IPL 2025: ಐಪಿಎಲ್ನಲ್ಲಿ ಅನಪೇಕ್ಷಿತ ದಾಖಲೆ ಬರೆದ ಆರ್‌ಸಿಬಿ
ತವರಿನಾಚೆ ಆಡಿದ ಮೂರು ಪಂದ್ಯಗಳಲ್ಲಿ ಅಮೋಘ ಗೆಲುವುಗಳನ್ನು ಸಾಧಿಸಿ 2025ರ ಐಪಿಎಲ್ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿರುವ ಆರ್‌ಸಿಬಿ ತವರಿನ ಪಂದ್ಯದಲ್ಲಿ ಎಡವುತ್ತಿದೆ. ಆಡಿದ ಎರಡು ಪಂದ್ಯಗಳಲ್ಲಿಯೂ ಸೋಲು ಕಂಡು ತವರಿನ ಅಭಿಮಾನಿಗಳಿಗೆ ನಿರಾಶೆ ಉಂಟುಮಾಡಿದೆ.


ಬೆಂಗಳೂರು: ಗುರುವಾರ ರಾತ್ರಿ ನಡೆದಿದ್ದ ಐಪಿಎಲ್(IPL 2025) ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಡೆಲ್ಲಿ ಕ್ಯಾಪಿಟಲ್ಸ್)RCB vs DC) ವಿರುದ್ಧ 6 ವಿಕೆಟ್ ಅಂತರದ ಸೋಲು ಕಾಣುವ ಮೂಲಕ ತವರಿನಲ್ಲಿ ಅತ್ಯಧಿಕ ಪಂದ್ಯ ಸೋತ ಮೊದಲ ತಂಡ ಎಂಬ ಅನಪೇಕ್ಷಿತ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಆರ್‌ಸಿಬಿ ತನ್ನ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಒಟ್ಟು 93 ಪಂದ್ಯಗಳಲ್ಲಿ 45 ಪಂದ್ಯ ಸೋತಿದ್ದು, 44ರಲ್ಲಿ ಗೆದ್ದಿದೆ. 4 ಪಂದ್ಯ ರದ್ದುಗೊಂಡಿವೆ.
ತವರಿನಲ್ಲಿ ಅತ್ಯಧಿಕ ಸೋಲು
ಆರ್‌ಸಿಬಿ- 45 ಸೋಲು
ಡೆಲ್ಲಿ ಕ್ಯಾಪಿಟಲ್ಸ್- 44 ಸೋಲು
ಕೆಕೆಆರ್- 38 ಸೋಲು
ಮುಂಬೈ- 34 ಸೋಲು
ಪಂಜಾಬ್- 30 ಸೋಲು
ತವರಿನಾಚೆ ಆಡಿದ ಮೂರು ಪಂದ್ಯಗಳಲ್ಲಿ ಅಮೋಘ ಗೆಲುವುಗಳನ್ನು ಸಾಧಿಸಿ 2025ರ ಐಪಿಎಲ್ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿರುವ ಆರ್‌ಸಿಬಿ ತವರಿನ ಪಂದ್ಯದಲ್ಲಿ ಎಡವುತ್ತಿದೆ. ಆಡಿದ ಎರಡು ಪಂದ್ಯಗಳಲ್ಲಿಯೂ ಸೋಲು ಕಂಡು ತವರಿನ ಅಭಿಮಾನಿಗಳಿಗೆ ನಿರಾಶೆ ಉಂಟುಮಾಡಿದೆ.
KL Rahul said, "Chinnaswamy Stadium is still my home"#KLRahul pic.twitter.com/gSTkBtszY8
— SteveNani49✨🤸 (@_eyesonTalkie_) April 10, 2025
ಚಿನ್ನಸ್ವಾಮಿ ಮೈದಾನದಲ್ಲಿ ಗುರುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಉತ್ತಮ ಆರಂಭದ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್‌ಗೆ 163 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ರಾಹುಲ್ ಅವರ ಅಜೇಯ ಅರ್ಧಶತಕದ ನೆರವಿನಿಂದ 17.5 ಓವರ್‌ಗಳಲ್ಲಿ 4 ವಿಕೆಟ್‌ಗೆ 169 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ IPL 2025 Points Table: ಗೆದ್ದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ವಿಫಲವಾದ ಡೆಲ್ಲಿ
ಚೇಸಿಂಗ್ ವೇಳೆ ಅಬ್ಬರದ ಬ್ಯಾಟಿಂಗ್ ನಡೆಸಿದ ಮನೆ ಮಗ ಕೆ.ಎಲ್ ರಾಹುಲ್, 53 ಎಸೆತಗಳಿಂದ ಅಜೇಯ 93 ರನ್ ಬಾರಿಸಿದರು. ಅವರ ಈ ಸೊಗಸಾದ ಬ್ಯಾಟಿಂಗ್‌ನಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿ ಸಿಡಿಯಿತು. ಟ್ರಿಸ್ಟನ್ ಸ್ಟಬ್ಸ್ 38 ರನ್‌ಗಳ ಕೊಡುಗೆ ನೀಡಿದರು.