ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌‌ನಿಧಾನಗತಿ ಓವರ್; ಪಂದ್ಯ ಗೆದ್ದರೂ ಶ್ರೇಯಸ್‌ ಅಯ್ಯರ್‌ಗೆ ದಂಡ ವಿಧಿಸಿದ ಬಿಸಿಸಿಐ

Shreyas Iyer fined in IPL 2026: ‘ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಪರಿಚ್ಚೇದ 2.22ರ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ಅಯ್ಯರ್‌ಗೆ ₹12 ಲಕ್ಷ ದಂಡ ವಿಧಿಸಲಾಗಿದೆ’ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆ ತಿಳಿಸಿದೆ. ಮೊದಲ ತಪ್ಪಿಗೆ ₹12 ಲಕ್ಷ, ಎರಡನೇ ಬಾರಿ ₹24 ಲಕ್ಷ ದಂಡ ಹಾಗೂ ಒಂದು ಪಂದ್ಯದ ನಿಷೇಧದ ನಿಯಮವಿದೆ.

‌‌ನಿಧಾನಗತಿ ಓವರ್; ಪಂದ್ಯ ಗೆದ್ದರೂ ಶ್ರೇಯಸ್‌ ಅಯ್ಯರ್‌ಗೆ ಭಾರೀ ದಂಡ

Shreyas Iyer -

Abhilash BC
Abhilash BC Apr 1, 2026 11:43 AM

ಮುಲ್ಲನ್‌ಪುರ, ಎ.1: ಮಂಗಳವಾರ ನಡೆದ ಗುಜರಾತ್‌ ಟೈಟಾನ್ಸ್(PBKS vs GT) ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌(Shreyas Iyer)ಗೆ ಬಿಸಿಸಿಐ ₹12 ಲಕ್ಷ ದಂಡ ವಿಧಿಸಿದೆ. ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಇದು ದಂಡಕ್ಕೆ ಗುರಿಯಾದ ಮೊದಲ ನಿದರ್ಶನ. ಪಂದ್ಯದಲ್ಲಿ ಪಂಬಾಬ್‌ 3 ವಿಕೆಟ್‌ ಅಂತರದ ಗೆಉವು ಸಾಧಿಸಿತು.

ಬೌಲಿಂಗ್ ತಂಡವು 20 ಓವರ್‌ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕು. ಆದರೆ ಎಲ್‌ಎಸ್‌ಜಿ ನಿಗದಿತ ಸಮಯಕ್ಕಿಂತ ಒಂದು ಓವರ್ ಹಿಂದಿತ್ತು. ಹೀಗಾಗಿ 19 ನೇ ಓವರ್‌ ಬಳಿಕ ಅವರು 30-ಗಜ ವೃತ್ತದ ಹೊರಗೆ ಒಬ್ಬ ಫೀಲ್ಡರ್ ಅನ್ನು ಕಡಿಮೆ ಇಡಬೇಕಾಯಿತು.

‘ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಪರಿಚ್ಚೇದ 2.22ರ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ಅಯ್ಯರ್‌ಗೆ ₹12 ಲಕ್ಷ ದಂಡ ವಿಧಿಸಲಾಗಿದೆ’ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆ ತಿಳಿಸಿದೆ. ಮೊದಲ ತಪ್ಪಿಗೆ ₹12 ಲಕ್ಷ, ಎರಡನೇ ಬಾರಿ ₹24 ಲಕ್ಷ ದಂಡ ಹಾಗೂ ಒಂದು ಪಂದ್ಯದ ನಿಷೇಧದ ನಿಯಮವಿದೆ.

ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಐಪಿಎಲ್‌ ದಾಖಲೆ ಹೇಗಿದೆ?

ಅರ್ಶ್‌ದೀಪ್ ಸಿಂಗ್ ಕೊನೆಯ ಓವರ್‌ನಲ್ಲಿ 11 ಎಸೆತಗಳನ್ನು ಎಸೆದು ನಾಲ್ಕು ವೈಡ್‌ಗಳು ಮತ್ತು ಒಂದು ನೋ-ಬಾಲ್ ಎಸೆದು 12 ರನ್‌ಗಳನ್ನು ಬಿಟ್ಟುಕೊಟ್ಟರು. ಇದು ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ಉದ್ದದ ಓವರ್ ಆಗಿದೆ. ಐಪಿಎಲ್‌ನಲ್ಲಿ ಈಗ ಒಂದೇ ಓವರ್‌ನಲ್ಲಿ 11 ಎಸೆತಗಳನ್ನು ಎಸೆದ ಒಟ್ಟು ಆರು ನಿದರ್ಶನಗಳಿವೆ.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 162 ರನ್‌ ಗಳಿಸಿತು. ನಾಯಕ ಶುಭ್‌ಮನ್‌ ಗಿಲ್‌ 39, ಜೋಸ್‌ ಬಟ್ಲರ್‌ 38, ಗ್ಲೆನ್‌ ಫಿಲಿಪ್ಸ್‌ 25 ರನ್‌ ಸಿಡಿಸಿದರು. ಜವಾಬಿತ್ತ ಪಂಜಾಬ್‌ ಕೂಪರ್‌ ಕೊನೊಲಿ ಏಕಾಂಗಿ ಹೋರಾಟದಿಂದಾಗಿ 19.1 ಓವರಲ್ಲಿ 165 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರ್‌: ಗುಜರಾತ್‌ 20 ಓವರಲ್ಲಿ 162/6 (ಗಿಲ್‌ 39, ಬಟ್ಲರ್‌ 38, ವೈಶಾಕ್‌ 3-34, ಚಹಲರ್‌ 2-28), ಪಂಜಾಬ್‌ 19.1 ಓವರಲ್ಲಿ 165/7 (ಕೊನೊಲಿ ಔಟಾಗದೆ 72, ಪ್ರಭ್‌ಸಿಮ್ರನ್‌ 37, ಪ್ರಸಿದ್ಧ್‌ 3-29)

ಪಂದ್ಯಶ್ರೇಷ್ಠ: ಕೂಪರ್‌ ಕೊನೊಲಿ.