Asian Games 2026: ಭಾರತ ರಿಲೇ ತಂಡಗಳಿಗೆ ಕಂಚಿನ ಪದಕ, ಗುಲ್ವೀರ್ ಸಿಂಗ್‌ಗೆ ಹ್ಯಾಟ್ರಿಕ್ ಪದಕ!
2026ರ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ, ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಮಿಶ್ರ 4x100 ಮೀಟರ್ ಮತ್ತು ಪುರುಷರ 4x400 ಮೀಟರ್ ರಿಲೇ ತಂಡಗಳು ತಲಾ ಕಂಚಿನ ಪದಕಗಳನ್ನು ಗೆದ್ದಿವೆ. ಇದೇ ವೇಳೆ ಗುಲ್ವೀರ್ ಸಿಂಗ್ 5000 ಮೀಟರ್‌ನಲ್ಲಿ ಕಂಚು ಗೆದ್ದು ಕ್ರೀಡಾಕೂಟದಲ್ಲಿ ತಮ್ಮ ಹ್ಯಾಟ್ರಿಕ್ ಪದಕಗಳನ್ನು ದಾಖಲಿಸಿದ್ದಾರೆ.
ಭಾರತ ಪುರುಷರ ಹಾಗೂ ಮಿಶ್ರ ತಂಡಗಳಿಗೆ ತಲಾ ಕಂಚಿನ ಪದಕಗಳು. -
ನಗೋಯಾ: ಇಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ (Asian Games 2026) ಭಾರತದ ಅಥ್ಲೆಟಿಕ್ಸ್ ತಂಡ ಎರಡು ಕಂಚಿನ ಪದಕಗಳನ್ನು ಗೆದ್ದಿವೆ. ಭಾರತದ ಮಿಶ್ರ 4x100 ಮೀಟರ್ ಹಾಗೂ ಪುರುಷರ 4x400 ರಿಲೇ ತಂಡಗಳು ಮೂರನೇ ಸ್ಥಾನಗಳನ್ನು ಪಡೆಯುವ ಮೂಲಕ ಕಂಚಿನ ಪದಕಗಳನ್ನು ಗೆದ್ದಿವೆ. ಭಾರತದ ಮಹಿಳಾ 4x400 ರಿಲೇ ತಂಡ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದ ಕೆಲವೇ ನಿಮಿಷಗಳಲ್ಲಿ ಭಾರತಕ್ಕೆ ರಿಲೇ ವಿಭಾಗದಿಂದ ಎರಡು ಕಂಚಿನ ಪದಕಗಳು ಸೇರ್ಪಡೆಯಾಗಿವೆ.
ಗುರುಂದರ್ವೀರ್ ಸಿಂಗ್, ಸ್ನೇಹ ಶಾನುಭಾಲಿ, ಅನಿಮೇಶ್ ಕುಜೂರ್ ಹಾಗೂ ಹರಿತಾ ಭದ್ರಾ ಅವರನ್ನೊಳಗೊಂಡ ಭಾರತ ಮಿಶ್ರ ರಿಲೇ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಮಳೆಬಾಧಿತ ಫೈನಲ್‌ನಲ್ಲಿ ಭಾರತ 41.06 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ಮೂರನೇ ಸ್ಥಾನ ಪಡೆಯಿತು. ಧರ್ಮವೀರ್ ಚೌಧರಿ, ಮನು ಟಿ ಜಯಕುಮಾರ್ ಮತ್ತು ವಿಶಾಲ್ ಟಿ.ಕೆ. ಅವರನ್ನೊಳಗೊಂಡ ಭಾರತ ಪುರುಷರ ರಿಲೇ ತಂಡ 3:01.61 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.
Asian Games 2026: ಭಾರತ 4x400ಮೀ ಮಹಿಳಾ ರಿಲೇ ತಂಡಕ್ಕೆ ಚಿನ್ನದ ಪದಕ!
ಈ ಪ್ರದರ್ಶನದೊಂದಿಗೆ ಭಾರತ, ಮಿಶ್ರ 4x100 ಮೀಟರ್ ರಿಲೇಯಲ್ಲಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಸುಧಾರಿಸಿದೆ. ಇದಕ್ಕೂ ಮೊದಲು 2026ರ ವರ್ಲ್ಡ್ ರಿಲೇಸ್‌ನಲ್ಲಿ ಭಾರತ 41.35 ಸೆಕೆಂಡ್‌ಗಳ ಸಮಯ ದಾಖಲಿಸಿತ್ತು. ಇದೀಗ 41.06 ಸೆಕೆಂಡ್‌ಗಳಲ್ಲಿ ಓಡುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಚೀನಾ 40.78 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದರೆ, ಥಾಯ್ಲೆಂಡ್ 40.87 ಸೆಕೆಂಡ್‌ಗಳೊಂದಿಗೆ ಬೆಳ್ಳಿ ಪದಕ ಪಡೆದಿದೆ. ಸಿಂಗಾಪುರ ನಾಲ್ಕನೇ ಸ್ಥಾನ ಪಡೆದಿದ್ದು, ಜಪಾನ್ ಐದನೇ ಸ್ಥಾನದಲ್ಲಿತ್ತು.
A Gold and two Bronze medals for India from our KIITians at the Asian Games in Japan today! I am so happy to see my lovable KIITians Kiran Pahal, M. R. Poovamma, Prachi Choudhary and Vithya Ramraj win the women’s 4×400m relay in 3:29.69. It is India’s first and, so far, only Gold… pic.twitter.com/w1asWDqy1u
— Achyuta Samanta (@achyuta_samanta) September 29, 2026
ಚೀನಾ ಪುರುಷರ ತಂಡಕ್ಕೆ ಚಿನ್ನದ ಪದಕ
ಪುರುಷರ 4x400 ಮೀಟರ್ ರಿಲೇ ಫೈನಲ್ ಅತ್ಯಂತ ಪೈಪೋಟಿಯಿಂದ ಕೂಡಿತ್ತು. ಅಗ್ರ ಮೂರು ತಂಡಗಳ ನಡುವಿನ ಅಂತರ ಒಂದು ಸೆಕೆಂಡ್‌ಗಿಂತಲೂ ಕಡಿಮೆ ಇತ್ತು. ಜಪಾನ್ 3:00.75 ನಿಮಿಷಗಳಲ್ಲಿ ಓಟ ಮುಗಿಸಿ ಚಿನ್ನದ ಪದಕ ಗೆದ್ದರೆ, ಕತಾರ್ 3:00.93 ಸಮಯದೊಂದಿಗೆ ಬೆಳ್ಳಿ ಪದಕ ಪಡೆಯಿತು. ಭಾರತ 3:01.61 ಸಮಯದೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
ಭಾರತದ ತಂಡಕ್ಕೆ ಕೊನೆಯ ಹಂತದಲ್ಲಿ ವಿಶಾಲ್ ಟಿಕೆ ಪ್ರಮುಖ ಪಾತ್ರ ವಹಿಸಿದರು. ಆಂಕರ್ ಲೆಗ್‌ನಲ್ಲಿ ಓಡಿದ ವಿಶಾಲ್, ಥಾಯ್ಲೆಂಡ್‌ನ ಜೋಶುವಾ ಅಟ್ಕಿನ್ಸನ್ ಅವರ ಸವಾಲನ್ನು ಹಿಂದಿಕ್ಕಿ ಭಾರತಕ್ಕೆ ಮೂರನೇ ಸ್ಥಾನ ಖಚಿತಪಡಿಸಿದರು. ಈ ಮೂಲಕ ಭಾರತ ಪೋಡಿಯಂ ಸ್ಥಾನವನ್ನು ಉಳಿಸಿಕೊಂಡಿತು.
A proud moment for Indian athletics as the men’s 4×400m relay quartet secures a Bronze medal at the Asian Games 2026.
— Rajnath Singh (@rajnathsingh) September 29, 2026
Congratulations to Dharmveer Choudhary, Manu Thekkinalil, Vishal Thennarasu, and Jay Kumar. Their speed, discipline and seamless teamwork have brought great… pic.twitter.com/YuGIkdHJhd
ಈ ಪದಕ ಭಾರತಕ್ಕೆ ವಿಶೇಷವಾಗಿರುವುದಕ್ಕೆ ಮತ್ತೊಂದು ಕಾರಣವಿದೆ. 2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಗೆದ್ದಿತ್ತು. ಹೀಗಾಗಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಭಾರತ ಈ ಬಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.
Asian Games 2026: 5000 ಮೀಟರ್ ಓಟದಲ್ಲಿ ಕಂಚು, ಗುಲ್ವೀರ್ ಸಿಂಗ್ ಹ್ಯಾಟ್ರಿಕ್ ಸಾಧನೆ!
ಗುಲ್ವೀರ್ ಸಿಂಗ್‌ಗೆ ಹ್ಯಾಟ್ರಿಕ್ ಪದಕ ಸಾಧನೆ
ಭಾರತದ ಓಟಗಾರ ಗುಲ್ವೀರ್ ಸಿಂಗ್ 2026ರ ಏಷ್ಯಾ ಕ್ರೀಡಾಕೂಟದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಂಗಳವಾರ ನಡೆದಿದ್ದ ಪುರುಷರ 5000 ಮೀಟರ್ ಓಟದ ಫೈನಲ್‌ನಲ್ಲಿ 13:32.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಈ ಕ್ರೀಡಾಕೂಟದಲ್ಲಿ ಅವರ ಪದಕಗಳ ಸಂಖ್ಯೆ ಮೂರಕ್ಕೆ ಏರಿದ್ದು, ಹ್ಯಾಟ್ರಿಕ್ ಪದಕಗಳ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಇವರು 10,000 ಮೀಟರ್ ಹಾಗೂ 1500 ಮೀಟರ್ ಓಟದಲ್ಲಿ ತಲಾ ಬೆಳ್ಳಿ ಪದಕಗಳನ್ನು ಗೆದ್ದಿದ್ದರು.