PBKS vs MI Qualifier 2: ಪಂದ್ಯಕ್ಕೆ ಮಳೆ ಅಡ್ಡಿ; ರದ್ದಾದರೆ ಪಂಜಾಬ್ ಫೈನಲ್‌ಗೆ
ದಕ್ಷಿಣ ಭಾರತದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಜೂನ್ 3 ರಂದು ನಡೆಯುವ ಫೈನಲ್ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಫೈನಲ್ ಪಂದ್ಯಕ್ಕೆ ಮೀಸಲು ದಿನ ಇರುವ ಕಾರಣ ಪಂದ್ಯ ಪೂರ್ಣಗೊಳ್ಳುವ ಸಾಧ್ಯತೆ ಅಧಿಕ.


ಅಮಮದಾಬಾದ್: ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್(PBKS vs MI Qualifier 2) ನಡುವಣ ಹೈವೋಲ್ಟೇಜ್ ಐಪಿಎಲ್ ಕ್ವಾಲಿಫೈಯರ್-2(IPL 2025 Qualifier 2) ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಪಡಿಸಿದ್ದು ಪಂದ್ಯ ಆರಂಭ ವಿಳಂಬಗೊಂಡಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದೆ. ಆದರೆ ಪಂದ್ಯ ಆರಂಭಕ್ಕೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಇರುವಾಗ ಮಳೆ ಸುರಿಯಲಾರಂಭಿಸಿತು. ಸದ್ಯ ಮಳೆಯಾಗುತ್ತಿದ್ದು ಪಂದ್ಯ ನಡೆಯುವುದೇ ಅನುಮಾನ ಎನ್ನುವಂತಿದೆ. ಈ ಪಂದ್ಯಕ್ಕೆ ಮೀಸಲು ದಿನ ಇರದಿದ್ದರೂ ಕೂಡ ಎರಡು ಗಂಟೆ ಹೆಚ್ಚುವರಿ ಸಮಯ ಮೀಸಲಿದೆ.
ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಮುಂಬೈ ಇಂಡಿಯನ್ಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಹೊರಬೀಳಲಿದೆ. ಕನಿಷ್ಠ 5 ಓವರ್‌ಗಳ ಪಂದ್ಯ ಅಥವಾ ಸೂಪರ್ ಓವರ್ ಕೂಡ ನಡೆಯದಿದ್ದರೆ, ಆಗ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದ ತಂಡ ಮುನ್ನಡೆಯಲಿದೆ. ಈ ಲಾಭ ಪಂಜಾಬ್ ತಂಡಕ್ಕೆ ಸಿಗಲಿದೆ. ಕಾರಣ ಅಯ್ಯರ್ ಪಡೆ ಅಗ್ರಸ್ಥಾನಿಯಾಗಿತ್ತು. ಮುಂಬೈ ನಾಲ್ಕನೇ ಸ್ಥಾನ ಪಡೆದಿತ್ತು. ಶನಿವಾರವೇ ಅಹಮದಾಬಾದ್‌ನಲ್ಲಿ ಮಳೆಯಾಗಿದ್ದು ಉಭಯ ತಂಡಗಳ ಅಭ್ಯಾಸಕ್ಕೆ ಅಡ್ಡಿಪಡಿಸಿತ್ತು.
ಇದನ್ನೂ ಓದಿ IPL 2025 final: ಐಪಿಎಲ್ ಫೈನಲ್ ಪಂದ್ಯದ ಆಹ್ವಾನ ತಿರಸ್ಕರಿಸಿದ ಮೂರು ಸೇನಾ ಮುಖ್ಯಸ್ಥರು!
ಪಂಜಾಬ್ ಈ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿತು. ಯಜುವೇಂದ್ರ ಚಹಲ್ ಮತ್ತೆ ತಂಡಕ್ಕೆ ಆಗಮಿಸಿದರು. ಮುಂಬೈ ಗ್ಲೀಸನ್ ಬದಲಿಗೆ ರೀಸ್ ಟಾಪ್ಲಿಗೆ ಅವಕಾಶ ನೀಡಿದೆ.
ಉಭಯ ತಂಡಗಳು
ಮುಂಬೈ: ರೋಹಿತ್ ಶರ್ಮಾ, ಜಾನಿ ಬೈರ್‌ಸ್ಟೋವ್ (ವಿ.ಕೀ.), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ರಾಜ್ ಬಾವಾ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ರೀಸ್ ಟಾಪ್ಲೆ.
ಪಂಜಾಬ್: ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿ.ಕೀ.), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಒಮರ್ಜಾಯ್, ಕೈಲ್ ಜೇಮಿಸನ್, ವಿಜಯ್‌ಕುಮಾರ್ ವೈಶಾಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.
ಫೈನಲ್ ಪಂದ್ಯಕ್ಕೂ ಮಳೆ ಭೀತಿ
ದಕ್ಷಿಣ ಭಾರತದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಜೂನ್ 3 ರಂದು ನಡೆಯುವ ಫೈನಲ್ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಫೈನಲ್ ಪಂದ್ಯಕ್ಕೆ ಮೀಸಲು ದಿನ ಇರುವ ಕಾರಣ ಪಂದ್ಯ ಪೂರ್ಣಗೊಳ್ಳುವ ಸಾಧ್ಯತೆ ಅಧಿಕ.