ನ್ಯೂಜಿಲೆಂಡ್ಗೆ ದೊಡ್ಡ ಹಿನ್ನಡೆ; ಟಿ20 ಸರಣಿಯಿಂದ ಹೊರಬಿದ್ದ ಸ್ಟಾರ್ ಆಟಗಾರ
Lockie Ferguson: ಹೆನ್ರಿ ಅವರ ಬಲಗಾಲಿನ ತೊಡೆಯ ಸ್ನಾಯುವಿನಲ್ಲಿಯೂ (quadricep) ಇದೇ ರೀತಿಯ ಗಾಯವಾಗಿದೆ. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಪ್ರಕಾರ, ಫರ್ಗುಸನ್ ಚೇತರಿಸಿಕೊಳ್ಳಲು ಇನ್ನೂ ಸುಮಾರು ಒಂದು ವಾರ ಬೇಕಾಗಬಹುದು ಮತ್ತು ಹೆನ್ರಿ ಅವರು ಒಂದು ಅಥವಾ ಎರಡು ವಾರಗಳ ಕಾಲ ಆಟದಿಂದ ದೂರ ಉಳಿಯಬೇಕಾಗಬಹುದು.
Lockie Ferguson and Matt Henry -
ವೆಲ್ಲಿಂಗ್ಟನ್, ಅ.29: ಭಾರತದ ವಿರುದ್ಧದ ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ವೇಗದ ಬೌಲರ್ ಲಾಕಿ ಫರ್ಗುಸನ್ ಗಾಯದ ಕಾರಣದಿಂದಾಗಿ ಸರಣಿಯ ಉಳಿದ ಭಾಗದಿಂದ ಹೊರಗುಳಿದಿದ್ದು, ಅವರ ಬದಲಿಗೆ ಮ್ಯಾಟ್ ಫಿಶರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಹ್ಯಾಗ್ಲಿ ಓವಲ್ನಲ್ಲಿ ನಡೆದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದ ವೇಳೆ ಫರ್ಗುಸನ್ ಅವರ ಬಲಗಾಲಿನ ಕೆಳಭಾಗದ ಸ್ನಾಯುವಿಗೆ (calf) ಗಾಯವಾಗಿದೆ. ಸ್ಕ್ಯಾನ್ಗಳ ಮೂಲಕ ಇದೊಂದು ಸಣ್ಣ ಮಟ್ಟದ ಸ್ನಾಯು ಹಾನಿ (low-grade tear) ಎಂದು ದೃಢಪಟ್ಟಿದೆ. ಅವರು ಮತ್ತೆ ಆಟಕ್ಕೆ ಮರಳಲು ಇನ್ನೂ ಸುಮಾರು ಒಂದು ವಾರಗಳ ಕಾಲ ಚೇತರಿಕೆಯ ಅಗತ್ಯವಿರಬಹುದು ಎಂದು ನ್ಯೂಜಿಲೆಂಡ್ ಕ್ರಿಕೆಟ್ ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಹೆನ್ರಿ ಅವರ ಬಲಗಾಲಿನ ತೊಡೆಯ ಸ್ನಾಯುವಿನಲ್ಲಿಯೂ (quadricep) ಇದೇ ರೀತಿಯ ಗಾಯವಾಗಿದೆ. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಪ್ರಕಾರ, ಫರ್ಗುಸನ್ ಚೇತರಿಸಿಕೊಳ್ಳಲು ಇನ್ನೂ ಸುಮಾರು ಒಂದು ವಾರ ಬೇಕಾಗಬಹುದು ಮತ್ತು ಹೆನ್ರಿ ಅವರು ಒಂದು ಅಥವಾ ಎರಡು ವಾರಗಳ ಕಾಲ ಆಟದಿಂದ ದೂರ ಉಳಿಯಬೇಕಾಗಬಹುದು.
ಡಬ್ಲ್ಯುಪಿಎಲ್ ಮಿನಿ ಹರಾಜಿನಲ್ಲಿ ಹೊಸ ದಾಖಲೆ ಬರೆದ 15 ವರ್ಷದ ಕನ್ನಡತಿ ಉಮಾ ಯಾರು?
ಈ ಸರಣಿಯುದ್ದಕ್ಕೂ ನ್ಯೂಜಿಲೆಂಡ್ನ ವೇಗದ ಬೌಲಿಂಗ್ ದಾಳಿಯು ಭಾರತದ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ನಿಯಂತ್ರಿಸಲು ಪರದಾಡುತ್ತಿರುವ ಹೊತ್ತಿನಲ್ಲೇ, ಅವರಿಗೆ ಮತ್ತೊಂದು ಹಿನ್ನಡೆಯುಂಟಾಗಿದೆ. ಭಾರತ ಈಗಾಗಲೇ 3-0 ಅಂತರದ ಅಜೇಯ ಮುನ್ನಡೆಯನ್ನು ಸಾಧಿಸಿದ್ದು, ಆಡಿದ ಮೂರೂ ಪಂದ್ಯಗಳಲ್ಲಿ ಭಾರತೀಯ ಬ್ಯಾಟರ್ಗಳು ಆತಿಥೇಯ ತಂಡದ ಬೌಲಿಂಗ್ ಅನ್ನು ಸುಲಭವಾಗಿ ಎದುರಿಸಿದ್ದಾರೆ. ವೇಗದ ಬೌಲಿಂಗ್ ವಿಭಾಗವು ಒತ್ತಡಕ್ಕೆ ಸಿಲುಕಿದ್ದರೂ, ನ್ಯೂಜಿಲೆಂಡ್ನ ಸ್ಪಿನ್ನರ್ಗಳಾದ ಮಿಚೆಲ್ ಸ್ಯಾಂಟ್ನರ್ ಮತ್ತು ಮೈಕೆಲ್ ಬ್ರೇಸ್ವೆಲ್ ಈ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ.
ಮೊದಲ ಮೂರು ಪಂದ್ಯಗಳಲ್ಲಿ ಭಾರತವು ಕ್ರಮವಾಗಿ 226, 181 ಮತ್ತು 199 ರನ್ಗಳ ಗುರಿಗಳನ್ನು ಬೆನ್ನಟ್ಟಿ, ತಲಾ ನಾಲ್ಕು, ಮತ್ತು ಆರು ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತ್ತು. ಈಗ ಆಟಗಾರರಿಗೆ ಆಗಿರುವ ಗಾಯಗಳು ನ್ಯೂಜಿಲೆಂಡ್ನ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿವೆ.