ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB Sale: ಆರ್‌ಸಿಬಿ ಖರೀದಿಗೆ 6 ಸಂಸ್ಥೆಗಳ ಆಸಕ್ತಿ; ತಂಡ ಮಾರಾಟಕ್ಕೆ 2 ಬಿಲಿಯನ್‌ ಬೇಡಿಕೆ!

ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಸಂಸ್ಥೆಯು 2 ಬಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 17600 ಕೋಟಿ ರು.) ಕೇಳುತ್ತಿದೆ ಎಂದು ವರದಿಯಾಗಿದೆ. ಆದರೆ ಇಷ್ಟು ವರ್ಷ ಆರ್‌ಸಿಬಿ ಕಪ್‌ ಗೆದ್ದಿಲ್ಲ ಎನ್ನುವ ಕಾರಣಕ್ಕೆ ಅಭಿಮಾನಗಳಲ್ಲಿ ದೊಡ್ಡ ಮಟ್ಟದ ಕ್ರೇಜ್‌ ಇತ್ತು. ಈಗ ಕಪ್‌ ಗೆದ್ದಾಯಿತು. ವಿರಾಟ್‌ ಕೊಹ್ಲಿ ಸಹ ನಿವೃತ್ತಿ ಅಂಚಿನಲ್ಲಿದ್ದಾರೆ. ಹೀಗಾಗಿ ಕ್ರೇಜ್‌ ಕಡಿಮೆಯಾಗಲಿದೆ ಎನ್ನುವುದು ಕೆಲವರ ವಾದ.

ಆರ್‌ಸಿಬಿ ಖರೀದಿಗೆ ಪೂನಾವಾಲಾ, ಅದಾನಿ ಮಧ್ಯೆ ತೀವ್ರ ಪೈಪೋಟಿ ಸಾಧ್ಯತೆ

-

Abhilash BC Abhilash BC Oct 18, 2025 12:55 PM

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌(IPL) ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ(RCB) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರ ಸಾವು ಸಂಭವಿಸಿತ್ತು. ಈ ಘಟನೆ ಬಳಿಕ ವಿಶ್ವದ ಹಲವು ದುಬಾರಿ ಮದ್ಯ ಬ್ಯಾಂಡ್‌ಗಳ ಮಾಲಿಕ ಡಿಯಾಜಿಯೋ ಐಪಿಎಲ್ ತಂಡದ ಮಾಲಿಕತ್ವವನ್ನು ಉಳಿಸಿಕೊಳ್ಳುವ ಬಗ್ಗೆ ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ. ಫ್ರಾಂಚೈಸಿಯನ್ನು ಮಾರಾಟ(RCB Sale) ಮಾಡಲು ಮುಂದಾಗಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಖರೀದಿಗೆ ಒಟ್ಟು 6 ಸಂಸ್ಥೆಗಳು ಆಸಕ್ತಿ ತೋರಿದೆ ಎಂದು ಮಾಧ್ಯಮ ವೊಂದು ವರದಿ ಮಾಡಿದೆ.

ಇತ್ತೀಚೆಗಷ್ಟೇ ಸೀರಮ್ ಇನ್‌ಸ್ಟಿಟ್ಯೂಟ್‌ ಅದಾರ್ ಪೂನಾವಾಲಾ ಒಳ್ಳೆಯ ಮೊತ್ತಕ್ಕೆ ಸಿಕ್ಕರೆ ಆರ್‌ಸಿಬಿ ಖರೀದಿಗೆ ಸಿದ್ದ ಎನ್ನುವ ಅರ್ಥದಲ್ಲಿ ಮಾಡಿದ ಟ್ವೀಟ್ ಭಾರೀ ವೈರಲ್ ಆಗಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಶೇ.50 1 ರಷ್ಟು ಪಾಲುದಾರಿಕೆ ಹೊಂದಿರುವ ಜೆಎಸ್‌ ಡಬ್ಲ್ಯು ಸಮೂಹದ ಪಾರ್ಥ್ ಜಿಂದಾಲ್, ಅಮೆರಿಕದ ಎರಡು ಖಾಸಗಿ ಈಕ್ವಿಟಿ ಕಂಪನಿಗಳು ಆ‌ರ್‌ಸಿಬಿಯನ್ನು ಖರೀದಿಸಲು ಸಿದ್ಧವಿರುವುದಾಗಿ ಸುದ್ದಿಯಾಗಿದೆ.

ಇದನ್ನೂ ಓದಿ RCB up for sale: ಆರ್​ಸಿಬಿ ಖರೀದಿಗೆ ಮುಂದಾದ ಪೂನಾವಾಲ!

2010ರಲ್ಲಿ ಐಪಿಎಲ್ ತಂಡಗಳನ್ನು 12ಕ್ಕೆ ಹೆಚ್ಚಳ ಮಾಡುವ ಸಂದರ್ಭದಲ್ಲಿ ಅದಾರ್ ಪೂನಾವಾಲಾರ ತಂದೆ ಸೈರಸ್ ಟೆಂಡರ್ ಪ್ರತಿ ಪಡೆದಿದ್ದರು. ಆದರೆ ಆಗ ಸಹರಾ ಹಾಗೂ ರೆಂಡೆಜ್ವೊಸ್ ಸ್ಪೋರ್ಟ್ಸ್ ಮೇಲುಗೈ ಸಾಧಿಸಿತ್ತು. 2022ರಲ್ಲಿ ಅಹಮದಾಬಾದ್ ಫ್ರಾಂಚೈಸಿಯು ಸಣ್ಣ ಅಂತರದಲ್ಲಿ ಅದಾನಿ ಕೈತಪ್ಪಿತ್ತು. ಇದೀಗ ಆರ್‌ಸಿಬಿ ತಂಡ ಖದೀರಿಗೆ ಸಿಕ್ಕರೆ ಈ ಇಬ್ಬರು ಪೈಪೋಟಿಗೆ ಬೀಳುವ ಸಾಧ್ಯತೆ ಇದೆ.

ತಂಡ ಮಾರಾಟಕ್ಕೆ 2 ಬಿಲಿಯನ್‌ ಬೇಡಿಕೆ

ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಸಂಸ್ಥೆಯು 2 ಬಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 17600 ಕೋಟಿ ರು.) ಕೇಳುತ್ತಿದೆ ಎಂದು ವರದಿಯಾಗಿದೆ. ಆದರೆ ಇಷ್ಟು ವರ್ಷ ಆರ್‌ಸಿಬಿ ಕಪ್‌ ಗೆದ್ದಿಲ್ಲ ಎನ್ನುವ ಕಾರಣಕ್ಕೆ ಅಭಿಮಾನಗಳಲ್ಲಿ ದೊಡ್ಡ ಮಟ್ಟದ ಕ್ರೇಜ್‌ ಇತ್ತು. ಈಗ ಕಪ್‌ ಗೆದ್ದಾಯಿತು. ವಿರಾಟ್‌ ಕೊಹ್ಲಿ ಸಹ ನಿವೃತ್ತಿ ಅಂಚಿನಲ್ಲಿದ್ದಾರೆ. ಹೀಗಾಗಿ ಕ್ರೇಜ್‌ ಕಡಿಮೆಯಾಗಲಿದೆ ಎನ್ನುವುದು ಕೆಲವರ ವಾದ. ಹೀಗಾಗಿ ಇಷ್ಟು ಮೊತ್ತದ ಹಣ ಸಿಗುವುದು ಅನುಮಾನ.