ಬಾಲ ಮುದುರಿಕೊಂಡು ವಿಶ್ವಕಪ್ ಆಡಲು ಲಂಕಾಗೆ ಪ್ರಯಾಣಿಸಲಿರುವ ಪಾಕ್
T20 World Cup: ಐಸಿಸಿ ಪಾಕಿಸ್ತಾನದ ಮೇಲೆ ಭಾರಿ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಯಿತ್ತು. ಮತ್ತು ಇದು ಪಿಸಿಬಿಗೆ ದೊಡ್ಡ ಆರ್ಥಿಕ ಹೊಡೆತ ಬೀಳಲಿದೆ. ಭಾರತ ಪಂದ್ಯ ಅಥವಾ ವಿಶ್ವಕಪ್ ಅನ್ನು ಬಹಿಷ್ಕರಿಸುವುದು ಐಸಿಸಿಯೊಂದಿಗಿನ ಅವರ ಭಾಗವಹಿಸುವಿಕೆ ಒಪ್ಪಂದದ ಉಲ್ಲಂಘನೆಯಾಗುತ್ತದೆ.
Pakistan team -
ನವದೆಹಲಿ, ಜ.31: ಟಿ20 ವಿಶ್ವಕಪ್‌ನಲ್ಲಿ(T20 World Cup) ಪಾಲ್ಗೊಳ್ಳುವ ವಿಚಾರದಲ್ಲಿ ಬಾಂಗ್ಲಾದೇಶವನ್ನು ಬೆಂಬಲಿ ಟೂರ್ನಿಯನ್ನು ಬಹಿಷ್ಕರಿಸಲು ಮುಂದಾಗಿದ್ದ ಪಾಕಿಸ್ತಾನ ಇದೀಗ ಬಾಲ ಮುದುರಿಕೊಂಡು ವಿಶ್ವಕಪ್ ಆಡಲು ನಿರ್ಧರಿಸಿದೆ. ಫೆಬ್ರವರಿ 2ರಂದು ಶ್ರೀಲಂಕೆಗೆ ತೆರಳಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಪಾಕ್ ಕ್ರಿಕೆಟ್ ಮಂಡಳಿಯುವ ಆಟಗಾರರ ಪ್ರಯಾಣಕ್ಕೆ ಈಗಾಗಲೇ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ಕೊಲಂಬೊಗೆ ಫೆ.2ರಂದು ತಂಡವು ತೆರಳಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಾಂಗ್ಲಾದೇಶ ತಂಡವನ್ನು ಟೂರ್ನಿಯಿಂದ ಐಸಿಸಿಯು ಹೊರಹಾಕಿತ್ತು. ಐಸಿಸಿಯ ಈನಿರ್ಣಯವನ್ನು ಖಂಡಿಸಿದ್ದ ಪಾಕ್ ತಂಡವು ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಹೇಳಿತ್ತು. ಮಾತ್ರವಲ್ಲದೆ ಒಂದೊಮ್ಮೆ ಟೂರ್ನಿಯಲ್ಲೂ ಪಾಲ್ಗೊಂಡರೂ ಭಾರತ ವಿರುದ್ಧ ಪಂದ್ಯ ಆಡುವುದಿಲ್ಲ ಎಂದು ಹೇಳಿತ್ತು. ಆದರೆ ಐಸಿಸಿ ತೆಗೆದುಕೊಳ್ಳವ ಕಠಿಣ ನಿರ್ಧಾರಕ್ಕೆ ಬೆದರಿದ ಪಾಕ್ ಎಲ್ಲ ಬೆದರಿಕೆಗಳನ್ನು ವಾಪಸ್ ಪಡೆದಿದೆ.
ಐಸಿಸಿ ಪಾಕಿಸ್ತಾನದ ಮೇಲೆ ಭಾರಿ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಯಿತ್ತು. ಮತ್ತು ಇದು ಪಿಸಿಬಿಗೆ ದೊಡ್ಡ ಆರ್ಥಿಕ ಹೊಡೆತ ಬೀಳಲಿದೆ. ಭಾರತ ಪಂದ್ಯ ಅಥವಾ ವಿಶ್ವಕಪ್ ಅನ್ನು ಬಹಿಷ್ಕರಿಸುವುದು ಐಸಿಸಿಯೊಂದಿಗಿನ ಅವರ ಭಾಗವಹಿಸುವಿಕೆ ಒಪ್ಪಂದದ ಉಲ್ಲಂಘನೆಯಾಗುತ್ತದೆ. ಈ ಸಂದರ್ಭದಲ್ಲಿ, ಕ್ರಿಕೆಟ್ ಸಂಸ್ಥೆಯು ವಿಶ್ವಕಪ್ ಮತ್ತು ಏಷ್ಯಾ ಕಪ್‌ನಂತಹ ಜಾಗತಿಕ ಮತ್ತು ದ್ವಿಪಕ್ಷೀಯ ಪಂದ್ಯಾವಳಿಗಳಿಂದ ಪಾಕ್ ತಂಡವನ್ನು ಅಮಾನತುಗೊಳಿಸಬಹುದು.
ರಾಜಕೀಯ ದ್ವೇಷದಿಂದಾಗಿ ಪಾಕಿಸ್ತಾನ ಭಾರತದಲ್ಲಿ ತನ್ನ ಪಂದ್ಯಗಳನ್ನು ಆಡಲು ನಿರಾಕರಿಸಿತು, ಇದರಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಪಂದ್ಯಗಳನ್ನು ತಟಸ್ಥ ಶ್ರೀಲಂಕಾಕ್ಕೆ ಸ್ಥಳಾಂತರಿಸಿತು. ಭದ್ರತಾ ಭಯದಿಂದಾಗಿ ಬಾಂಗ್ಲಾದೇಶ ಕೂಡ ತನ್ನ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಲು ಪ್ರಯತ್ನಿಸಿತು, ಆದರೆ ಐಸಿಸಿ ಆ ವಿನಂತಿಯನ್ನು ತಿರಸ್ಕರಿಸಿತು. ಬಾಂಗ್ಲಾದೇಶ ಪಂದ್ಯಾವಳಿಯಿಂದ ಹಿಂದೆ ಸರಿಯಿತು ಮತ್ತು ಸ್ಕಾಟ್ಲೆಂಡ್ ಅನ್ನು ಬದಲಿಯಾಗಿ ಆಯ್ಕೆ ಮಾಡಲಾಯಿತು.
ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ
ಸಲ್ಮಾನ್ ಅಲಿ ಆಘಾ (ನಾಯಕ), ಬಾಬರ್ ಅಜಂ, ಶಾಹೀನ್ ಶಾ ಆಫ್ರಿದಿ, ಫಖರ್ ಜಮಾನ್, ಶಾದಾಬ್ ಖಾನ್, ನಸೀಮ್ ಶಾ, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಖವಾಜಾ ಮೊಹಮ್ಮದ್ ನಫಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್‌ಜಾದಾ ಫರ್ಹಾನ್, ಸೈಮ್ ಅಯೂಬ್, ಉಸ್ಮಾನ್ ಖಾನ್, ಉಸ್ಮಾನ್ ತಾರಿಖ್.