IPL 2026: ರಾಜಸ್ಥಾನ್ ವಿರುದ್ಧ ಸೋತರೂ ಚೆನ್ನೈ ಸೂಪರ್ ಕಿಂಗ್ಸ್ ದಾಖಲೆ ಸರಿಗಟ್ಟಿದ ಆರ್‌ಸಿಬಿ
RCB vs RR: ಬೃಹತ್ ಮೊತ್ತದ ಚೇಸಿಂಗ್ ವೇಳೆ ಆರ್‌ಸಿಬಿ ಬೌಲರ್‌ಗಳ ಬೆಂಡೆತ್ತಿದ ವೈಭವ್ ಸೂರ್ಯವಂಶಿ 15 ಎಸೆತಕ್ಕೆ ಅರ್ಧಶತಕ ಪೂರ್ತಿಗೊಳಿಸಿದರು. ಮತ್ತೊಂದು ಕಡೆ ಅಬ್ಬರಿಸುತ್ತಿದ್ದ ಧ್ರುವ್ ಜುರೆಲ್(43 ಎಸೆತಕ್ಕೆ ಔಟಾಗದೆ 81) ಕೊನೆವರೆಗೂ ಕ್ರೀಸ್‌ನಲ್ಲಿದ್ದು ತಂಡವನ್ನು ಗೆಲ್ಲಿಸಿದರು.
Royal Challengers Bengaluru -
ಗುವಾಹಟಿ, ಎ.11: ರಾಜಸ್ಥಾನ್ ರಾಯಲ್ಸ್(RCB vs RR) ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ(Royal Challengers Bengaluru) 6 ವಿಕೆಟ್ ಅಂತರ ಹೀನಾಯ ಸೋಲು ಕಂಡರೂ ಕೂಡ ಐಪಿಎಲ್‌ನಲ್ಲಿ ವಿಶೇಷ ದಾಖಲೆಯೊಂದನ್ನು ಸರಿಗಟ್ಟಿದೆ. ಪಂದ್ಯದಲ್ಲಿ 201 ರನ್ ಬಾರಿಸಿದ ಆರ್‌ಸಿಬಿ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಅತಿ ಹೆಚ್ಚು 200 ಕ್ಕೂ ಹೆಚ್ಚು ಮೊತ್ತಗಳ ದಾಖಲೆಯನ್ನು ಸರಿಗಟ್ಟಿತು.
ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ 256 ಐಪಿಎಲ್ ಪಂದ್ಯಗಳನ್ನು ಆಡಿ 37 ಬಾರಿ 200 ಪ್ಲಸ್ ರನ್‌ಗಳ ಗಡಿಯನ್ನು ದಾಟಿದೆ. ಆರ್‌ಸಿಬಿ 274 ಪಂದ್ಯಗಳಿಂದ 37 ಬಾರಿ 200 ರನ್‌ಗಳನ್ನು ಗಳಿಸಿ ಚೆನ್ನೈ ದಾಖಲೆಯನ್ನು ಸರಿಗಟ್ಟಿತು. ಐಪಿಎಲ್‌ನಲ್ಲಿ ಅತಿ ಹೆಚ್ಚು 200+ ಮೊತ್ತಗಳನ್ನು ಹೊಂದಿರುವ ತಂಡಗಳ ಪಟ್ಟಿಯಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ನಂತರ ಪಂಜಾಬ್ ಕಿಂಗ್ಸ್ (33), ಮುಂಬೈ ಇಂಡಿಯನ್ಸ್ (32) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (30) ಇವೆ.
ಟಿ20ಗಳಲ್ಲಿ ಅತಿ ಹೆಚ್ಚು 200+ ಸ್ಕೋರ್‌ಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ಭಾರತೀಯ ಪುರುಷರ ಕ್ರಿಕೆಟ್ ತಂಡ ಹೊಂದಿದೆ. ಮೆನ್ ಇನ್ ಬ್ಲೂ ತಂಡವು 20 ಓವರ್‌ಗಳ ಸ್ವರೂಪದಲ್ಲಿ ಇಲ್ಲಿಯವರೆಗೆ 50 ಬಾರಿ 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದೆ. ಅವರ ನಂತರ ಸಿಎಸ್‌ಕೆ ಮತ್ತು ಆರ್‌ಸಿಬಿ ಇವೆ. ಐಪಿಎಲ್‌ನಲ್ಲಿ 37 ಬಾರಿ 200+ ಸ್ಕೋರ್‌ಗಳ ಹೊರತಾಗಿ, ಸಿಎಸ್‌ಕೆ ಮತ್ತು ಆರ್‌ಸಿಬಿ ಚಾಂಪಿಯನ್ಸ್ ಲೀಗ್ ಟಿ20ಯಲ್ಲಿಯೂ ತಲಾ 3 ಬಾರಿ 200+ ಸ್ಕೋರ್ ಗಳಿಸಿವೆ.
ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ತಂಡ 8 ವಿಕೆಟ್‌ಗೆ 201 ರನ್ ಗಳಿಸಿತು. ಆದರೆ ವೈಭವ್, ಧ್ರುವ್ ಜುರೆಲ್ ಆರ್ಭಟದ ಮುಂದೆ ರಾಯಲ್ಸ್‌ಗೆ ಈ ಮೊತ್ತ ಸವಾಲಾಗಲೇ ಇಲ್ಲ. ತಂಡ 18 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು. 6 ವಿಕೆಟ್‌ನಿಂದ ಗೆದ್ದ ರಾಯಲ್ಸ್, ಸತತ 4ನೇ ಗೆಲುವಿನೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿತು.
125/7 to 2️⃣0️⃣1️⃣/8️⃣ with the bat 🫡
— Royal Challengers Bengaluru (@RCBTweets) April 10, 2026
129/1 in 8 to 1️⃣3️⃣7️⃣/4️⃣ in 10 with the ball 👏
Today was all about pushing back when our back was against the wall. We go again on Sunday. ❤️#PlayBold #ನಮ್ಮRCB #IPL2026 #RRvRCB pic.twitter.com/C4AWCgja5p
ಚೇಸಿಂಗ್ ವೇಳೆ ಆರ್‌ಸಿಬಿ ಬೌಲರ್‌ಗಳ ಬೆಂಡೆತ್ತಿದ ವೈಭವ್ ಸೂರ್ಯವಂಶಿ 15 ಎಸೆತಕ್ಕೆ ಅರ್ಧಶತಕ ಪೂರ್ತಿಗೊಳಿಸಿದರು. ಮತ್ತೊಂದು ಕಡೆ ಅಬ್ಬರಿಸುತ್ತಿದ್ದ ಧ್ರುವ್ ಜುರೆಲ್(43 ಎಸೆತಕ್ಕೆ ಔಟಾಗದೆ 81) ಕೊನೆವರೆಗೂ ಕ್ರೀಸ್‌ನಲ್ಲಿದ್ದು ತಂಡವನ್ನು ಗೆಲ್ಲಿಸಿದರು.
ಸಂಕ್ಷಿಪ್ತ ಸ್ಕೋರ್: ಆರ್‌ಸಿಬಿ 20 ಓವರ್‌ನಲ್ಲಿ 201/8 (ರಜತ್ 63, ಕೊಹ್ಲಿ 32, ರವಿ ಬಿಷ್ಣೋಯ್ 2-32), ರಾಜಸ್ಥಾನ 18 ಓವರ್‌ನಲ್ಲಿ 202/4 (ವೈಭವ್ 78, ಜುರೆಲ್ ಔಟಾಗದೆ 81, ಕೃನಾಲ್ 2-30).