ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ಒಂದೇ ಪಂದ್ಯದಲ್ಲಿ ಮೂರು ಮಹತ್ವದ ದಾಖಲೆ ಬರೆದ ಕೊಹ್ಲಿ

LSG vs RCB: ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 3 ವಿಕೆಟಿಗೆ 227 ರನ್‌ ಪೇರಿಸಿದರೆ, ಆರ್‌ಸಿಬಿ ತಂಡವು ಈ ಬೃಹತ್‌ ಮೊತ್ತವನ್ನು 18.4 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ ನಷ್ಟಕ್ಕೆ 230 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಜತೆಗೆ 2016ರ ನಂತರ ಮೊದಲ ಬಾರಿ ಕ್ವಾಲಿಫೈಯರ್‌ 1ಕ್ಕೆ ಅರ್ಹತೆ ಪಡೆಯಿತು.

ಒಂದೇ ಪಂದ್ಯದಲ್ಲಿ ಮೂರು ಮಹತ್ವದ ದಾಖಲೆ ಬರೆದ ಕೊಹ್ಲಿ

Profile Abhilash BC May 28, 2025 7:20 AM

ಲಕ್ನೋ: ಮಂಗಳವಾರ ನಡೆದಿದ್ದ ಬೃಹತ್‌ ಮೊತ್ತದ ಐಪಿಎಲ್‌(IPL 2025) ಮೇಲಾಟದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ದದ ಮಹತ್ವದ ಪಂದ್ಯದಲ್ಲಿ ಗೆದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(LSG vs RCB) ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಲೀಗ್‌ ಹಂತ ಮುಗಿಸಿದೆ. ಜತೆಗೆ ಮೊದಲ ಕ್ವಾಲಿಫೈಯರ್‌ಗೆ ಸ್ಥಾನ ಪಡೆದಿದೆ. ಇದೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ(Virat Kohli) ಎರಡು ಪ್ರಮುಖ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಅತ್ಯಧಿಕ ಅರ್ಧಶತಕ

ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಬಿರುಸಿನ ಬ್ಯಾಟಿಂಗ್‌ ನಡೆಸಿದ ವಿರಾಟ್‌ ಕೊಹ್ಲಿ ಅರ್ಧಶತಕ ಬಾರಿಸುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಇದು ಕೊಹ್ಲಿಯ 63ನೇ ಅರ್ಧಶತಕವಾಗಿದೆ. ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್‌ ವಾರ್ನರ್‌(62) ದಾಖಲೆ ಪತನಗೊಂಡಿತು.

9 ಸಾವಿರ ರನ್‌

ಕೊಹ್ಲಿ 24 ರನ್‌ ಪೂರೈಸುತ್ತಿದ್ದಂತೆ ಟಿ20 ಇತಿಹಾಸದಲ್ಲಿ ಒಂದೇ ತಂಡದ ಪರ 9,000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಕೊಹ್ಲಿ ವಿದಾಯ ಹೇಳಿದ್ದರೂ ಕೂಡ ಫ್ರಾಂಚೈಸಿ ಲೀಗ್‌ಗಳಲ್ಲಿ ಅವರ ಬ್ಯಾಟಿಂಗ್‌ ಜೋಶ್‌ ಕಿಂಚಿತ್ತು ಕಡಿಮೆಯಾಗಿಲ್ಲ.

600 ಪ್ಲಸ್‌ ಸಾಧನೆ

ವಿರಾಟ್‌ ಹಾಲಿ ಆವೃತ್ತಿಯಲ್ಲಿ 600 ಪ್ಲಸ್‌ ಮೊತ್ತ ಬಾರಿಸುವ ಮೂಲಕ ಐಪಿಎಲ್‌ ಆವೃತ್ತಿಯಲ್ಲಿ ಅತ್ಯಧಿಕ ಬಾರಿ 600 ಪ್ಲಸ್‌ ಮೊತ್ತ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. 2013, 2016, 2023, 2024, 2025 ರಲ್ಲಿ ಕೊಹ್ಲಿ 600ಕ್ಕಿಂತ ಅಧಿಕ ರನ್‌ ಗಳಿಸಿದ್ದಾರೆ. ಕನ್ನಡಿಗ ಕೆ.ಎಲ್‌ ರಾಹುಲ್‌(2018, 2020, 2021, 2022) 4 ಬಾರಿ ಈ ಸಾಧನೆ ಮಾಡಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 3 ವಿಕೆಟಿಗೆ 227 ರನ್‌ ಪೇರಿಸಿದರೆ, ಆರ್‌ಸಿಬಿ ತಂಡವು ಈ ಬೃಹತ್‌ ಮೊತ್ತವನ್ನು 18.4 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ ನಷ್ಟಕ್ಕೆ 230 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಜತೆಗೆ 2016ರ ನಂತರ ಮೊದಲ ಬಾರಿ ಕ್ವಾಲಿಫೈಯರ್‌ 1ಕ್ಕೆ ಅರ್ಹತೆ ಪಡೆಯಿತು.