ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರ್‌ಸಿಬಿ ಫೈನಲ್‌ ತಲುಪಿದ ಖುಷಿಯಲ್ಲಿ ಕೊಹ್ಲಿ-ವಿಲಿಯರ್ಸ್‌ ಪ್ರೀತಿಯ ಅಪ್ಪುಗೆ

IPL 2026: ಆರ್‌ಸಿಬಿ ಪರ ಆಡುತ್ತಿದ್ದ ವೇಳೆ ಎಬಿಡಿ ಮತ್ತು ವಿರಾಟ್‌ ಕೊಹ್ಲಿ ಹಲವು ದಾಖಲೆಯ ಜತೆಯಾಟವನ್ನು ಬರೆದಿದ್ದರು. ಐಪಿಎಲ್‌ನಿಂದ ಎಬಿಡಿ ನಿವೃತ್ತಿಯಾದರೂ ಕೂಡ ಫ್ರಾಂಚೈಸಿ ಮತ್ತು ಕೊಹ್ಲಿ ಜತೆಗಿನ ಒಡನಾಟ ಮಾತ್ರ ಹಾಗೇ ಇದೆ. ತಂಡ ಕಳೆದ ಬಾರಿ ಚೊಚ್ಚಲ ಟ್ರೋಫಿ ಗೆದ್ದಗ ಎಬಿಡಿ ಕೂಡ ತಂಡದ ಜತೆ ಸಂಭ್ರಮಾಚರಣೆ ಮಾಡಿದ್ದರು.

ಆರ್‌ಸಿಬಿ ಫೈನಲ್‌ ತಲುಪಿದ ಖುಷಿಯಲ್ಲಿ ಕೊಹ್ಲಿ-ವಿಲಿಯರ್ಸ್‌ ಅಪ್ಪುಗೆ

Virat Kohli and de Villiers -

Abhilash BC
Abhilash BC May 27, 2026 10:56 AM

ಧರ್ಮಶಾಲಾ, ಮೇ 27: ಮಂಗಳವಾರ ರಾತ್ರಿ ಧರ್ಮಶಾಲಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಕ್ವಾಲಿಫೈಯರ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಮಾತ್ರವಲ್ಲದೆ ಪಂದ್ಯವೂ ಗೆಳೆಯರ ಸಮ್ಮಿಲನಕ್ಕೂ ಸಾಕ್ಷಿಯಾಯಿತು. ಫ್ರಾಂಚೈಸಿಯ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಮೈದಾನದಲ್ಲಿ ಭಾವನಾತ್ಮಕವಾಗಿ ಕಂಡು ಬಂದರು.

ಪಂದ್ಯದ ಮುಕ್ತಾಯದ ಬಳಿಕ ಗೆಳೆಯರಾದ ಎಬಿಡಿ ಮತ್ತು ಕೊಹ್ಲಿ ಪರಸ್ಪರ ಅಪ್ಪಿಕೊಳ್ಳುತ್ತಾ ಅತ್ಯಂತ ಆತ್ಮೀಯವಾಗಿ ಮಾತನಾಡಿದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆರ್‌ಸಿಬಿ ಅಭಿಮಾನಿಗಳು ಕೂಡ ಈ ದೃಶ್ಯವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಪರ ಆಡುತ್ತಿದ್ದ ವೇಳೆ ಎಬಿಡಿ ಮತ್ತು ವಿರಾಟ್‌ ಕೊಹ್ಲಿ ಹಲವು ದಾಖಲೆಯ ಜತೆಯಾಟವನ್ನು ಬರೆದಿದ್ದರು. ಐಪಿಎಲ್‌ನಿಂದ ಎಬಿಡಿ ನಿವೃತ್ತಿಯಾದರೂ ಕೂಡ ಫ್ರಾಂಚೈಸಿ ಮತ್ತು ಕೊಹ್ಲಿ ಜತೆಗಿನ ಒಡನಾಟ ಮಾತ್ರ ಹಾಗೇ ಇದೆ. ತಂಡ ಕಳೆದ ಬಾರಿ ಚೊಚ್ಚಲ ಟ್ರೋಫಿ ಗೆದ್ದಗ ಎಬಿಡಿ ಕೂಡ ತಂಡದ ಜತೆ ಸಂಭ್ರಮಾಚರಣೆ ಮಾಡಿದ್ದರು.



ಒಬ್ಬ ಅಭಿಮಾನಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಭಾವನೆಗಳನ್ನು ಸಂಕ್ಷಿಪ್ತವಾಗಿ ಹೇಳುತ್ತಾ, ಕೊಹ್ಲಿ ಮತ್ತು ಡಿವಿಲಿಯರ್ಸ್ ಅವರ ಪ್ರಯಾಣವು "2016 ರಲ್ಲಿ ಕಣ್ಣೀರಿನಿಂದ 2026 ರಲ್ಲಿ ಬೆಚ್ಚಗಿನ ಅಪ್ಪುಗೆಯವರೆಗೆ ಎಲ್ಲವನ್ನೂ ನೋಡಿದೆ" ಎಂದು ಬರೆದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ "ಎಬಿ ಟ್ರೋಫಿಯನ್ನು ಎತ್ತಲು ಮೊದಲು ಇರಲಿಲ್ಲ, ಆದರೆ ಅವರು ಈಗ ಪ್ರಶಸ್ತಿ ರಕ್ಷಣೆಗಾಗಿ ಇಲ್ಲಿದ್ದಾರೆ" ಎಂದು ಬರೆದಿದ್ದಾರೆ.

ಈ ಜೋಡಿಯ ಕೆಲವು ಮರೆಯಲಾಗದ ಜೊತೆಯಾಟ ನಡೆಸಿವೆ. ಅವುಗಳಲ್ಲಿ ಪ್ರಮುಖವಾದವು 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 229 ರನ್‌ಗಳ ಪಾಲುದಾರಿಕೆ ಮತ್ತು 2015 ರಲ್ಲಿ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 215 ರನ್‌ಗಳ ಅದ್ಭುತ ಜೊತೆಯಾಟ.

ರಜತ್‌ ಪಾಟೀದಾರ್‌ ಆರ್‌ಸಿಬಿಯ ನ್ಯೂ ಸೂಪರ್‌ಸ್ಟಾರ್‌; ಬದಲಿ ಆಟಗಾರನಾಗಿ ಬಂದು ತಂಡದ ದಿಸೆಯನ್ನೇ ಬದಲಿಸಿದ ನಾಯಕ

ಪಂದ್ಯ ಬಗ್ಗೆ ಹೇಳುವುದಾದರೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಾಯಕ ರಜತ್ ಪಾಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ಪಾಟಿದಾರ್ ಕೇವಲ 33 ಎಸೆತಗಳಲ್ಲಿ 93 ರನ್ ಸಿಡಿಸಿ ಎದುರಾಳಿ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದರು.ವಿರಾಟ್ ಕೊಹ್ಲಿ 43 ರನ್ ಹಾಗೂ ಕೃನಾಲ್ ಪಾಂಡ್ಯ 43 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಬಲ ತುಂಬಿದರು. ಕಠಿಣ ಗುರಿ ಬೆನ್ನಟ್ಟಿದ ಗುಜರಾತ್‌, 19.3 ಓವರ್ಗಳಲ್ಲಿ 162 ರನ್ ಗಳಿಸಿ ಆಲೌಟ್‌ ಆಯಿತು.