ನಾಳೆ 2ನೇ ಏಕದಿನ; ಕಾರ್ಡಿಫ್‌ನಲ್ಲಿ ಭಾರತದ ದಾಖಲೆ ಹೇಗಿದೆ?
India's record at Cardiff: ವಿರಾಟ್ ಕೊಹ್ಲಿ ಅವರ ವೃತ್ತಿಜೀವನದಲ್ಲಿ ಈ ಏಕದಿನ ಪಂದ್ಯವು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಏಕೆಂದರೆ ಅವರು 50 ಓವರ್‌ಗಳ ಸ್ವರೂಪದಲ್ಲಿ ಇಂಗ್ಲಿಷ್ ನೆಲದಲ್ಲಿ ತಮ್ಮ ಮೊದಲ ಮತ್ತು ಇದುವರೆಗಿನ ಏಕೈಕ ಶತಕವನ್ನು ದಾಖಲಿಸಿದ್ದು ಇದೇ ಮೈದಾನದಲ್ಲಿ.
Jofra Archer and Jasprit Bumrah -
ಲಂಡನ್, ಜು.15: ಗುರುವಾರ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಅಂತರರಾಷ್ಟ್ರೀಯ (ODI) ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸುಂದರವಾದ ಸೌತ್ ವೇಲ್ಸ್ ರಾಜಧಾನಿ ಕಾರ್ಡಿಫ್‌ಗೆ ಪ್ರಯಾಣ ಬೆಳೆಸಲಿದೆ. ಮೆನ್ ಇನ್ ಬ್ಲೂ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ ಮತ್ತು ಸೋಫಿಯಾ ಗಾರ್ಡನ್ಸ್‌ನಲ್ಲಿ ಸರಣಿಯನ್ನು ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಹೊಂದಿದೆ.
ಭಾರತವು ವಿಶ್ವದಾದ್ಯಂತ ODI ಪಂದ್ಯಗಳನ್ನು ಆಡಿದೆ, ಅದರಲ್ಲಿ ನಾಲ್ಕು ಬಾರಿ ಕಾರ್ಡಿಫ್‌ನಲ್ಲಿಯೂ ಸೇರಿದೆ. ಇಂಗ್ಲೆಂಡ್‌ನ ಇತರ ಮೈದಾನಗಳಿಗಿಂತ ಇಲ್ಲಿ ಕಡಿಮೆ ಪಂದ್ಯಗಳನ್ನು ಆಡಿದ್ದರೂ, ಮೆನ್ ಇನ್ ಬ್ಲೂ ತಂಡವು ಸೋಫಿಯಾ ಗಾರ್ಡನ್ಸ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಆಡಿದ 4 ಏಕದಿನ ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿದೆ.
ವಿರಾಟ್ ಕೊಹ್ಲಿ ಅವರ ವೃತ್ತಿಜೀವನದಲ್ಲಿ ಈ ಏಕದಿನ ಪಂದ್ಯವು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಏಕೆಂದರೆ ಅವರು 50 ಓವರ್‌ಗಳ ಸ್ವರೂಪದಲ್ಲಿ ಇಂಗ್ಲಿಷ್ ನೆಲದಲ್ಲಿ ತಮ್ಮ ಮೊದಲ ಮತ್ತು ಇದುವರೆಗಿನ ಏಕೈಕ ಶತಕವನ್ನು ದಾಖಲಿಸಿದ್ದು ಇದೇ ಮೈದಾನದಲ್ಲಿ.
2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿಜಯೋತ್ಸವದ ಸಮಯದಲ್ಲಿ ಸೋಫಿಯಾ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ವಿರುದ್ಧ ಆಡಿದ ಎರಡೂ ಪಂದ್ಯವನ್ನು ಗೆದ್ದಿತ್ತು. ಶಿಖರ್ ಧವನ್ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ 114 ಮತ್ತು 68 ರನ್ ಗಳಿಸಿದ್ದರು.
ಸಚಿನ್ ತೆಂಡೂಲ್ಕರ್, ಹಾರ್ದಿಕ್ ಪಾಂಡ್ಯ ದಾಖಲೆ ಸರಿಗಟ್ಟಿದ ಅಕ್ಷರ್ ಪಟೇಲ್
ಭಾರತ ತಂಡವು 2014 ರ ಕಾರ್ಡಿಫ್ ಪ್ರವಾಸದಲ್ಲಿ ಇಂಗ್ಲೆಂಡ್ ವಿರುದ್ಧ 133 ರನ್‌ಗಳ ಭರ್ಜರಿ ಜಯ ಸಾಧಿಸಿತು. ಸುರೇಶ್ ರೈನಾ ಕೇವಲ 75 ಎಸೆತಗಳಲ್ಲಿ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ರವೀಂದ್ರ ಜಡೇಜಾ ಕೂಡ ನಾಲ್ಕು ವಿಕೆಟ್‌ಗಳನ್ನು ಪಡೆದು ಉತ್ತಮ ಪ್ರದರ್ಶನ ನೀಡಿದ್ದರು.
ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ಭಾರತದ ODI ಪಂದ್ಯಗಳು
ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಸೋಲು(2011)
ದಕ್ಷಿಣ ಆಫ್ರಿಕಾ ವಿರುದ್ಧ 26 ರನ್ ಗೆಲುವು(2013)
ಶ್ರೀಲಂಕಾ ವಿರುದ್ಧ 8 ವಿಕೆಟ್ ಗೆಲುವು(2013)
ಇಂಗ್ಲೆಂಡ್ ವಿರುದ್ಧ 133 ರನ್ ಜಯ(2014)
ತಂಡಗಳು
ಭಾರತ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪ ನಾಯಕ), ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್ ಮತ್ತು ಪ್ರಿನ್ಸ್ ಯಾದವ್.
ಇಂಗ್ಲೆಂಡ್: ಹ್ಯಾರಿ ಬ್ರೂಕ್ (ನಾಯಕ), ಬೆನ್ ಡಕೆಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಟಾಮ್ ಬ್ಯಾಂಟನ್, ಜೋ ರೂಟ್, ಜೇಕಬ್ ಬೆಥೆಲ್, ವಿಲ್ ಜಾಕ್ಸ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್, ಜೇಮ್ಸ್ ಕೋಲ್ಸ್, ಸ್ಯಾಮ್ ಕರನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಜೋಶ್ಅ ಟಂಗ್, ಸಖಿಬ್ ಮಹಮೂದ್, ಅದಿಲ್ ರಶೀದ್.