ಹಲವು ವರ್ಷಗಳ ಬಳಿಕ ಗಂಗೂಲಿ-ಶಾರುಖ್ ಭೇಟಿ; ಎಲ್ಲಿ?, ಯಾವಾಗ?
Shah Rukh Khan meets Sourav Ganguly: 2008 ರಲ್ಲಿ ಕೆಕೆಆರ್ ತಂಡದ ಉದ್ಘಾಟನಾ ವರ್ಷದಲ್ಲಿ ಸೌರವ್ ಗಂಗೂಲಿ ನಾಯಕರಾಗಿದ್ದರು. 2009 ರಲ್ಲಿ ನಾಯಕತ್ವ ತ್ಯಜಿಸಿ 2010 ರ ತನಕ ಕೆಕೆಆರ್ ಪರ ಆಡಿದ್ದರು. ಕೆಕೆಆರ್ ಬಿಟ್ಟ ಬಳಿಕ ಗಂಗೂಲಿ ಫ್ರಾಂಚೈಸಿ ಜತೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಹಲವು ಬಾರಿ ಬಹಿರಂಗವಾಗಿಯೇ ಫ್ರಾಂಚೈಸಿ ವಿರುದ್ಧ ಅಸಾಮಾಧಾನ ಹೊರಹಾಕಿದ್ದರು.
Shah Rukh Khan And Sourav Ganguly Hug At Eden Gardens -
ಕೋಲ್ಕತಾ, ಎ.7: ಈಡನ್ ಗಾರ್ಡನ್ಸ್(Eden Gardens)ನಲ್ಲಿ ಸೋಮವಾರ ನಡೆಯ ಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್(KKR vs PBKS) ನಡುವಿನ ಐಪಿಎಲ್ ಪಂದ್ಯವು ಮಳೆಯಿಂದ ರದ್ದುಗೊಂಡಿತು. ಆದರೆ ಪಂದ್ಯಕ್ಕಿಂತ ಪ್ರಮುಖ ಹೈಲೈಟ್ ಎಂದರೆ ಕೆಕೆಆರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋ, ಅದರಲ್ಲಿ ಶಾರುಖ್ ಖಾನ್(Shah Rukh Khan meets Sourav Ganguly ) ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಹಲವು ವರ್ಷಗಳ ಬಳಿಕ ಭೇಟಿಯಾಗಿ ಅಪ್ಪಿಕೊಂಡಿರುವುದು ಕಂಡುಬಂದಿದೆ. ಈ ಹೃದಯಸ್ಪರ್ಶಿ ವಿಡಿಯೊ ಅಭಿಮಾನಿಗಳ ಮನಗೆದ್ದಿದೆ.
ಶಾರುಖ್ ತಮ್ಮ ತಂಡವನ್ನು ಬೆಂಬಲಿಸಲು ಮಗಳು ಸುಹಾನಾ ಖಾನ್ ಜತೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ಗೆ ಬಂದಿದ್ದರು. ವೇಳೆ ಅವರು ತಂಡದ ಮಾಜಿ ಹಾಗೂ ಮೊದಲ ನಾಯಕ ಸೌರವ್ ಗಂಗೂಲಿಯನ್ನು ಹಲವ ವರ್ಷಗಳ ಬಳಿಕ ಭೇಟಿಯಾದರು. ಪರಸ್ಪರ ಅಪ್ಪಿಕೊಂಡು ಕೆಲ ಕಾಲ ಕುಶಲೋಪರಿ ನಡೆಸಿದರು. ಈ ವಿಡಿಯೊವನ್ನು ಕೆಕೆಆರ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು "ರಾಜ ಬಂಗಾಳದ ರಾಜಕುಮಾರನನ್ನು ಭೇಟಿಯಾದಾಗ" ಎಂದು ವೀಡಿಯೊದ ಶೀರ್ಷಿಕೆ ಬರೆದಿದೆ.
ಈ ವಿಡಿಯೊ ಕಂಡ ಒಬ್ಬ ಅಭಿಮಾನಿ "ಕೆಕೆಆರ್ ತರಬೇತುದಾರರಾಗಿ ದಾದಾ ಅವರನ್ನು ಮರಳಿ ತನ್ನಿ" ಎಂದು ಬರೆದಿದ್ದಾರೆ, ಮತ್ತೊಬ್ಬ ಅಭಿಮಾನಿ "'ಕಿಂಗ್‌ಹುಡ್' 'ಪ್ರಿನ್ಸ್‌ಹುಡ್' ಅನ್ನು ಭೇಟಿಯಾದಾಗ, ಒಂದು ಮ್ಯಾಜಿಕ್ ಸೃಷ್ಟಿಯಾಗುತ್ತದೆ ಮತ್ತು ಅದನ್ನೇ ನೀವು "ಬಾಲ್ಯದ ಕಾಲ್ಪನಿಕ ಕಥೆಗಳು!" ಎಂದು ಕರೆಯುತ್ತೀರಿ ಎಂದು ಕಮೆಂಟ್ ಮಾಡಿದ್ದಾರೆ.
'ಟಿ20 ವಿಶ್ವಕಪ್‌ನಲ್ಲಿ ಏನಾಯಿತು ಎಂಬುದನ್ನು ನೋಡಿದ್ದೇವೆ': ಸ್ಯಾಮ್ಸನ್ ವೈಫಲ್ಯಕ್ಕೆ ಕಾರಣ ತಿಳಿಸಿದ ಕೋಚ್
2008 ರಲ್ಲಿ ಕೆಕೆಆರ್ ತಂಡದ ಉದ್ಘಾಟನಾ ವರ್ಷದಲ್ಲಿ ಸೌರವ್ ಗಂಗೂಲಿ ನಾಯಕರಾಗಿದ್ದರು. 2009 ರಲ್ಲಿ ನಾಯಕತ್ವ ತ್ಯಜಿಸಿ 2010 ರ ತನಕ ಕೆಕೆಆರ್ ಪರ ಆಡಿದ್ದರು. ಕೆಕೆಆರ್ ಬಿಟ್ಟ ಬಳಿಕ ಗಂಗೂಲಿ ಫ್ರಾಂಚೈಸಿ ಜತೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಹಲವು ಬಾರಿ ಬಹಿರಂಗವಾಗಿಯೇ ಫ್ರಾಂಚೈಸಿ ವಿರುದ್ಧ ಅಸಾಮಾಧಾನ ಹೊರಹಾಕಿದ್ದರು.
ಪಂದ್ಯದ ಬಗ್ಗೆ ಹೇಳುವುದಾದರೆ, ಮಳೆಯಿಂದ ವಿಳಂಬವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ 3.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 25 ರನ್ ಗಳಿಸಿದ ವೇಳೆ ಮತ್ತೆ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. ರಾತ್ರಿ 11:14ರ ಕಟ್ ಆಫ್‌ಗೆ 40 ನಿಮಿಷಗಳ ಮೊದಲು ಮಳೆ ನಿಂತಿತು. ಆದರೆ, ಐದು ಓವರ್‌ಗಳ ಪಂದ್ಯಕ್ಕೆ ಮೈದಾನವನ್ನು ಸಿದ್ಧಪಡಿಸಲು ಸಾಕಷ್ಟು ಸಮಯವಿರಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.