Asia Cup 2025: ಪಾಕಿಸ್ತಾನ ವಿರುದ್ಧ ಭಾರತ ಫೈನಲ್ ಗೆಲ್ಲಲಿದೆ ಎಂದ ವಸೀಮ್ ಅಕ್ರಮ್!
2025ರ ಏಷ್ಯಾ ಕಪ್ ಟೂರ್ನಿಯ ಫೈನಲ್‌ಗೂ ಮುನ್ನ ಪಾಕಿಸ್ತಾನ ತಂಡದ ಮಾಜಿ ವೇಗಿ ವಸೀಮ್ ಅಕ್ರಮ್, ಭಾರತ ತಂಡವನ್ನು ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಬಣ್ಣಿಸಿದ್ದಾರೆ. ಆದರೆ, ತಮ್ಮದೇ ಪಾಕಿಸ್ತಾನ ತಂಡದ ಬಗ್ಗೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಸೆಪ್ಟಂಬರ್ 28 ರಂದು ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ.

ಪಾಕ್ ಎದುರು ಭಾರತ ತಂಡ ಗೆಲುವು ಪಡೆಯಲಿದೆ ಎಂದ ವಸೀಮ್ ಅಕ್ರಮ್. -

ದುಬೈ: ಪಾಕಿಸ್ತಾನದ ದಂತಕಥೆ ವಸೀಮ್ ಅಕ್ರಮ್ (Wasim Akram) ಭಾರತ ತಂಡ (India) ಏಷ್ಯಾ ಕಪ್ (Asia Cup 2025) ಗೆಲ್ಲುವ ನೆಚ್ಚಿನ ತಂಡ ಎಂದು ಘೋಷಿಸಿದ್ದಾರೆ. ಆದರೆ ಸೂಪರ್-4ರ ಹಂತದಲ್ಲಿ ಕಡಿಮೆ ಸ್ಕೋರ್‌ಗಳ ಹೊರತಾಗಿಯೂ ಬಾಂಗ್ಲಾದೇಶವನ್ನು ಸೋಲಿಸಿದ ಸಲ್ಮಾನ್ ಆಘಾ ನಾಯಕತ್ವದ ಪಾಕಿಸ್ತಾನ, ತಮ್ಮ ಆತ್ಮವಿಶ್ವಾಸ ಮತ್ತು ವೇಗವನ್ನು ಕಾಯ್ದುಕೊಳ್ಳುತ್ತದೆ ಎಂದು ಅವರು ನಿರೀಕ್ಷಿಸುತ್ತಾರೆ. ಕಳೆದ ಗುರುವಾರ ಬಾಂಗ್ಲಾದೇಶ ವಿರುದ್ಧದ 136 ರನ್‌ಗಳ ಸಾಧಾರಣ ಗುರಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಉಳಿಸಿಕೊಂಡಿತ್ತು. ಇದೀಗ ಸೆಪ್ಟಂಬರ್ 28 ರಂದು ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
"ಇದು ಭಾರತ vs ಪಾಕಿಸ್ತಾನ ಪಂದ್ಯ ಮತ್ತು ಭಾನುವಾರದಂದು ಪಾಕಿಸ್ತಾನದ ಬೌಲಿಂಗ್ ಪರಿಣಾಮಕಾರಿಯಾಗಲಿದೆ ಎಂದು ನಾನು ನಿರೀಕ್ಷಿಸುತ್ತೇನೆ. ಈ ಪಂದ್ಯದಲ್ಲೂ ಭಾರತ ಖಂಡಿತವಾಗಿಯೂ ಗೆಲ್ಲುವ ನೆಚ್ಚಿನ ತಂಡವಾಗಿದೆ," ಎಂದು ಭವಿಷ್ಯ ನುಡಿದ ವಸೀಮ್ ಅಕ್ರಮ್, "ಆದಾಗ್ಯೂ, ಈ ಸ್ವರೂಪದಲ್ಲಿ ಏನು ಬೇಕಾದರೂ ಆಗಬಹುದು ಎಂದು ನಾನು ನೋಡಿದ್ದೇನೆ ಹಾಗೂ ನೀವೂ ನೋಡಿದ್ದೀರಿ. ಒಂದು ಉತ್ತಮ ಇನಿಂಗ್ಸ್, ಒಂದು ಉತ್ತಮ ಸ್ಪೆಲ್ ಪಂದ್ಯದ ಹಾದಿಯನ್ನು ಬದಲಾಯಿಸಬಹುದು," ಎಂದು ಹೇಳಿದ್ದಾರೆ.
IND vs PAK: ಔಟ್ ಆಫ್ ಫಾರ್ಮ್ ಸೂರ್ಯಕುಮಾರ್ ಯಾದವ್‌ಗೆ ಸುನೀಲ್ ಗವಾಸ್ಕರ್ ಮಹತ್ವದ ಸಲಹೆ!
ಭಾರತಕ್ಕೆ ಪಾಕಿಸ್ತಾನ ಸವಾಲು ಹಾಕಬಹುದು: ಅಕ್ರಮ್
"ಭಾನುವಾರ ಪಾಕಿಸ್ತಾನ ಈ ಆತ್ಮವಿಶ್ವಾಸ ಮತ್ತು ಆವೇಗವನ್ನು ಮುಂದುವರಿಸಬೇಕು ಮತ್ತು ತಮ್ಮನ್ನು ತಾವು ಬೆಂಬಲಿಸಿಕೊಂಡು ಚುರುಕಾಗಿ ಆಡಬೇಕು" ಎಂದು ಹೇಳಿದ ವೇಗದ ಬೌಲಿಂಗ್ ದಿಗ್ಗಜ, "ಪಂದ್ಯದ ಆರಂಭಿಕ ಓವರ್‌ಗಳಲ್ಲಿ ಪಾಕಿಸ್ತಾನ, ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಅವರು ಭಾರತದ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೇರಬಹುದು," ಎಂದು ಅಕ್ರಮ್ ತಿಳಿಸಿದ್ದಾರೆ. ಸೆಪ್ಟೆಂಬರ್ 21 ರಂದು ಪಾಕಿಸ್ತಾನ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಗಿಲ್ ಮತ್ತು ಅಭಿಷೇಕ್ 105 ರನ್‌ಗಳ ಜೊತೆಯಾಟವನ್ನು ಆಡಿದ್ದರು.
"ಆರಂಭಿಕ ಓವರ್‌ಗಳಲ್ಲಿ ಕೆಲವು ವಿಕೆಟ್‌ಗಳು, ವಿಶೇಷವಾಗಿ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ವಿಕೆಟ್‌ಗಳು ಭಾರತವನ್ನು ಒತ್ತಡಕ್ಕೆ ಸಿಲುಕಿಸಬಹುದು. ಇದು ನಿಕಟ ಸ್ಪರ್ಧೆಯಾಗಿರಬೇಕು ಮತ್ತು ಕೊನೆಯಲ್ಲಿ ಅತ್ಯುತ್ತಮ ತಂಡ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ವಸೀಮ್ ಅಕ್ರಮ್ ಭವಿಷ್ಯ ನುಡಿದಿದ್ದಾರೆ.
IND vs PAK: ಏಷ್ಯಾ ಕಪ್ ಫೈನಲ್‌ನಲ್ಲಿ ಅರ್ಷದೀಪ್ ಸಿಂಗ್ ಆಡಬೇಕೆಂದ ಇರ್ಫಾನ್ ಪಠಾಣ್!
2025ರ ಏಷ್ಯಾ ಕಪ್ ಟೂರ್ನಿಯ 41 ವರ್ಷಗಳ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು.
ಪಾಕಿಸ್ತಾನ ವಿರುದ್ದದ ಏಷ್ಯಾ ಕಪ್ ಫೈನಲ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
- ಅಭಿಷೇಕ್ ಶರ್ಮಾ (ಓಪನರ್)
- ಶುಭಮನ್ ಗಿಲ್ (ಓಪನರ್, ಉಪ ನಾಯಕ)
- ಸೂರ್ಯಕುಮಾರ್ ಯಾದವ್ (ನಾಯಕ)
- ತಿಲಕ್ ವರ್ಮಾ (ಬ್ಯಾಟ್ಸ್‌ಮನ್)
- ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
- ಶಿವಂ ದುಬೆ (ಆಲ್‌ರೌಂಡರ್)
- ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್)
- 8.ಅಕ್ಷರ್ ಪಟೇಲ್ (ಆಲ್‌ರೌಂಡರ್)
- ಕುಲ್ದೀಪ್ ಯಾದವ್ (ಸ್ಪಿನ್ನರ್)
- ಜಸ್‌ಪ್ರೀತ್ ಬುಮ್ರಾ (ವೇಗದ ಬೌಲರ್)
- ವರುಣ್ ಚಕ್ರವರ್ತಿ (ಸ್ಪಿನ್ನರ್)