ದಿಗ್ಗಜ ಆಟಗಾರನಾದರೂ ಕ್ರೀಡಾಸ್ಫೂರ್ತಿ ಮರೆತ ವಿರಾಟ್ ಕೊಹ್ಲಿ; ನೆಟ್ಟಿಗರ ಟೀಕೆ
SRH vs RCB: ಎಸ್‌ಆರ್‌ಎಚ್ ಇನಿಂಗ್ಸ್ ವೇಳೆ ಟ್ರಾವಿಸ್ ಹೆಡ್ 26 ರನ್ ಗಳಿಸಿ ರಾಸಿಖ್ ಸಲಾಮ್ ದಾರ್ ಅವರ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್ ಮುಂದೆಯೇ ಅತ್ಯಂತ ಆಕ್ರಮಣಕಾರಿಯಾಗಿ ಕಿರುಚಾಡಿ ಸಂಭ್ರಮಿಸಿದ್ದರು. ಕೊಹ್ಲಿ ವಿಕೆಟ್ ಪತನ ಬಳಿಕ ಹೆಡ್ ಕೂಡ ಕೊಹ್ಲಿಯನ್ನು ಕೆಣಕ್ಕಿದ್ದರು. ಇದರಿಂದ ಕೊಹ್ಲಿ ತೀವ್ರ ಅಸಮಾಧಾನಗೊಂಡರು. ಹೀಗಾಗಿ ಅವರು ಪಂದ್ಯದ ಬಳಿಕ ಹೆಡ್‌ಗೆ ಹ್ಯಾಂಡ್‌ಶೇಕ್ ನಿರಾಕರಣೆ ಮಾಡಿದರು.
Virat Kohli ignored the post-match handshake with Travis Head -
ಹೈದರಾಬಾದ್, ಮೇ 23: ಶುಕ್ರವಾರ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಐಪಿಎಲ್ 2026(IPL 2026) ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕ್ರೀಡಾಸ್ಫೂರ್ತಿ ಮರೆತ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೊಹ್ಲಿಯ ಈ ನಡೆಗೆ ಟೀಕೆಗಳು ವ್ಯಕ್ತವಾಗಿದೆ.
ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಜತೆಗಿನ ಸಾಂಪ್ರದಾಯಿಕ ಹ್ಯಾಂಡ್‌ಶೇಕ್ ಅನ್ನು ಕೊಹ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದನ್ನು ತೋರಿಸುವ ವೈರಲ್ ಕ್ಲಿಪ್ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಕೊಹ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರೊಂದಿಗೆ ಹೃತ್ಪೂರ್ವಕವಾಗಿ ಹಸ್ತಲಾಘವ ಮಾಡಿದರೂ, ಹೆಡ್ ಅವರಿಗೆ ಹ್ಯಾಂಡ್‌ಶೇಕ್ ನಿರಾರಿಸಿದರು.
Virat Kohli didn’t shake hands with Travis Head after the match ended. pic.twitter.com/74UEXm1aUV
— Cricketopia (@CricketopiaCom) May 22, 2026
ಎಸ್‌ಆರ್‌ಎಚ್ ಇನಿಂಗ್ಸ್ ವೇಳೆ ಟ್ರಾವಿಸ್ ಹೆಡ್ 26 ರನ್ ಗಳಿಸಿ ರಾಸಿಖ್ ಸಲಾಮ್ ದಾರ್ ಅವರ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್ ಮುಂದೆಯೇ ಅತ್ಯಂತ ಆಕ್ರಮಣಕಾರಿಯಾಗಿ ಕಿರುಚಾಡಿ ಸಂಭ್ರಮಿಸಿದ್ದರು. ಕೊಹ್ಲಿ ವಿಕೆಟ್ ಪತನ ಬಳಿಕ ಹೆಡ್ ಕೂಡ ಕೊಹ್ಲಿಯನ್ನು ಕೆಣಕ್ಕಿದ್ದರು. ಇದರಿಂದ ಕೊಹ್ಲಿ ತೀವ್ರ ಅಸಮಾಧಾನಗೊಂಡರು. ಹೀಗಾಗಿ ಅವರು ಪಂದ್ಯದ ಬಳಿಕ ಹೆಡ್‌ಗೆ ಹ್ಯಾಂಡ್‌ಶೇಕ್ ನಿರಾಕರಣೆ ಮಾಡಿದರು.
ಹೈದರಾಬಾದ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 55 ರನ್‌ಗಳಿಂದ ಹೀನಾಯವಾಗಿ ಸೋತ ಹೊರತಾಗಿಯೂ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಈ ಬಾರಿ ಐಪಿಎಲ್‌ನಲ್ಲಿ ಕ್ವಾಲಿಫೈಯರ್-1 ಪ್ರವೇಶಿಸಿದೆ. 256 ರನ್‌ಗಳ ಬೃಹತ್ ಗುರಿ ಪಡೆದಿದ್ದ ಆರ್‌ಸಿಬಿಯು, ಅಗ್ರಸ್ಥಾನದಲ್ಲೇ ಉಳಿಯಲು 166 ರನ್ ಗಳಿಸಬೇಕಿತ್ತು. ತಂಡ 4 ವಿಕೆಟ್‌ಗೆ 200 ರನ್ ಸಿಡಿಸಿ ನಂ.1 ಸ್ಥಾನ ಉಳಿಸಿಕೊಂಡಿತು. ಗುಜರಾತ್ ಟೈಟಾನ್ಸ್ 2ನೇ, ಸನ್‌ರೈಸರ್ಸ್ 3ನೇ ಸ್ಥಾನ ಪಡೆಯಿತು.
IPL 2026: ಸನ್‌ರೈಸರ್ಸ್ ಎದುರು ಸೋತರೂ ಅಗ್ರ ಸ್ಥಾನವನ್ನು ಉಳಿಸಿಕೊಂಡ ಆರ್‌ಸಿಬಿ!
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಆರ್‌ಸಿಬಿ ಹಾಗೂ 2ನೇ ಸ್ಥಾನ ಪಡೆದ ಗುಜರಾತ್ ತಂಡಗಳು ಮೇ 26ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಕ್ವಾಲಿಫೈಯರ್-1 ಪಂದ್ಯದಲ್ಲಿ ಸೆಣಸಾಡಲಿವೆ. ಇದರಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸಲಿದ್ದು, ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. 3ನೇ ಸ್ಥಾನ ಪಡೆದಿರುವ ಸನ್‌ರೈಸರ್ಸ್, 4ನೇ ಸ್ಥಾನ ಪಡೆಯಲಿರುವ ತಂಡದ ವಿರುದ್ಧ ಮೇ 27ರಂದು ಎಲಿಮಿನೇಟರ್‌ನಲ್ಲಿ ಆಡಲಿದೆ.