ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೀಮ್‌ ಇಂಡಿಯಾ ಆಟಗಾರರ ಬಗ್ಗೆ ಜಡೇಜಾ ಪತ್ನಿಯ ವಿವಾದಾತ್ಮಕ ಹೇಳಿಕೆ

Jadeja wife: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಾಮ್‌ನಗರ (ಉತ್ತರ) ಕ್ಷೇತ್ರದಿಂದ ಸ್ಪರ್ಧಿಸಿರುವ ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ, ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜ ಭರ್ಜರಿ ಗೆಲುವು ದಾಖಲಿಸಿದ್ದರು. ಪ್ರಸ್ತುತ ಅವರು ಗುಜರಾತ್ ರಾಜ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿದೇಶಿ ಪ್ರವಾಸದಲ್ಲಿ...; ಜಡೇಜಾ ಪತ್ನಿಯ ವಿವಾದಾತ್ಮಕ ಹೇಳಿಕೆ

Rivaba jadeja -

Abhilash BC
Abhilash BC Dec 11, 2025 12:25 PM

ಅಹಮದಾಬಾದ್‌, ಡಿ.11: ತನ್ನ ಗಂಡನನ್ನು ಹೊಗಳುವ ಬರದಲ್ಲಿ ರವೀಂದ್ರ ಜಡೇಜಾ(Ravindra Jadeja) ಪತ್ನಿ ರಿವಾಬಾ ಜಡೇಜ(Jadeja wife) ಅವರು ಟೀಮ್‌ ಇಂಡಿಯಾದ ಆಟಗಾರರ ಬಗ್ಗೆ ನೀಡಿರುವ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ರವೀಂದ್ರ ಜಡೇಜಾ ಯಾವುದೇ ರೀತಿಯ ದುಷ್ಕೃತ್ಯದಲ್ಲಿ ಎಂದಿಗೂ ಭಾಗಿಯಾಗಿಲ್ಲ. ಆದರೆ ವಿದೇಶಿ ಪ್ರವಾಸದಲ್ಲಿ ಸಹ ಆಟಗಾರರು ಹಲವು ದುಷ್ಕೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ಗುಜರಾತ್‌ನ ಶಿಕ್ಷಣ ಸಚಿವೆಯಾಗಿರುವ ರಿವಾಬಾ ಜಡೇಜಾ, ಇತ್ತೀಚೆಗೆ ತಮ್ಮ ಭಾಷಣದ ಸಮಯದಲ್ಲಿ ತಮ್ಮ ಪತಿ ರವೀಂದ್ರ ಜಡೇಜಾ ಲಂಡನ್, ದುಬೈ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಆಡುತ್ತಾರೆ. ಆದರೆ ಅವರು ಯಾವುದೇ ರೀತಿಯ ದುಷ್ಕೃತ್ಯದಲ್ಲಿ ಎಂದಿಗೂ ಭಾಗಿಯಾಗಿಲ್ಲ ಎಂದು ಹೇಳಿದ್ದರು. ಇದೇ ವೇಳೆ ವಿದೇಶಿ ಪ್ರವಾಸಗಳಲ್ಲಿ ಅನೇಕ ಭಾರತೀಯ ಆಟಗಾರರು ದುಷ್ಕೃತ್ಯದಲ್ಲಿ ತೊಡಗುತ್ತಾರೆ ಎಂದು ರಿವಾಬಾ ಹೇಳಿಕೊಂಡಿದ್ದರು. ಅವರು ಯಾರನ್ನೂ ಹೆಸರಿಸದಿದ್ದರೂ, ಅವರ ಹೇಳಿಕೆಯು ಭಾರತೀಯ ತಂಡದಲ್ಲಿನ ಆಟಗಾರರ ಇಮೇಜ್ ಮತ್ತು ನಡವಳಿಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ರಿವಾಬಾ ಜಡೇಜಾ ಭಾಷಣ ಇಲ್ಲಿದೆ



ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಾಮ್‌ನಗರ (ಉತ್ತರ) ಕ್ಷೇತ್ರದಿಂದ ಸ್ಪರ್ಧಿಸಿರುವ ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ, ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜ ಭರ್ಜರಿ ಗೆಲುವು ದಾಖಲಿಸಿದ್ದರು. ತಮ್ಮ ಸಮೀಪದ ಸ್ಪರ್ಧಿ ಆಮ್ ಆದ್ಮಿ ಪಕ್ಷದ ಕರ್ಸನ್ ಕರ್ಮುರ್ ಅವರನ್ನು 40,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಪ್ರಸ್ತುತ ಅವರು ಗುಜರಾತ್ ರಾಜ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ IND vs ENG: ರವೀಂದ್ರ ಜಡೇಜಾ-ಬ್ರೈಡೆನ್‌ ಕಾರ್ಸ್‌ ನಡುವೆ ಮಾತಿನ ಚಕಮಕಿ! ವಿಡಿಯೊ

ನವೆಂಬರ್ 2, 1990 ರಂದು ರಾಜ್‌ಕೋಟ್‌ನಲ್ಲಿ ಜನಿಸಿದ ರಿವಾಬಾ, ನಗರದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ನಿಕಟ ಸಂಪರ್ಕ ಹೊಂದಿರುವ ಕುಟುಂಬಕ್ಕೆ ಸೇರಿದವರು. ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ರಿವಾಬಾ ಅವರ ಚಿಕ್ಕಪ್ಪ ಹರಿ ಸಿಂಗ್ ಸೋಲಂಕಿ, ರಾಜ್‌ಕೋಟ್‌ನಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದರು. 2016 ರಲ್ಲಿ ರವೀಂದ್ರ ಜಡೇಜಾ ಅವರನ್ನು ವಿವಾಹವಾದರು. ರಾಜ್‌ಕೋಟ್‌ನಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಈ ದಂಪತಿಗೆ ನಿಧ್ಯಾನ ಎಂಬ ಮಗಳಿದ್ದಾಳೆ.

ಬಿಜೆಪಿ ಸೇರುವ ಮೊದಲು, ರಿವಾಬಾ ಜಡೇಜಾ ರಜಪೂತ ಸಂಘಟನೆಯ ಕರ್ಣಿ ಸೇನಾದ ಸದಸ್ಯರಾಗಿದ್ದರು. 2018 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತ್' ಚಿತ್ರದಲ್ಲಿ ಆಕ್ಷೇಪಾರ್ಹ ವಿಷಯವಿದೆ ಎಂದು ಆರೋಪಿಸಿ ಕರ್ಣಿ ಸೇನಾ ಬೃಹತ್ ಪ್ರತಿಭಟನೆಗಳನ್ನು ನಡೆಸಿದಾಗ ಅವರು ಬೆಳಕಿಗೆ ಬಂದರು. ಅದೇ ವರ್ಷ, ಅವರು ಕರ್ಣಿ ಸೇನಾದ ಮಹಿಳಾ ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡರು.