ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಮಾಜವಾದಿ ಸಂಸದೆ ಜೊತೆ ಮದುವೆ; ಸಿಎಂ ಯೋಗಿ ಆದಿತ್ಯನಾಥ್‌ಗೆ ಆಹ್ವಾನ ನೀಡಿದ ರಿಂಕು ಸಿಂಗ್ ಕುಟುಂಬ

Rinku Singh-Priya Saroj wedding: ರಿಂಕು ವಿವಾಹಕ್ಕೆ ಮುನ್ನ ನ.19ರಿಂದ 29ರವರೆಗೆ ದೋಹಾದಲ್ಲಿ ರೈಸಿಂಗ್​ ಸ್ಟಾರ್​ ಏಷ್ಯಾಕಪ್​ನಲ್ಲಿ ಭಾರತ ಎ ತಂಡದ ಪರ ಉಪನಾಯಕರಾಗಿ ಆಡಲಿದ್ದಾರೆ. ರಿಂಕು-ಪ್ರಿಯಾ ನಿಶ್ಚಿತಾರ್ಥ ಕಳೆದ ವರ್ಷ ಜೂನ್​ನಲ್ಲಿ ನಡೆದಿತ್ತು.

ಯೋಗಿ ಆದಿತ್ಯನಾಥ್‌ಗೆ ಮದುವೆ ಆಹ್ವಾನ ನೀಡಿದ ರಿಂಕು ಸಿಂಗ್ ಕುಟುಂಬ

Rinku Singh family -

Abhilash BC
Abhilash BC Nov 14, 2026 4:03 PM

ಲಕ್ನೋ, ನ.14: ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ ಅವರ ವಿವಾಹಕ್ಕೆ ಸಿದ್ಧತೆಗಳು ಚುರುಕುಗೊಂಡಿದ್ದು, ಈ ಸಮಾರಂಭಕ್ಕೆ ಹಾಜರಾಗುವಂತೆ ಭಾರತೀಯ ಕ್ರಿಕೆಟಿಗನ ಕುಟುಂಬವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಿದೆ. ರಿಂಕು ಅವರ ತಾಯಿ ಬೀನಾ ದೇವಿ, ಸಹೋದರ ಸೋನು ಸಿಂಗ್ ಮತ್ತು ಸಹೋದರಿ ನೇಹಾ ಸಿಂಗ್ ಅವರು ಲಕ್ನೋದಲ್ಲಿರುವ ಮುಖ್ಯಮಂತ್ರಿಯವರ ನಿವಾಸಕ್ಕೆ ಭೇಟಿ ನೀಡಿ, ಅವರಿಗೆ ಖುದ್ದಾಗಿ ವಿವಾಹದ ಆಮಂತ್ರಣ ಪತ್ರಿಕೆಯನ್ನು ನೀಡಿದರು.

ಡಿಸೆಂಬರ್ 4 ರಂದು ಲಕ್ನೋದಲ್ಲಿ ಮದುವೆ ನಡೆಯಲಿದೆ. ಈ ಅದ್ದೂರಿ ವಿವಾಹ ಸಮಾರಂಭದಲ್ಲಿ ಹಲವು ಕ್ರಿಕೆಟ್​ ತಾರೆಯರು ಮತ್ತು ರಾಜಕೀಯ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ಈ ಜೋಡಿಯು ಲಕ್ನೋದ ರಾಮಡಾ ಹೋಟೆಲ್‌ನಲ್ಲಿ ವಿವಾಹವಾಗಲಿದ್ದು, ಮದುವೆಯ ದಿನಾಂಕ ಖಚಿತಗೊಂಡ ಬೆನ್ನಲ್ಲೇ ಎರಡೂ ಕುಟುಂಬಗಳು ಸಿದ್ಧತೆಗಳನ್ನು ಆರಂಭಿಸಿವೆ. ರಿಂಕು ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ಖಾಯಂ ಸದಸ್ಯರಾಗಿದ್ದರೆ, ಪ್ರಿಯಾ ಅವರು ಉತ್ತರ ಪ್ರದೇಶದ ಮಚ್ಲಿಶಹರ್‌ನಿಂದ ಸಮಾಜವಾದಿ ಪಕ್ಷದ ಸಂಸದರಾಗಿದ್ದಾರೆ.

ರಿಂಕು ವಿವಾಹಕ್ಕೆ ಮುನ್ನ ನ.19ರಿಂದ 29ರವರೆಗೆ ದೋಹಾದಲ್ಲಿ ರೈಸಿಂಗ್​ ಸ್ಟಾರ್​ ಏಷ್ಯಾಕಪ್​ನಲ್ಲಿ ಭಾರತ ಎ ತಂಡದ ಪರ ಉಪನಾಯಕರಾಗಿ ಆಡಲಿದ್ದಾರೆ. ರಿಂಕು-ಪ್ರಿಯಾ ನಿಶ್ಚಿತಾರ್ಥ ಕಳೆದ ವರ್ಷ ಜೂನ್​ನಲ್ಲಿ ನಡೆದಿತ್ತು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ; 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್

25 ವರ್ಷದ ಪ್ರಿಯಾ ಸರೋಜ್​ ಅವರು 3 ಬಾರಿಯ ಸಂಸದ ಹಾಗೂ ಉತ್ತರ ಪ್ರದೇಶದ ಹಾಲಿ ಶಾಸಕ ತೂಫಾನ್ ಸರೋಜ್​ ಪುತ್ರಿ. ಪ್ರಿಯಾ ಕಳೆದ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರದ ಸಮಾಜವಾದಿ ಪಕ್ಷದಿಂದ (ಎಸ್​ಪಿ) ಸ್ಪರ್ಧಿಸಿ ಬಿಜೆಪಿ ಸಂಸದ ಭೋಲಾನಾಥ್ ಅವರನ್ನು 35,850 ಮತಗಳ ಅಂತರದಿಂದ ಸೋಲಿಸಿದ್ದರು. 23 ನವೆಂಬರ್ 1998ರಲ್ಲಿ ಜನಿಸಿದ ಪ್ರಿಯಾ, ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ರಿಂಕು ಸಿಂಗ್‌ ಭಾರತ ಪರ ಎರಡು ಏಕದಿನ ಮತ್ತು 48 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನದಲ್ಲಿ ಕೇವಲ 55 ರನ್ ಗಳಿಸಿದ್ದರು. ಟಿ20ಯಲ್ಲಿ 702 ರನ್ ಗಳಿಸಿದ್ದರು. ಶಾರ್ಟ್ ಫಾರ್ಮೆಟ್ ನಲ್ಲಿ ಉತ್ತಮ ಫಿನಿಶರ್ ಎಂದು ಗುರುತಿಸಿಕೊಂಡಿದ್ದಾರೆ.