದಾರೆ.
ಗೌತಮ್ ಗಂಭೀರ್ ಅವರನ್ನು ಕೆಣಕಿದ ಶಾಹಿದ್ ಅಫ್ರಿದಿ. -
ನವದೆಹಲಿ: ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಕಿಡಿ ಕಾರಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕೆಲ ಪ್ರಸಂಗಗಳನ್ನು ಸ್ಮರಿಸಿಕೊಳ್ಳುವ ಮೂಲಕ ಟೀಮ್ ಇಂಡಿಯಾ (India) ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಅನ್ನು ಟೀಕಿಸಿದ್ದಾರೆ. ಟೆಲಿಕಾಮ್ ಏಷ್ಯಾ ಸ್ಪೋರ್ಟ್ ಸಂದರ್ಶನದಲ್ಲಿ ಮಾತನಾಡಿದ ಶಾಹಿದ್ ಅಫ್ರಿದಿ ಹಲವು ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. ಕ್ರಿಕೆಟ್ ಆಡುವ ದಿನಗಳಲ್ಲಿ ಅವರ ವರ್ತನೆ ಹೇಗಿತ್ತೊ, ಈಗಲೂ ಅವರ ನಡತೆ ಅದೇ ರೀತಿ ಇದೆ ಎಂದು ದೂರಿದ್ದಾರೆ.
"ಗೌತಮ್ ಗಂಭೀರ್ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ರೀತಿ, ಅವರು ಹೇಳಿದ್ದೆಲ್ಲವೂ ಸರಿ ಎಂದು ಭಾವಿಸಿದಂತೆ ಕಾಣುತ್ತಿತ್ತು. ಆದರೆ ಸ್ವಲ್ಪ ಸಮಯದ ನಂತರ, ನೀವು ಯಾವಾಗಲೂ ಸರಿಯಾಗಿಲ್ಲ ಎಂದು ಸಾಬೀತಾಯಿತು," ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.
2007ರ ಏಷ್ಯಾ ಕಪ್ ಟೂರ್ನಿಯ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಗೌತಮ್ ಗಂಭೀರ್ ಹಾಗೂ ಶಾಹಿದ್ ಅಫ್ರಿದಿ ನಡುವೆ ಕಿರಿಕ್ ಆಗಿತ್ತು ಹಾಗೂ ಇದು ದೊಡ್ಡ ವಿವಾದವನ್ನು ಹುಟ್ಟು ಹಾಕಿತ್ತು. ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ, ಹೊರಗಡೆಯೂ ಕೂಡ ಈ ಬಗ್ಗೆ ಮಾಜಿ ಕ್ರಿಕೆಟಿಗರು ಹೇಳಿಕೆಗಳನ್ನು ನೀಡುವ ಮೂಲಕ ದೊಡ್ಡ ಸಂಚನಲವನ್ನು ಮಾಡಿದ್ದರು. ಇದೀಗ ಈ ಬಗ್ಗೆ ಶಾಹಿದ್ ಅಫ್ರಿದಿ ಮಾತನಾಡಿದ್ದಾರೆ.
IND vs SA: ವಿರಾಟ್ ಕೊಹ್ಲಿಯ ಟಿ20ಐ ದಾಖಲೆ ಮುರಿಯುವ ಸನಿಹದಲ್ಲಿ ಅಭಿಷೇಕ್ ಶರ್ಮಾ!
"2007ರ ಏಷ್ಯಾ ಕಪ್ ಟೂರ್ನಿಯ ಸಂದರ್ಭದಲ್ಲಿ ಗೌತಮ್ ಗಂಭೀರ್ ಅವರು ಒಂದು ರನ್ ಓಡಿದ ಬಳಿಕ ನೇರವಾಗಿ ನನ್ನ ಕಡೆ ಬಂದಿದ್ದರು ಎಂಬುದನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ. ಈ ವೇಳೆ ಅಂಪೈರ್‌ಗಳು ಇದನ್ನು ನಿಲ್ಲಿಸಲು ಪ್ರಯತ್ನಿಸಿದ್ದರು ಹಾಗೂ ನಾನು ಕೂಡ ಪ್ರಯತ್ನಿಸಿದ್ದೆ. ನಿಜವಾಗಲೂ ನಾವು ಆ ವೇಳೆ ಮಹಿಳಾ ಸಂಬಂಧಿ ಬಗ್ಗೆ ಚರ್ಚೆ ನಡೆಸುತ್ತಿದ್ದೆವು," ಎಂದು ಶಾಹಿದ್ ಅಫ್ರಿದಿ ತಿಳಿಸಿದ್ದಾರೆ.
ಬ್ರಾಡ್ಮನ್-ಜೇಮ್ಸ್ ಬಾಂಡ್ ಮಿಶ್ರ ತಳಿ ಗಂಭೀರ್
ಶಾಹಿದ್ ಅಪ್ರಿದಿ ತಮ್ಮ ಆತ್ಮಕಥೆಯಲ್ಲಿ ಗೌತಮ್ ಗಂಭೀರ್ ಅವರ ಬಗ್ಗೆ ಬರೆದಿದ್ದಾರೆ. ಗಂಭೀರ್ ಅವರ ಬಗ್ಗೆ ನನ್ನ ಅಭಿಪ್ರಾಯ ಎಂದಿಗೂ ಬದಲಾವಣೆಯಾಗಿಲ್ಲ ಎಂದಿದ್ದಾರೆ. ಸಕಾರಾತ್ಮಕ ಮನೋಭಾವ ಇಲ್ಲದ ಅವರ ವರ್ತನೆಯನ್ನು ಪಾಕಿಸ್ತಾನ ಮಾಜಿ ಆಲ್‌ರೌಂಡರ್ ಕಟುವಾಗಿ ಟೀಕಿಸಿದ್ದಾರೆ.
IND vs SA: ಭಾರತ ಟಿ20 ತಂಡದಲ್ಲಿ ಸಮಸ್ಯೆ ಹುಟ್ಟು ಹಾಕಿದ ಶುಭಮನ್ ಗಿಲ್!
"ಡಾನ್ ಬ್ರಾಡ್ಮನ್ ಮತ್ತು ಜೇಮ್ಸ್ ಬಾಂಡ್ ನಡುವಿನ ಮಿಶ್ರತಳಿಯಂತೆ ಗೌತಮ್ ಗಂಭೀರ್ ವರ್ತಿಸುತ್ತಾರೆ. ಕರಾಚಿಯಲ್ಲಿ ನಾವು ಅವರಂತಹ ವ್ಯಕ್ತಿಗಳನ್ನು ಸರ್ಯಾಲ್ (ಸುಟ್ಟುಹೋದ) ಎಂದು ಕರೆಯುತ್ತೇವೆ. ನನ್ನ ಪಾಲಿಗೆ ಇದು ಸರಳ ಸಂಗತಿ ಇದಾಗಿದೆ. ನನಗೆ ಸಂತೋಷದ, ಸಕಾರಾತ್ಮಕ ಜನರು ಇಷ್ಟ. ಅವರು ಆಕ್ರಮಣಕಾರಿ ಅಥವಾ ಸ್ಪರ್ಧಾತ್ಮಕವಾಗಿದ್ದರೂ ಪರವಾಗಿಲ್ಲ, ಆದರೆ ನೀವು ಸಕಾರಾತ್ಮಕವಾಗಿರಬೇಕು ಮತ್ತು ಇದು ಗಂಭೀರ್ ಅಲ್ಲ," ಎಂದು ಶಾಹಿದ್ ಅಫ್ರಿದಿ ಬರೆದಿದ್ದಾರೆ.
"ಗಂಭೀರ್ ಜೊತೆಗಿನ ಕೆಲ ಜಗಳ ವೃತ್ತಿಪರತೆಯಿಂದ ಕೂಡಿದ್ದರೆ, ಇನ್ನು ಕೆಲವು ವೈಯಕ್ತಿಕವಾಗಿರುತ್ತಿದ್ದವು. ಮೊದಲು ಗಂಭೀರ್ ಬಗ್ಗೆ ಕುತೂಹಲಕಾರಿ ಎನಿಸಿತ್ತು ಆದರೆ ನಂತರ, ಓಹ್, ಕಳಪೆ ಗೌತಮ್ ಎಂದೆನಿಸಿತ್ತು. ಅವರಿಗೆ ವರ್ತನೆಯ ಸಮಸ್ಯೆ ಇತ್ತು. ವ್ಯಕ್ತಿತ್ವವಿಲ್ಲದವನು. ದಿ ಗ್ರೇಟ್‌ನಲ್ಲಿ ಕೇವಲ ಒಂದು ಪಾತ್ರವಲ್ಲದವನು," ಎಂದು ಪಾಕ್ ಮಾಜಿ ನಾಯಕ ಟೀಕಿಸಿದ್ದಾರೆ.
ʻಶುಭಮನ್ ಗಿಲ್‌ಗಾಗಿ ಐವರು ಆಟಗಾರರ ವೃತ್ತಿ ಜೀವನ ಅಂತ್ಯʼ: ಗೌತಮ್ ಗಂಭೀರ್ ವಿರುದ್ಧ ಫ್ಯಾನ್ಸ್ ಕಿಡಿ!
ಶಾಹಿದ್ ಅಫ್ರಿದಿಗೆ ತಿರುಗೇಟು ನೀಡಿದ್ದ ಗಂಭೀರ್
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಹಿದ್ ಅಫ್ರಿದಿ ಬರೆದಿದ್ದ ಆತ್ಮ ಕಥೆ ಪುಸ್ತಕವನ್ನು ಗೌತಮ್ ಗಂಭೀರ್ ಟೀಕಿಸಿದ್ದರು. ಇಂಡಿಯಾ ಟುಡೇ ಜೊತೆ ಮಾತನಾಡಿದ್ದ ಗೌತಮ್ ಗಂಭೀರ್, "ಅವರು ಪುಸ್ತಕವನ್ನು ಚೆನ್ನಾಗಿ ಮಾರಾಟ ಮಾಡುತ್ತಾರೆಂದು ನನಗೆ ಖಚಿತತೆ ಇದೆ. ಕೆಲವರು ವಯಸ್ಸಿನಲ್ಲಿ ಬೆಳೆಯುತ್ತಾರೆ, ಮಾನಸಿಕವಾಗಿ ಅಲ್ಲ. ಶಾಹಿದ್ ಅಫ್ರಿದಿ ಬಹುಶಃ 36, 37 ವರ್ಷ (ಆಗ ಅವರಿಗೆ 39 ವರ್ಷ) ಇರಬಹುದು. ಆದರೆ, ಅವರ ಮನಸ್ಥಿತಿ 16ನೇ ವಯಸ್ಸಿನ ರೀತಿ ಇದೆ," ಎಂದು ತಿರುಗೇಟು ನೀಡಿದ್ದರು.