ಸಚಿನ್ ಸೇರಿ ಹಲವು ದಿಗ್ಗಜ ಆಟಗಾರರ ದಾಖಲೆ ಮುರಿದ 'ಹಿಟ್‌ಮ್ಯಾನ್' ರೋಹಿತ್
Rohit Sharma: ಏಕದಿನ ಪಂದ್ಯಗಳಲ್ಲಿ ಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾರನ ದಾಖಲೆ ಯುಎಇ ತಂಡದ ಮಾಜಿ ಬ್ಯಾಟ್ಸ್‌ಮನ್ ಖುರ್ರಮ್ ಖಾನ್ ಅವರ ಹೆಸರಿನಲ್ಲಿದೆ. ನವೆಂಬರ್ 30, 2014 ರಂದು ದುಬೈನ ಐಸಿಸಿ ಅಕಾಡೆಮಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ 138 ಎಸೆತಗಳಲ್ಲಿ 132 ರನ್ ಗಳಿಸಿದಾಗ ಖುರ್ರಮ್ ಅವರಿಗೆ 43 ವರ್ಷ 162 ದಿನಗಳು.
Rohit Sharma -
ಲಾರ್ಡ್ಸ್, ಜು. 20: ಭಾನುವಾರ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 27 ರನ್‌ಗಳಿಂದ ಸೋತು ಸರಣಿ ಸೋಲಿಗೆ ತುತ್ತಾಯಿತು. ಆದರೆ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಟೀಮ್ ಇಂಡಿಯಾದ ಹಿರಿಯ ಬ್ಯಾಟರ್ ರೋಹಿತ್ ಶರ್ಮ ಈ ಶತಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿವ್ ರಿಚರ್ಡ್ಸ್ ಸೇರಿ ಹಲವರ ದಾಖಲೆಗಳನ್ನು ಮುರಿದಿದ್ದಾರೆ.
ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ‘ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮ ಅವರ ಪಾಲಿಗೆ ಲಾರ್ಡ್ಸ್ ಪಂದ್ಯ ಕೊನೆಯ ಪಂದ್ಯವಾಗಲಿದೆ ಎಂದು ಎಲ್ಲಡೆ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ 39 ವರ್ಷ ವಯಸ್ಸಿನ ರೋಹಿತ್ ಶತಕ ಸಿಡಿಸಿ ಸಂಭ್ರಮಿಸಿದರು. ಜತೆಗೆ ಲಾರ್ಡ್ಸ್ ಮೈದಾನದಲ್ಲಿ ಏಕದಿನ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಬರೆದರು.
ಶತಕ ಬಾರಿಸಿದ ಅತಿ ಹಿರಿಯ ಆಟಗಾರ
ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕ ಗಳಿಸಿದ ಅತ್ಯಂತ ಹಿರಿಯ ಭಾರತೀಯ ಎಂಬ ದಾಖಲೆಯನ್ನು ರೋಹಿತ್ ಮುರಿದರು. ಮಾರ್ಚ್ 16, 2012 ರಂದು ಮಿರ್ಪುರದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಪರ ಏಕದಿನ ಶತಕ ಗಳಿಸಿದಾಗ ಸಚಿನ್ 38 ವರ್ಷ 327 ದಿನಗಳು. ಇದೀಗ ರೋಹಿತ್ 39 ವರ್ಷ 80 ದಿನಗಳಲ್ಲಿ ಶತಕ ಬಾರಿಸಿ ದಾಖಲೆ ತನ್ನ ಹೆಸರಿಗೆ ಬರೆದರು.
1️⃣3️⃣8️⃣ Runs
— BCCI (@BCCI) July 19, 2026
1️⃣1️⃣0️⃣ Balls
1️⃣7️⃣ Fours & 5️⃣ Sixes
What a knock from Ro-HITMAN Sharma 🔥
Updates ▶️ https://t.co/pLZ2PvDH5G#TeamIndia | #ENGvIND | @ImRo45 pic.twitter.com/ITMhfLq0ID
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಹಿರಿಯ ಭಾರತೀಯ ಎಂಬ ದಾಖಲೆ ವಿಜಯ್ ಮರ್ಚೆಂಟ್ ಅವರ ಹೆಸರಿನಲ್ಲಿದೆ. 1951 ರ ನವೆಂಬರ್ 2 ರಿಂದ 7 ರವರೆಗೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದಾಗ ಮರ್ಚೆಂಟ್ ಅವರಿಗೆ 40 ವರ್ಷ 21 ದಿನಗಳು.
IND vs ENG: ರೋಹಿತ್ ಶರ್ಮಾ ದಾಖಲೆಯ ಶತಕ ವ್ಯರ್ಥ, ಇಂಗ್ಲೆಂಡ್ ವಿರುದ್ಧ ಒಡಿಐ ಸರಣಿಯನ್ನೂ ಸೋತ ಭಾರತ!
ಏಕದಿನ ಪಂದ್ಯಗಳಲ್ಲಿ ಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾರನ ದಾಖಲೆ ಯುಎಇ ತಂಡದ ಮಾಜಿ ಬ್ಯಾಟ್ಸ್‌ಮನ್ ಖುರ್ರಮ್ ಖಾನ್ ಅವರ ಹೆಸರಿನಲ್ಲಿದೆ. ನವೆಂಬರ್ 30, 2014 ರಂದು ದುಬೈನ ಐಸಿಸಿ ಅಕಾಡೆಮಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ 138 ಎಸೆತಗಳಲ್ಲಿ 132 ರನ್ ಗಳಿಸಿದಾಗ ಖುರ್ರಮ್ ಅವರಿಗೆ 43 ವರ್ಷ 162 ದಿನಗಳು.
ವಿವ್ ರಿಚರ್ಡ್ಸ್ ದಾಖಲೆ ಸರಿಗಟ್ಟಿದ ರೋಹಿತ್
138 ರನ್ ಗಳಿಸಿದ ರೋಹಿತ್ ವಿಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್ ಅವರು ಲಾರ್ಡ್ಸ್‌ನಲ್ಲಿ ಗಳಿಸಿದ ಅತ್ಯಧಿಕ ವೈಯಕ್ತಿಕ ಏಕದಿನ ಸ್ಕೋರ್ ದಾಖಲೆಯನ್ನು ಸರಿಗಟ್ಟಿದರು. ಲಾರ್ಡ್ಸ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಏಕದಿನ ಸ್ಕೋರ್ ಗಳಿಸಿದ ಒಟ್ಟಾರೆ ದಾಖಲೆ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಬೆನ್ ಡಕೆಟ್ ಅವರ ಹೆಸರಲ್ಲಿದೆ. ಎಡಗೈ ಓಪನರ್ ಆಗಿರುವ ಈ ಎಡಗೈ ಓಪನರ್, ಭಾನುವಾರದ ಪಂದ್ಯದಲ್ಲಿಯೇ ಈ ದಾಖಲೆ ನಿರ್ಮಿಸಿದರು. 135 ಎಸೆತಗಳಲ್ಲಿ 141 ರನ್ ಗಳಿಸಿದರು.