viral video: ಕಿವೀಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಕೋಚ್
2025ರ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗುತ್ತಿರುವ ದಕ್ಷಿಣ ಆಫ್ರಿಕಾದ ಪೂರ್ಣ ಪ್ರಮಾಣದ ತಂಡ ತ್ರಿಕೋನ ಸರಣಿಯನ್ನಾಡಲು ಪಾಕ್‌ಗೆ ಬಂದಿರಲಿಲ್ಲ. ಹೀಗಾಗಿ ಆಟಗಾರರ ಕೊರತೆ ಕಂಡು ಬಂತು. ಇದೇ ಕಾರಣಕ್ಕೆ ಖುದ್ದು ದಕ್ಷಿಣ ಆಫ್ರಿಕಾದ ಫೀಲ್ಡಿಂಗ್ ಕೋಚ್ ವಾಂಡೈಲ್ ಗ್ವಾವು ಅವರೇ ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದರು.
ಲಾಹೋರ್: ಸೋಮವಾರ ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್(New Zealand vs South Africa) ನಡುವಣ ಏಕದಿನ ಪಂದ್ಯದಲ್ಲಿ ಆಟಗಾರರ ಕೊರತೆಯಿಂದಾಗಿ ದಕ್ಷಿಣ ಆಫ್ರಿಕಾ ತಂಡದ ಪರ ಸ್ವತಃ ಕೋಚ್ ಅವರೇ ಮೈದಾನಕ್ಕಿಳಿದು ಫೀಲ್ಡಿಂಗ್ ನಡೆಸಿದ ಘಟನೆ ಸಂಭವಿಸಿದೆ. ದಕ್ಷಿಣ ಆಫ್ರಿಕಾದ ಫೀಲ್ಡಿಂಗ್ ಕೋಚ್ ವಾಂಡೈಲ್ ಗ್ವಾವು(Wandile Gwavu), ಕಿವೀಸ್ ಬ್ಯಾಟಿಂಗ್ ಇನ್ನಿಂಗ್ಸ್‌ನ 37ನೇ ಓವರ್‌ನಲ್ಲಿ ಫೀಲ್ಡಿಂಗ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಸದ್ಯ ಅವರ ಫೀಲ್ಡಿಂಗ್ ವಿಡಿಯೊ ವೈರಲ್ ಆಗಿದೆ.
2025ರ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗುತ್ತಿರುವ ದಕ್ಷಿಣ ಆಫ್ರಿಕಾದ ಪೂರ್ಣ ಪ್ರಮಾಣದ ತಂಡ ತ್ರಿಕೋನ ಸರಣಿಯನ್ನಾಡಲು ಪಾಕ್‌ಗೆ ಬಂದಿರಲಿಲ್ಲ. ಹೀಗಾಗಿ ಆಟಗಾರರ ಕೊರತೆ ಕಂಡು ಬಂತು. ಇದೇ ಕಾರಣಕ್ಕೆ ಖುದ್ದು ದಕ್ಷಿಣ ಆಫ್ರಿಕಾದ ಫೀಲ್ಡಿಂಗ್ ಕೋಚ್ ವಾಂಡೈಲ್ ಗ್ವಾವು ಅವರೇ ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದರು.
We don’t see that happening too often! 😅
— FanCode (@FanCode) February 10, 2025
South Africa’s fielding coach Wandile Gwavu came on as a substitute fielder during the New Zealand innings! 👀#TriNationSeriesonFanCode pic.twitter.com/ilU5Zj2Xxn
ಈ ರೀತಿಯ ಘಟನೆ ಕಳೆದ ವರ್ಷ ಅಬುಧಾಬಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ನಡುವಿನ ಪಂದ್ಯದಲ್ಲೂ ನಡೆದಿತ್ತು. ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಕೋಚ್ ಜೆಪಿ ಡುಮಿನಿ ಅವರು, ಹಲವಾರು ಆಟಗಾರರ ಅನಾರೋಗ್ಯದಿಂದಾಗಿ ಬದಲಿ ಫೀಲ್ಡರ್ ಆಗಿ ಕಣಕ್ಕಿಳಿದಿದ್ದರು. ಈ ಘಟನೆ ಕೂಡ ಅಂದು ಭಾರೀ ಸದ್ದು ಮಾಡಿತ್ತು.
ಪಂದ್ಯ ಸೋತ ದಕ್ಷಿಣ ಆಫ್ರಿಕಾ
ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 304 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್ ತಂಡ, ಕೇನ್ ವಿಲಿಯಮ್ಸನ್ (133*) ಅವರ ಅಜೇಯ ಶತಕದ ಬಲದಿಂದ 48.4 ಓವರ್‌ಗಳಿಗೆ 308 ರನ್ ಗಳಿಸಿ ಗೆಲುವು ಪಡೆಯಿತು.
ದಕ್ಷಿಣ ಆಫ್ರಿಕಾ ಪರ ಯುವ ಆಟಗಾರ ಮ್ಯಾಥ್ಯೂ ಬ್ರಿಯಝ್ಕಾ 150 ರನ್ ಬಾರಿಸಿ ಪದಾರ್ಪಣ ಪಂದ್ಯದಲ್ಲೇ ಗರಿಷ್ಠ ರನ್ ಬಾರಿಸಿದ ವಿಶ್ವ ದಾಖಲೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ ದಿಗ್ಗಜ ಡಿಸ್ಮೆಂಡ್ ಹೇನ್ಸ್(148 ರನ್) ಹೆಸರಿನಲ್ಲಿತ್ತು. ಪಂದ್ಯ ಸೋತ ಕಾರಣ ಮ್ಯಾಥ್ಯೂ ಬ್ರಿಯಝ್ಕಾ ಅವರ ಶತಕ ವ್ಯರ್ಥವಾಯಿತು.
ಇದನ್ನೂ ಓದಿ ODI tri-series: 47ನೇ ಶತಕ ಸಿಡಿಸಿ ಎಬಿ ಡಿ ವಿಲಿಯರ್ಸ್ ದಾಖಲೆ ಸರಿಗಟ್ಟಿದ ಕೇನ್ ವಿಲಿಯಮ್ಸನ್!
ಕಿವೀಸ್‌ನ ಕೇನ್ ವಿಲಿಯಮ್ಸನ್ ಶತಕ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರ ಒಟ್ಟಾರೆ ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಕೇನ್ ವಿಲಿಯಮ್ಸನ್ ಮೂರು ಸ್ವರೂಪಗಳಲ್ಲಿ 365 ಪಂದ್ಯವನ್ನಾಡಿ 47 ಶತಕಗಳನ್ನು ಬಾರಿಸಿದ್ದಾರೆ. ಎಬಿ ಡಿ ವಿಲಿಯರ್ಸ್ 420 ಪಂದ್ಯಗಳಿಂದ 47 ಶತಕಗಳನ್ನು ಸಿಡಿಸಿದ್ದಾರೆ.