ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ತಂಡಕ್ಕೆ ಸರಣಿ ಗೆಲುವಿನ ತವಕ; ನಾಳೆ ದ್ವಿತೀಯ ಏಕದಿನ

ಕಾರ್ಡಿಫ್‌ನಲ್ಲಿರುವ ಸೋಫಿಯಾ ಗಾರ್ಡನ್ಸ್‌ನಲ್ಲಿರುವ ಪಿಚ್ ಆಟದ ಉದ್ದಕ್ಕೂ ಸ್ಥಿರವಾದ ಬೌನ್ಸ್ ಮತ್ತು ಕ್ಯಾರಿಯನ್ನು ನೀಡುತ್ತದೆ. ಸೀಮರ್‌ಗಳು ಆರಂಭಿಕ ಲಾಭ ಪಡೆಯಬಹುದು. ಮಧ್ಯಮ ವೇಗಿಗಳು ಡೆತ್ ಓವರ್‌ಗಳಲ್ಲಿ ವಿಕೆಟ್ ಬೇಟೆಯಾಡಬಹುದು. ಮೈದಾನದ ಬೌಂಡರಿ ಕೂಡ ದೊಡ್ಡದಿರುವ ಕಾರಣ ಬ್ಯಾಟರ್‌ಗಳಿ ಸರಾಗವಾಗಿ ರನ್‌ ಗಳಿಸಲು ಕಷ್ಟ.

ಆಂಗ್ಲರ ವಿರುದ್ಧ ಭಾರತ ತಂಡಕ್ಕೆ ಸರಣಿ ಗೆಲುವಿನ ತವಕ

gill and gambhir -

Abhilash BC
Abhilash BC Jul 15, 2026 4:56 PM

ಕಾರ್ಡಿಫ್‌, ಜು.15: ಮೊದಲ ಪಂದ್ಯಗಳಲ್ಲಿ ಜಯ ಸಾಧಿಸಿ ಉತ್ಸಾಹದಲ್ಲಿರುವ ಭಾರತ ತಂಡ ಇಂಗ್ಲೆಂಡ್‌ ವಿರುದ್ಧದ ಎರಡನೇ ಪಂದ್ಯದಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ಆದರೆ ಈ ಪಂದ್ಯದಲ್ಲಿ ಜಯಿಸಿ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟುಕೊಳ್ಳುವ ಯೋಜನೆಯಲ್ಲಿ ಆತಿಥೇಯ ಇಂಗ್ಲೆಂಡ್‌ ಇದೆ. ಹೀಗಾಗಿ ಪಂದ್ಯ ಹೈವೋಲ್ಟೇಜ್‌ ನಿರೀಕ್ಷೆ ಮಾಡಬಹುದು.

ಗುರುವಾರ ಎರಡೂ ತಂಡಗಳ ನಡುವಣ ನಡೆಯಲಿರುವ ಮಹತ್ವದ ಪಂದ್ಯಕ್ಕೆ ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ ಅಂತರರಾಷ್ಟ್ರೀಯ ಕ್ರೀಡಾಂಗಣ ಸಿದ್ಧವಾಗಿದೆ. ಮಂಗಳವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತ್ತು. ಆದರೆ ಅನುಭವಿ ಆಟಗಾರರಾದ ರೋಹಿತ್‌ ಶರ್ಮ(11) ಮತ್ತು ವಿರಾಟ್‌ ಕೊಹ್ಲಿ(5) ನಿರಾಸೆ ಮೂಡಿಸಿದ್ದರು. ಜತೆಗೆ ಕನ್ನಡಿಗ ರಾಹುಲ್‌ ಕೂಡ ಒಂದಕ್ಕಿಗೆ ಸೀಮಿತರಾಗಿದ್ದರು. ಈ ಪಂದ್ಯದಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದ್ದಾರೆ.

ಎಡಗೈ ಸ್ಪಿನ್ನರ್‌ ಅಕ್ಷರ್ ಪಟೇಲ್‌ ಕಳೆದ ಪಂದ್ಯದಲ್ಲಿ 4 ವಿಕೆಟ್‌ ಮಾತ್ರವಲ್ಲದೆ ಅಜೇಯ ಅರ್ಧಶತಕ ಸಿಡಿಸಿದ್ದರು. ಹೀಗಾಗಿ ಸಹಜವಾಗಿಯೇ ಅವರ ಮೇಲೆ ತಂಡ ಮತ್ತೊಂದು ಪ್ರದರ್ಶನದ ನಿರೀಕ್ಷೆಯಿರಿಸಿದೆ. ಭಾರತ ತನ್ನ ಆಡುವ ಬಳಗದಲ್ಲಿ ಯಾವುದೇ ಬಲಾವಣೆ ಮಾಡುವಂತೆ ಕಾಣುತ್ತಿಲ್ಲ. ಆದರೆ ಸ್ನಾಯು ಸೆಳೆತದಿಂದ ಬಳಲಿ ಅರ್ಧಕ್ಕೆ ಬ್ಯಾಟಿಂಗ್‌ ಮೊಟಕುಗೊಳಿಸಿದ್ದ ನಾಯ ಶುಭಮನ್‌ ಗಿಲ್‌ ಆಡವ ಬಗ್ಗೆ ಮಾತ್ರ ಸದ್ಯ ಅನುಮಾನವಿದೆ. ಒಂದೊಮ್ಮೆ ಅವರು ಪಂದ್ಯದಿಂದ ಹೊರಗುಳಿದರೆ ಎಡಗೈ ಬ್ಯಾಟರ್‌ ಇಶಾನ್‌ ಕಿಶನ್‌ ಅವಕಾಶ ಪಡೆಯಬಹುದು.

ಹರ್ಮನ್‌ಪ್ರೀತ್ ಕೌರ್ ಬದಲಿಗೆ ಭಾರತ ತಂಡದ ನಾಯಕಿಯಾಗಲು ಸಿದ್ಧ; ಸ್ಮೃತಿ ಮಂಧಾನ

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯ ಕಂಡಿತ್ತು. ಈ ತಪ್ಪನ್ನು ತಿದ್ದಿಕೊಂಡು ಆಂಗ್ಲರು ಕಣಕ್ಕಿಳಿಯಲು ಸಿದ್ಧರಾದಂತಿದೆ. ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ.

ಪಿಚ್ ವರದಿ

ಕಾರ್ಡಿಫ್‌ನಲ್ಲಿರುವ ಸೋಫಿಯಾ ಗಾರ್ಡನ್ಸ್‌ನಲ್ಲಿರುವ ಪಿಚ್ ಆಟದ ಉದ್ದಕ್ಕೂ ಸ್ಥಿರವಾದ ಬೌನ್ಸ್ ಮತ್ತು ಕ್ಯಾರಿಯನ್ನು ನೀಡುತ್ತದೆ. ಸೀಮರ್‌ಗಳು ಆರಂಭಿಕ ಲಾಭ ಪಡೆಯಬಹುದು. ಮಧ್ಯಮ ವೇಗಿಗಳು ಡೆತ್ ಓವರ್‌ಗಳಲ್ಲಿ ವಿಕೆಟ್ ಬೇಟೆಯಾಡಬಹುದು. ಮೈದಾನದ ಬೌಂಡರಿ ಕೂಡ ದೊಡ್ಡದಿರುವ ಕಾರಣ ಬ್ಯಾಟರ್‌ಗಳಿ ಸರಾಗವಾಗಿ ರನ್‌ ಗಳಿಸಲು ಕಷ್ಟ. ಚೌಕಾಕಾರದ ಬೌಂಡರಿಗಳು 75 ಮೀಟರ್‌ಗಳಿಗಿಂತ ಹೆಚ್ಚು ಉದ್ದವಿದೆ. ನೇರ ಬೌಂಡರಿಗಳು ಸ್ವಲ್ಪ ಚಿಕ್ಕದಾಗಿದೆ.

ಭಾರತ ಸಂಭಾವ್ಯ ತಂಡ

ಇಶಾನ್ ಕಿಶನ್/ಶುಭಮನ್‌ ಗಿಲ್‌, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ.), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ.

ಪಂದ್ಯ ಆರಂಭ: ಭಾರತೀಯ ಕಾಲಮಾನ ಸಂಜೆ 5.30.