ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: 300 ಕೋಟಿ ಆಫರ್‌ ತಿರಸ್ಕರಿಸಿದ ಕೊಹ್ಲಿ!

ಒಪ್ಪಂದ ವಿಸ್ತರಣೆಗಾಗಿ ಪೂಮಾ ಕೊಹ್ಲಿಗೆ 300 ಕೋಟಿ ರೂ. ಆಫರ್‌ ಮಾಡಿತ್ತು, ಆದರೆ ಕೊಹ್ಲಿ ಇದನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. 2017ರಲ್ಲಿ ಕೊಹ್ಲಿ ಪೂಮಾ ಜತೆ 8 ವರ್ಷಗಳ ಅವಧಿಗೆ ರಾಯಭಾರಿಯಾಗಿ 110 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರು.

300 ಕೋಟಿ ಆಫರ್‌ ತಿರಸ್ಕರಿಸಿದ ಕೊಹ್ಲಿ!

Profile Abhilash BC Apr 12, 2025 11:03 AM

ಮುಂಬಯಿ: ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ(Virat Kohli) ಅವರು ಕ್ರೀಡಾ ಉತ್ಪನ್ನಗಳ ತಯಾರಿಕ ಕಂಪೆನಿ ಪೂಮಾದೊಂದಿಗಿನ ತಮ್ಮ ಸುದೀರ್ಘ 8 ವರ್ಷಗಳ ಒಪ್ಪಂದವನ್ನು ಕೊನೆಗೊಳಿಸಿದ್ದಾರೆ. ಈ ವಿಚಾರವನ್ನು ಪೂಮಾ (Puma) ಇಂಡಿಯಾ ಖಚಿತಪಡಿಸಿದೆ. ಒಪ್ಪಂದ ವಿಸ್ತರಣೆಗಾಗಿ ಪೂಮಾ ಕೊಹ್ಲಿಗೆ 300 ಕೋಟಿ ರೂ. ಆಫರ್‌ ಮಾಡಿತ್ತು, ಆದರೆ ಕೊಹ್ಲಿ ಇದನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. 2017ರಲ್ಲಿ ಕೊಹ್ಲಿ ಪೂಮಾ ಜತೆ 8 ವರ್ಷಗಳ ಅವಧಿಗೆ ರಾಯಭಾರಿಯಾಗಿ 110 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರು.

'ವಿರಾಟ್‌ ಕೊಹ್ಲಿ ಮತ್ತು ನಮ್ಮ ನಡುವಿನ ದೀರ್ಘಕಾಲದ ಸಹಭಾಗಿತ್ವ ಕೊನೆಗೊಂಡಿದೆ' ಎಂದು ಪೂಮಾ ಖಚಿತಪಡಿಸಿದೆ. ಕೊಹ್ಲಿ ಕ್ರೀಡಾ ಮನರಂಜನಾ ಕಂಪನಿ ಅಜಿಲಿಟಾಸ್ ಜತೆ ಕೈಜೋಡಿಸಲಿದ್ದಾರೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.



36 ವರ್ಷದ ವಿರಾಟ್ ಕೊಹ್ಲಿ ಸದ್ಯ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಗುರುವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ವಿರುದ್ಧದ ಪಂದ್ಯದಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್‌ ಬಾರಿಸುವ ಮೂಲಕ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಇತಿಹಾಸದಲ್ಲಿ 1000 ಬೌಂಡರಿಗಳನ್ನು (ಫೋರ್ಸ್‌ + ಸಿಕ್ಸ್‌ ಸೇರಿಸಿ) ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಮೈಲುಗಲ್ಲು ನಿರ್ಮಿಸಿದ್ದರು.

ಇದೇ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ ಫಿಲ್‌ ಸಾಲ್ಟ್‌ ಅವರನ್ನು ರನ್‌ ಔಟ್‌ ಮಾಡಿದ ಕೊಹ್ಕಿ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೊಹ್ಲಿ ಅವರ ಸ್ವಾರ್ಥದಿಂದಾಗಿ ಫಿಲ್‌ ಸಾಲ್ಟ್‌ ರನ್‌ಔಟ್‌ ಆಗಬೇಕಾಯಿತು ಎಂದು ಫ್ಯಾನ್ಸ್‌ ಕಿಡಿಕಾರಿದ್ದರು.

ಇದನ್ನೂ ಓದಿ IPL 2025: ಸತತ 5 ಪಂದ್ಯ ಸೋತ ಚೆನ್ನೈ ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ತಂಡ ಡೆಲ್ಲಿ ವಿರುದ್ಧ 6 ವಿಕೆಟ್‌ ಅಂತರದ ಸೋಲು ಕಂಡು ತವರಿನಲ್ಲಿ ಸತತ ಎರಡನೇ ಸೋಲು ಕಂಡ ಅವಮಾನ ಎದುರಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ಉತ್ತಮ ಆರಂಭದ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್‌ಗೆ 163 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ರಾಹುಲ್‌ ಅವರ ಅಜೇಯ ಅರ್ಧಶತಕದ ನೆರವಿನಿಂದ 17.5 ಓವರ್‌ಗಳಲ್ಲಿ 4 ವಿಕೆಟ್‌ಗೆ 169 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತ್ತು.