ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧೋನಿಯ ಸಾರ್ವಕಾಲಿಕ ಐಪಿಎಲ್‌ ದಾಖಲೆ ಮುರಿದ ತೆವಾಟಿಯಾ

IPL 2026: ಆರನೇ ಓವರ್‌ನಲ್ಲಿ ತೆವಾಟಿಯಾ ಬ್ಯಾಟಿಂಗ್‌ಗೆ ಬಂದಾಗ ಗುಜರಾತ್‌ ತಂಡ 51/5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಆರ್‌ಸಬಿ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು ತಂಡದ ಮೊತ್ತವನ್ನು 150 ಗಡಿ ದಾಟಿಸಿ ಸೋಲಿನ ಅಂತರವನ್ನು ಕೊಂಚ ಮಟ್ಟಿಗೆ ತಗ್ಗಿಸಿದರು.

ಧೋನಿಯ ಸಾರ್ವಕಾಲಿಕ ಐಪಿಎಲ್‌ ದಾಖಲೆ ಮುರಿದ ತೆವಾಟಿಯಾ

Rahul Tewatia -

Abhilash BC
Abhilash BC May 27, 2026 1:32 PM

ಧರ್ಮಶಾಲಾ, ಮೇ 27: ಐಪಿಎಲ್ 2026ರ ಕ್ವಾಲಿಫೈಯರ್ 1(IPL 2026 Qualifier 1) ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs GT) ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಾಹುಲ್ ತೆವಾಟಿಯಾ(Rahul Tewatia) ಅವರು ಅರ್ಧಶತಕ ಬಾರಿಸುವ ಮೂಲಕ ದಿಗ್ಗಜ ಮಹೇಂದ್ರ ಸಿಂಗ್‌ ಧೋನಿ ಅವರ ಸಾರ್ವಕಾಲಿಕ ಐಪಿಎಲ್‌ ದಾಖಲೆಯೊಂದನ್ನು ಮುರಿದ್ದಾರೆ.

ಹಾಲಿ ಚಾಂಪಿಯನ್‌ ಆರ್‌ಸಿಬಿ ನೀಡಿದ 255 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ವೇಳೆ ಪಂದ್ಯ ಸೋತರೂ, ತೆವಾಟಿಯಾ ಏಕಾಂಗಿ ಬ್ಯಾಟಿಂಗ್‌ ಹೋರಾಟ ನಡೆಸಿ ನಾಲ್ಕು ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳನ್ನು ಒಳಗೊಂಡ ತಮ್ಮ ಹೋರಾಟದ ಇನಿಂಗ್ಸ್‌ನಲ್ಲಿ 43 ಎಸೆತಗಳಲ್ಲಿ 68 ರನ್ ಗಳಿಸಿದರು. ಈ ಮೂಲಕ ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ 7 ನೇ ಕ್ರಮಾಂಕ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತ್ಯಧಿಕ ಸ್ಕೋರ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಧೋನಿ ಹೆಸರಿನಲ್ಲಿತ್ತು. 2013ರ ಐಪಿಎಲ್ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 45 ಎಸೆತಗಳಲ್ಲಿ ಅಜೇಯ 63 ರನ್ ಗಳಿಸಿದ್ದರು.

ಐಪಿಎಲ್ ಪ್ಲೇಆಫ್‌ಗಳಲ್ಲಿ ಅತ್ಯಧಿಕ ಸ್ಕೋರ್‌ಗಳು (7ನೇ ಕ್ರಮಾಂಕ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್)

ರಾಹುಲ್ ಟೆವಾಟಿಯಾ- 2026 ರಲ್ಲಿ ಜಿಟಿ ವಿರುದ್ಧ 43 ಎಸೆತಗಳಲ್ಲಿ 68

ಎಂಎಸ್ ಧೋನಿ- 2013 ರಲ್ಲಿ ಮುಂಬೈ ವಿರುದ್ಧ 45 ಎಸೆತಗಳಲ್ಲಿ 63*

ಬ್ರಾಡ್ ಹಾಡ್ಜ್- 2013 ರಲ್ಲಿ ಎಸ್‌ಆರ್‌ಎಚ್ ವಿರುದ್ಧ 29 ಎಸೆತಗಳಲ್ಲಿ 54*

ಆಂಡ್ರೆ ರಸೆಲ್- 2018 ರಲ್ಲಿ ಆರ್‌ಆರ್ ವಿರುದ್ಧ 25 ಎಸೆತಗಳಲ್ಲಿ 49*

ಕಾರ್ಲೋಸ್ ಬ್ರಾಥ್‌ವೈಟ್- 2018 ರಲ್ಲಿ ಸಿಎಸ್‌ಕೆ ವಿರುದ್ಧ 29 ಎಸೆತಗಳಲ್ಲಿ 43*

ಆರನೇ ಓವರ್‌ನಲ್ಲಿ ತೆವಾಟಿಯಾ ಬ್ಯಾಟಿಂಗ್‌ಗೆ ಬಂದಾಗ ಗುಜರಾತ್‌ ತಂಡ 51/5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಆರ್‌ಸಬಿ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು ತಂಡದ ಮೊತ್ತವನ್ನು 150 ಗಡಿ ದಾಟಿಸಿ ಸೋಲಿನ ಅಂತರವನ್ನು ಕೊಂಚ ಮಟ್ಟಿಗೆ ತಗ್ಗಿಸಿದರು.

ಆರ್‌ಸಿಬಿ ಫೈನಲ್‌ ತಲುಪಿದ ಖುಷಿಯಲ್ಲಿ ಕೊಹ್ಲಿ-ವಿಲಿಯರ್ಸ್‌ ಪ್ರೀತಿಯ ಅಪ್ಪುಗೆ

ಆರ್‌ಸಿಬಿ ವಿರುದ್ಧ ಸೋತರೂ ಗುಜರಾತ್ ತಂಡಕ್ಕೆ ತನ್ನ ತವರು ಅಹಮದಾಬಾದಿನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆಡಲು ಇನ್ನೂ ಒಂದು ಅವಕಾಶ ಬಾಕಿ ಇದೆ. ಇದೇ 29ರಂದು ಮುಲ್ಲನಪುರದಲ್ಲಿ ನಡೆಯುವ ಎರಡನೇ ಕ್ವಾಲಿಫಯರ್‌ನಲ್ಲಿ ಆಡಲಿರುವ ತಂಡವು ಗೆದ್ದರೆ ಫೈನಲ್ ಪ್ರವೇಶಿಸಬಹುದು.