wtc final 2025: ಭಾರತ ಟೆಸ್ಟ್ ಫೈನಲ್‌ಗೆ ಅರ್ಹತೆ ಪಡೆಯದ ಕಾರಣ ಇಂಗ್ಲೆಂಡ್ ಕ್ಲಬ್ಗೆ 45 ಕೋಟಿ ನಷ್ಟ!
ಕಳೆದ ಎರಡು ಆವೃತ್ತಿಯಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಆಸೀಸ್ ಮತ್ತು ಕಿವೀಸ್ ವಿರುದ್ಧದ ಸೋಲಿನಿಂದ ಭಾರತ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಭಾರತ ಭಾಗವಹಿಸುವ ಪಂದ್ಯಗಳು ವಿಶ್ವದಾದ್ಯಂತ ದೊಡ್ಡ ಪ್ರೇಕ್ಷಕರನ್ನು ಸೆಳೆಯುತ್ತವೆ ಮತ್ತು ಟಿಕೆಟ್‌ಗಳಿಗೆ ಭಾರೀ ಬೇಡಿಕೆ ಇರುತ್ತದೆ.


ಲಂಡನ್: ಭಾರತ ಕ್ರಿಕೆಟ್ ತಂಡ ಪಂದ್ಯದಿಂದ ಇತರ ರಾಷ್ಟ್ರದ ಕ್ರಿಕೆಟ್‌ಗೆ ಎಷ್ಟು ಲಾಭ-ನಷ್ಟ ಇದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಹೌದು, ಭಾರತ ತಂಡ 2025ರಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025 Final) ಫೈನಲ್‌ಗೆ ಅರ್ಹತೆ ಪಡೆಯದಿರುವುದರಿಂದ ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣಕ್ಕೆ (Lords Stadium) ಸುಮಾರು 45 ಕೋಟಿ ರೂಪಾಯಿಗಳ ಆರ್ಥಿಕ ನಷ್ಟವಾಗಿದೆ ಎಂದು ವರದಿಗಳು ತಿಳಿಸಿವೆ. ಜೂನ್ 11 ರಿಂದ 15 ರವರೆಗೆ ಲಂಡನ್‌ನ(Lord's Cricket Ground) ಲಾರ್ಡ್ಸ್‌ನಲ್ಲಿ ನಡೆಯಲಿರುವ ಈ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಭಾರತದ ಅನುಪಸ್ಥಿತಿಯಿಂದಾಗಿ ಲಾರ್ಡ್ಸ್‌ನ ನಿರ್ವಾಹಕರು, ಭಾರೀ ಆದಾಯ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ಆವೃತ್ತಿಯಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಆಸೀಸ್ ಮತ್ತು ಕಿವೀಸ್ ವಿರುದ್ಧದ ಸೋಲಿನಿಂದ ಭಾರತ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಭಾರತ ಭಾಗವಹಿಸುವ ಪಂದ್ಯಗಳು ವಿಶ್ವದಾದ್ಯಂತ ದೊಡ್ಡ ಪ್ರೇಕ್ಷಕರನ್ನು ಸೆಳೆಯುತ್ತವೆ ಮತ್ತು ಟಿಕೆಟ್‌ಗಳಿಗೆ ಭಾರೀ ಬೇಡಿಕೆ ಇರುತ್ತದೆ. ಆದರೆ, ಭಾರತದ ಅರ್ಹತೆ ವಿಫಲವಾದ ಕಾರಣ, ಲಾರ್ಡ್ಸ್‌ಗೆ ಸುಮಾರು 4 ಮಿಲಿಯನ್ ಪೌಂಡ್‌ಗಳ (ಅಂದಾಜು 45 ಕೋಟಿ ರೂ.) ಆದಾಯ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಭಾರತದ ಅನುಪಸ್ಥಿತಿಯಿಂದ ಈ ಪಂದ್ಯದ ಜಾಗತಿಕ ಆಕರ್ಷಣೆ ಮತ್ತು ಆದಾಯದಲ್ಲಿ ಕೊರತೆ ಉಂಟಾಗಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿಗೆ ಫೈನಲ್ ಆಡುತ್ತಿದೆ. ಆಸೀಸ್ ತಂಡ ಕಳೆದ ಬಾರಿ ಭಾರತವನ್ನು ಸೋಲಿಸಿ ಚೊಚ್ಚಲ ಕಪ್ ಎತ್ತಿ ಹಿಡಿದ್ದಿತ್ತು.
ಇದನ್ನೂ ಓದಿ IND vs NZ Finla: ಚಾಂಪಿಯನ್ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?
ಭಾರತ- ಪಾಕ್ ನಡುವಿನ ಪಂದ್ಯ ಎಂದರೆ ಇದು ಕಾಸಿನ ಲೆಕ್ಕಾಚಾರ !. ಜಾಹೀರಾತು ಕಂಪನಿಗಳಿಂದ ಬಿಸಿಸಿಐ, ಪಿಸಿಬಿ ಮತ್ತು ಐಸಿಸಿಗಳಿಗೆ ಹಣ ಹೊಳೆಯೇ ಹರಿದುಹೋಗುತ್ತದೆ. ಈ ಒಂದು ಪಂದ್ಯ ಮುಗಿಯುವಾಗ ಟಿ.ವಿ ವಾಹಿನಿಯ ಆದಾಯ, ಕನಿಷ್ಠ 1 ಗಂಟೆಗೆ 120 ಕೋಟಿ ರೂ. ದಾಟಿರುತ್ತದೆ. ಇನ್ನು ಪಂದ್ಯ ಪೂರ್ವ, ಪಂದ್ಯಾನಂತರದ ಪ್ರಸಾರಗಳನ್ನು ಲೆಕ್ಕಾಚಾರ ಮಾಡಿದರೆ, ಹಣದ ಹೊಳೆಯೇ ಹರಿಯುತ್ತದೆ.