Gautam Gambhir: 19ರಲ್ಲಿ 10 ಟೆಸ್ಟ್ ಸೋತ ಗಂಭೀರ್ ಹುದ್ದೆ ಮೇಲೆ ತೂಗುಗತ್ತಿ
Sack Gautam Gambhir?: ಗಂಭೀರ್ ಕೋಚ್ ಆದ ಬಳಿಕ ಭಾರತ 19 ಟೆಸ್ಟ್ ಆಡಿದ್ದು, ಕೇವಲ 7ರಲ್ಲಿ ಗೆದ್ದಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದೆ. ಇಂಗ್ಲೆಂಡ್ ಪ್ರವಾಸದಲ್ಲಿ 2-2 ಡ್ರಾ ಸಮಬಲ ಸಾಧಿಸಿದ್ದೇ ಸದ್ಯದ ದೊಡ್ಡ ಸಾಧನೆ.
ಕೋಚ್ ಗೌತಮ್ ಗಂಭೀರ್ -
ಗುವಾಹಟಿ, ನ.26: ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 408 ರನ್‌ಗಳ ಹೀನಾಯ ಸೋಲಿನೊಂದಿಗೆ ಸರಣಿಯಲ್ಲಿ 2-0 ವೈಟ್‌ವಾಶ್ ಮುಖಭಂಗ ಅನುಭವಿಸಿತು. ಇದು 12 ತಿಂಗಳ ಅಂತರದಲ್ಲಿ ಭಾರತ ತವರಿನಲ್ಲಿ ಸೋತ ಎರಡನೇ ಸರಣಿ ಸೋಲಾಗಿದೆ. ಈ ಸೋಲಿನ ಬೆನ್ನಲ್ಲೇ ಕೋಚ್ ಗೌತಮ್ ಗಂಭೀರ್(Gautam Gambhir) ತಂಡವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿಲ್ಲ ಅವರನ್ನು ಈ ಹುದ್ದೆಯಿಂದ(Sack Gautam Gambhir?) ಕೆಳಗಿಳಿಸಬೇಕು ಎಂಬ ಒತ್ತಾಯಗಳು ಬಲವಾಗಿ ಕೇಳಿಬಂದಿದೆ. ಅಲ್ಲದೆ ಗಂಭೀರ್ ತಲೆದಂಡ ಸಾಧ್ಯತೆಯೂ ಗೋಚರಿಸಿದೆ.
ಗಂಭೀರ್ ಕೋಚ್ ಆದ ಬಳಿಕ ಭಾರತ 19 ಟೆಸ್ಟ್ ಆಡಿದ್ದು, ಕೇವಲ 7ರಲ್ಲಿ ಗೆದ್ದಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದೆ. ಇಂಗ್ಲೆಂಡ್ ಪ್ರವಾಸದಲ್ಲಿ 2-2 ಸಮಬಲ ಸಾಧಿಸಿದ್ದೇ ಅವರ ದೊಡ್ಡ ಸಾಧನೆ. ಗಂಭೀರ್‌ರನ್ನು ಟೆಸ್ಟ್ ತಂಡದ ಕೋಚ್ ಆಗಿ ಮುಂದುವರಿಸಬೇಕೇ ಬೇಡವೆ ಎನ್ನುವ ಬಗ್ಗೆ ಬಿಸಿಸಿಐನ ನೂತನ ಕಾರ್ಯದರ್ಶಿ ದೇವ್‌ಜಿತ್ ಅವರು ಪ್ರಧಾನ ಆಯ್ಕೆಗಾರ ಅಜಿತ್ ಅಗರ್ಕರ್ ಜೊತೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3ರಲ್ಲಿ ವೈಟ್‌ವಾಶ್ ಮುಖಭಂಗ ಅನುಭವಿಸಿದಾಗಲೇ ಗೌತಮ್ ಗಂಭೀರ್‌ರನ್ನು ಕೇವಲ ಸೀಮಿತ ಓವರ್ ತಂಡಗಳಿಗೆ ಕೋಚ್ ಆಗಿ ಉಳಿಸಿ, ಟೆಸ್ಟ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಅಥವಾ ಮತ್ತಿನ್ಯಾರಾದರೂ ಹೊಸಬರನ್ನು ನೇಮಿಸುವ ಕುರಿತು ಬಿಸಿಸಿಐ ಚಿಂತನೆ ಶುರು ಮಾಡಿತ್ತು ಎನ್ನಲಾಗಿತ್ತು. ಹರಿಣಗಳ ವಿರುದ್ಧದ ಟೂರ್ನಿಯಲ್ಲಿ ಎದುರಾದ ಸೋಲು, ಕೋಚ್ ಗಂಭೀರ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದಂತೆ ಕಾಣುತ್ತಿದೆ. ಕೆಲ ಮೂಲಗಳ ಪ್ರಕಾರ ರೆಡ್ ಬಾಲ್ ಕ್ರಿಕೆಟ್‌ಗೆ ಬೇರೊಬ್ಬ ಕೋಚ್ ನೇಮಿಸಲು ಬಿಸಿಸಿಐ ಚಿಂತಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಏಕದಿನ ಶ್ರೇಯಾಂಕದಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ರೋಹಿತ್ ಶರ್ಮಾ
ಅಚ್ಚರಿಯ ಹೇಳಿಕೆ ಕೊಟ್ಟ ಗಂಭೀರ್
ಭಾರತ ತಂಡದ ಸತತ ಸೋಲಿನ ಬೆನ್ನಲ್ಲೇ ಟೀಕೆಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೋಚ್ ಗಂಭೀರ್ ಗುವಾಹಟಿ ಟೆಸ್ಟ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ "ಕ್ರೀಡೆಗೆ ಯಾವುದೇ ಹಿನ್ನೋಟವಿಲ್ಲ. ನಾವು ಯಾವುದೇ ನಿರ್ಧಾರ ತೆಗೆದುಕೊಂಡಿದ್ದರೂ, ತಂಡದ ಹಿತದೃಷ್ಟಿಯಿಂದ ನಾವು ತೆಗೆದುಕೊಂಡಿದ್ದೇವೆ ಮತ್ತು ದೇಶ ಮತ್ತು ತಂಡಕ್ಕಾಗಿ ಕೆಲಸ ಮಾಡಲು ಅವು ಸರಿಯಾದ ನಿರ್ಧಾರಗಳಾಗಿದ್ದವು ಎಂದು ನಾವು ಸಂಪೂರ್ಣವಾಗಿ ನಂಬಿದ್ದೇವೆ. ಅಂತಿಮ ನಿರ್ಧಾರ ಬಿಸಿಸಿಐಗೆ ಬಿಟ್ಟದ್ದು" ಎಂದು ಹೇಳಿದರು.
"ನಾನು ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ ನನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೆ, ಭಾರತೀಯ ಕ್ರಿಕೆಟ್ ಮುಖ್ಯ. ನಾನು ಮುಖ್ಯನಲ್ಲ. ಮತ್ತು ನಾನು ಇಲ್ಲಿ ಕುಳಿತು ನಿಖರವಾಗಿ ಅದೇ ಮಾತನ್ನು ಹೇಳುತ್ತೇನೆ" ಎಂದು ಅವರು ಹೇಳಿದರು.
IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ವೈಟ್‌ವಾಶ್ ಮುಖಭಂಗ
"ಇದು ಬಿಸಿಸಿಐ ನಿರ್ಧರಿಸಬೇಕಾದ ವಿಷಯ. ನಾನು ಇದನ್ನೇ ಮೊದಲೇ ಹೇಳಿದ್ದೇನೆ, ಭಾರತೀಯ ಕ್ರಿಕೆಟ್ ಮುಖ್ಯ, ನಾನು ಮುಖ್ಯ ಅಲ್ಲ. ಇಂಗ್ಲೆಂಡ್‌ನಲ್ಲಿ ಫಲಿತಾಂಶಗಳನ್ನು ಪಡೆದ, ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ ಗೆದ್ದ ಅದೇ ವ್ಯಕ್ತಿ ನಾನು. ಇದು ಕಲಿಯುತ್ತಿರುವ ತಂಡ" ಎಂದು ಗಂಭೀರ್ ಹೇಳಿದರು.