ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭಾರತ ಪರ ಮುಂದಿನ ಏಕದಿನ ಪಂದ್ಯ ಆಡುವುದು ಯಾವಾಗ?
Virat Kohli, Rohit Sharma: ಟೆಸ್ಟ್ ಮತ್ತು ಟಿ20ಗೆ ನಿವೃತ್ತಿ ಹೇಳಿರುವ ರೋಹಿತ್ ಮತ್ತು ಕೊಹ್ಲಿ ಕೇವಲ ಏಕದಿನದಲ್ಲಿ ಮಾತ್ರ ಭಾರತ ಪರ ಆಡುತ್ತಿದ್ದಾರೆ. ಭಾರತಕ್ಕೆ ಮುಂದಿನ ಏಕದಿನ ಸರಣಿ ಇರುವುದು ಜುಲೈನಲ್ಲಿ. ಇಂಗ್ಲೆಂಡ್‌ಗೆ ಐದು ಪಂದ್ಯಗಳ T20I ಮತ್ತು ಮೂರು ಪಂದ್ಯಗಳ ODI ಸರಣಿಯನ್ನು ಆಡಲು ಪ್ರಯಾಣ ಬೆಳೆಸಲಿದೆ.
virat kohli and rohit sharma -
ಇಂದೋರ್, ಜ.19: ಭಾರತ ಮತ್ತು ನ್ಯೂಜಿಲ್ಯಾಂಡ್(IND vs NZ) ನಡವಣ 3 ಪಂದ್ಯಗಳ ಏಕದಿನ ಸರಣಿ ಮುಕ್ತಾಯ ಕಂಡಿದೆ. ಭಾನುವಾರ ರಾತ್ರಿ ನಡೆದಿದ್ದ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 41 ರನ್‌ಗಳ ಗೆಲುವು ಸಾಧಿಸುವ ಮೂಲಕ 38 ವರ್ಷಗಳ ನಂತರ ಭಾರತದಲ್ಲಿ ಏಕದಿನ ಕ್ರಿಕೆಟ್ ಸರಣಿ ಜಯಿಸಿತು. ಭಾರತ ಪರ ವಿರಾಟ್ ಕೊಹ್ಲಿ(Virat Kohli) ಶತಕ ಬಾರಿಸಿದರೂ ಗೆಲುವು ಒಲಿಯಲಿಲ್ಲ. ಇದೀಗ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ(Rohit Sharma) ಮುಂದೆ ಭಾರತ ಪರ ಯಾವಾಗ ಸರಣಿ ಸರಣಿ ಆಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳದ್ದು.
ಹೌದು, ಟೆಸ್ಟ್ ಮತ್ತು ಟಿ20ಗೆ ನಿವೃತ್ತಿ ಹೇಳಿರುವ ರೋಹಿತ್ ಮತ್ತು ಕೊಹ್ಲಿ ಕೇವಲ ಏಕದಿನದಲ್ಲಿ ಮಾತ್ರ ಭಾರತ ಪರ ಆಡುತ್ತಿದ್ದಾರೆ. ಭಾರತಕ್ಕೆ ಮುಂದಿನ ಏಕದಿನ ಸರಣಿ ಇರುವುದು ಜುಲೈನಲ್ಲಿ. ಇಂಗ್ಲೆಂಡ್‌ಗೆ ಐದು ಪಂದ್ಯಗಳ T20I ಮತ್ತು ಮೂರು ಪಂದ್ಯಗಳ ODI ಸರಣಿಯನ್ನು ಆಡಲು ಪ್ರಯಾಣ ಬೆಳೆಸಲಿದೆ. ಮೂರು ಏಕದಿನ ಪಂದ್ಯಗಳು ಜುಲೈ 14 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ, ಜುಲೈ 16 ರಂದು ಕಾರ್ಡಿಫ್‌ನಲ್ಲಿ ಮತ್ತು ಜುಲೈ 19 ರಂದು ಲಾರ್ಡ್ಸ್‌ನಲ್ಲಿ ನಡೆಯಲಿವೆ.
ಅಂದರೆ 6 ತಿಂಗಳ ಬಳಿಕ ರೋಹಿತ್ ಮತ್ತು ವಿರಾಟ್ ಮತ್ತೆ ಭಾರತ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇದಕ್ಕೂ ಮುನ್ನ ಉಭಯ ಆಟಗಾರರ ಆಟವನ್ನು ಐಪಿಎಲ್‌ನಲ್ಲಿ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.
IND vs NZ: ಶತಕ ಸಿಡಿಸಿ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನೆಡೆಸಿದ ನ್ಯೂಜಿಲ್ಯಾಂಡ್ ಆರಂಭಿಕ ಆಘಾತದ ಹೊರತಾಗಿಯೂ 338 ರನ್ ಬಾರಿಸಿತು. ಕಠಿಣ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡ 46 ಓವರ್‌ಗಳಲ್ಲಿ 296 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ವಿರಾಟ್ 108 ಎಸೆತಗಳಲ್ಲಿ 124 ರನ್ ಗಳಿಸಿದರು. ಕಿವೀಸ್ ತಂಡದ ಝ್ಯಾಕ್ರಿ ಫೌಲ್ಕೆಸ್ (77ಕ್ಕೆ3) ಹಾಗೂ ಕ್ರಿಸ್ಟನ್ ಕ್ಲರ್ಕ್ (54ಕ್ಕೆ3) ಶಿಸ್ತಿನ ದಾಳಿ ನಡೆಸಿದರು. ಡ್ಯಾರಿಲ್ ಮಿಚೆಲ್ 137 ಮತ್ತು ಗ್ಲೆನ್ ಫಿಲಿಪ್ಸ್ 106 ಶತಕ ಬಾರಿಸಿ ಮಿಂಚಿದರು. ಈ ಜೋಡಿ 4ನೇ ವಿಕೆಟ್‌ಗೆ 219 ರನ್ ಸೇರಿಸಿದರು. ತಂಡವು ಬೃಹತ್ ಮೊತ್ತ ಗಳಿಸಲು ಕಾರಣರಾದರು.
ಸಂಕ್ಷಿಪ್ತ ಸ್ಕೋರು
ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 8ಕ್ಕೆ337 (ವಿಲ್ ಯಂಗ್ 30, ಡ್ಯಾರಿಲ್ ಮಿಚೆಲ್ 137, ಗ್ಲೆನ್ ಫಿಲಿಪ್ಸ್ 106, ಮೈಕೆಲ್ ಬ್ರೇಸ್‌ವೆಲ್ ಔಟಾಗದೇ 28, ಅರ್ಷದೀಪ್ ಸಿಂಗ್ 63ಕ್ಕೆ3, ಹರ್ಷಿತ್ ರಾಣಾ 84ಕ್ಕೆ3).
ಭಾರತ: 46 ಓವರ್‌ಗಳಲ್ಲಿ 296 (ಶುಭಮನ್ ಗಿಲ್ 23, ವಿರಾಟ್ ಕೊಹ್ಲಿ 124, ನಿತೀಶ್ ಕುಮಾರ್ ರೆಡ್ಡಿ 53, ಹರ್ಷಿತ್ ರಾಣಾ 52, ಝ್ಯಾಕ್ರಿ ಫೌಲ್ಕೆಸ್ 77ಕ್ಕೆ3, ಕ್ರಿಸ್ಟನ್ ಕ್ಲರ್ಕ್ 54ಕ್ಕೆ3, ಜೇಡನ್ ಲೆನಾಕ್ಸ್ 42ಕ್ಕೆ2).