ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುವುದು ಅನುಮಾನ ಎಂದ ದೀಪ್‌ ದಾಸ್‌ಗುಪ್ತಾ!

ಸಂಜು ಸ್ಯಾಮ್ಸನ್‌ ಅವರ ಬದಲಿಗೆ ಜಿತೇಶ್‌ ಶರ್ಮಾ ಅವರಿಗೆ ಸ್ಥಾನ ನೀಡುವುದು ಉತ್ತಮ. ಏಕೆಂದರೆ, ಜಿತೇಶ್‌ ಶರ್ಮಾ ಅವರು ಕೆಳ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ದೀಪ್‌ ದಾಸ್‌ಗುಪ್ತಾ ಹೇಳಿದ್ದಾರೆ. ಆ ಮೂಲಕ ಸಂಜು ಸ್ಯಾಮ್ಸನ್‌ ಅವರಿಗೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅವಕಾಶ ಸಿಗುವುದು ಅನುಮಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಜು ಸ್ಯಾಮ್ಸನ್‌ರ ಟಿ20 ವಿಶ್ವಕಪ್‌ ಭವಿಷ್ಯ ನುಡಿದ ದಾಸ್‌ಗುಪ್ತಾ!

ಸಂಜು ಸ್ಯಾಮ್ಸನ್‌ ಟಿ20 ವಿಶ್ವಕಪ್‌ ಭವಿಷ್ಯ ನುಡಿದ ದಾಸ್‌ಗುಪ್ತಾ. -

Profile
Ramesh Kote Dec 11, 2025 5:29 PM

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ ತಂಡ ಮೊದಲನೇ ಪಂದ್ಯದಲ್ಲಿ(IND vs SA) 101 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಎರಡನೇ ಪಂದ್ಯ ಡಿಸೆಂಬರ್‌ 11 ರಂದು ಮುಲ್ಲಾನ್‌ಪುರದ ಮಹಾರಾಜ ಯದುವೀಂದ್ರ ಸಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿದೆ. ಮೊದಲನೇ ಪಂದ್ಯದಲ್ಲಿ ಗೆದ್ದಿರುವ ಭಾರತ ತಂಡ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸುವ ತವಕದಲ್ಲಿದ್ದರೆ, ಇತ್ತ ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ. ಶುಭಮನ್‌ ಗಿಲ್‌ (Shubman Gill) ಏಷ್ಯಾಕಪ್‌ ಟೂರ್ನಿಯ ಟಿ20 ತಂಡಕ್ಕೆ ಮರಳಿದಾಗಿನಿಂದ ಸಂಜು ಸ್ಯಾಮ್ಸನ್‌ (Sanju Samson) ಅವರಿಗೆ ಟಿ20 ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಇದರ ನಡುವೆ ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ದೀಪ್‌ ದಾಸ್‌ಗುಪ್ತಾ (Deep Dasgupta) ಮಾತನಾಡಿದ್ದು, ಸಂಜು ಸ್ಯಾಮ್ಸನ್‌ ಅವರಿಗೆ ಟಿ20 ವಿಶ್ವಕಪ್‌ನಲ್ಲೂ ಸ್ಥಾನ ಸಿಗುವುದು ಅನುಮಾನ ಎಂದು ಭವಿಷ್ಯ ನುಡಿದಿದ್ದಾರೆ.

ಸಂಜು ಸ್ಯಾಮ್ಸನ್‌ ಅವರ ಟಿ20 ವಿಶ್ವಕಪ್‌ ಭವಿಷ್ಯದ ಬಗ್ಗೆ ಮಾತನಾಡಿದ ದೀಪ್‌ ದಾಸ್‌ಗುಪ್ತಾ, ಸಂಜು ಸ್ಯಾಮ್ಸನ್‌ ಅವರ ಬದಲಿಗೆ ಜಿತೇಶ್‌ ಶರ್ಮಾ ಅವರಿಗೆ ಸ್ಥಾನ ನೀಡುವುದು ಉತ್ತಮ. ಏಕೆಂದರೆ, ಜಿತೇಶ್‌ ಶರ್ಮಾ ಅವರು ಕೆಳ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಹೇಳಿದ್ದಾರೆ.

"ಇದು ಸರಿಯಾದ ನಿರ್ಧಾರ. ಸಂಜು ಸ್ಯಾಮ್ಸನ್‌ ಮೊದಲ ಮೂರು ಕ್ರಮಾಂಕಗಳಲ್ಲಿ ಆಡದೇ ಇದ್ದರೆ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದರೆ, ನೀವು ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಿಂತ ಕೆಳ ಕ್ರಮಾಂಕದಲ್ಲಿ ವಿಶೇಷ ಬ್ಯಾಟ್ಸ್‌ಮನ್‌ ಆಡುವುದು ಒಳಿತು. ಎರಡು ಅಥವಾ ನಾಲ್ಕು ಎಸೆತಗಳಿಗೆ ಬ್ಯಾಟ್‌ ಮಾಡುವುದು ಸುಲಭವಲ್ಲ. ಜಿತೇಶ್ ಆ ವಿಷಯದಲ್ಲಿ ಸ್ಪೆಷಲಿಸ್ಟ್," ಎಂದು ದೀಪ್‌ ದಾಸ್‌ಗುಪ್ತಾ ತಿಳಿಸಿದ್ದಾರೆ.

IND vs SA: ವಿರಾಟ್‌ ಕೊಹ್ಲಿಯ ಟಿ20ಐ ದಾಖಲೆ ಮುರಿಯುವ ಸನಿಹದಲ್ಲಿ ಅಭಿಷೇಕ್‌ ಶರ್ಮಾ!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಭಾರತ ತಂಡಕ್ಕೆ ಇನ್ನೂ 9 ಪಂದ್ಯಗಳನ್ನು ಆಡುವುದು ಬಾಕಿ ಇದೆ. ಹಾಗಾಗಿ ಚುಟುಕು ವಿಶ್ವಕಪ್‌ ನಿಮಿತ್ತ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗುವುದಿಲ್ಲ ಎಂದು ನಾನು ನಂಬಿದ್ದೇನೆ," ಮಾಜಿ ವಿಕೆಟ್‌ ಕೀಪರ್‌ ಹೇಳಿದ್ದಾರೆ.

ಗಿಲ್‌, ಸೂರ್ಯ ಫಾರ್ಮ್‌ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ

ಶುಭಮನ್‌ ಗಿಲ್‌ ಭಾರತ ತಂಡಕ್ಕೆ ಮರಳಿದ ಬಳಿಕ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಪ್ರದರ್ಶನ ಕುಸಿದಿದೆ. ಅಭಿಷೇಕ್‌ ಶರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಅವರು ಇನಿಂಗ್ಸ್‌ ಆರಂಭಿಸುತ್ತಿದ್ದಾಗ ಟೀಮ್‌ ಇಂಡಿಯಾ ದೊಡ್ಡ ಮೊತ್ತ ಕಲೆಹಾಕುತ್ತಿತ್ತು. ಆದರೆ, ಟಿ20 ಕ್ರಿಕೆಟ್‌ನಲ್ಲಿ ಶುಭಮನ್‌ ಗಿಲ್‌ ಅವರು ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಸಮಿತಿ ಬಲಿಷ್ಠ ಭಾರತ ತಂಡ ಕಟ್ಟಲು ಎದುರು ನೋಡುತ್ತಿದೆ. ಇದರ ನಡುವೆ ನಾಯಕ ಸೂರ್ಯಕುಮಾರ್‌ ಯಾದವ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವುದು ದೊಡ್ಡ ತಲೆ ನೋವಾಗಿದೆ.

IND vs SA 2nd T20I: ಭಾರತದ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆ ವಿವರ!

ಈ ಕುರಿತು ಮಾತನಾಡಿರುವ ದೀಪ್‌ ದಾಸ್‌ಗುಪ್ತಾ, "ಶುಭಮನ್‌ ಗಿಲ್‌ ಮತ್ತು ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ಕಳವಳಕಾರಿ ಎಂದು ನಾನು ಹೇಳುವುದಿಲ್ಲ ಆದರೆ ಅವರು ರನ್ ಗಳಿಸುವುದನ್ನು ನೀವು ನೋಡಲು ಬಯಸುತ್ತೀರಿ. ನೀವು ರನ್‌ಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದರೆ, ನೀವು ಮುಕ್ತವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿರುವ ಸಾಧ್ಯತೆ ಹೆಚ್ಚು" ಎಂದು ಅವರು ಹೇಳಿದ್ದಾರೆ.