ಪಾನಿಪುರಿ ರುಚಿಗೆ ಫಿದಾ ಆದ ನೈಜೀರಿಯಾದ ಮಹಿಳೆ: ಭಾರೀ ವೈರಲ್ ಆಗ್ತಿದೆ ಈ ವಿಡಿಯೊ
Viral Video: ನೈಜೀರಿಯಾದ ಮಹಿಳೆಯೊಬ್ಬರು ಭಾರತೀಯ ವಿವಾಹವೊಂದರಲ್ಲಿ ಪಾನಿಪುರಿ ಸವಿದು ಖುಷಿಪಟ್ಟಿರುವ ವಿಡಿಯೊವೊಂದು ವೈರಲ್ ಆಗಿದೆ. ಮಹಿಳೆಯೂ ಪಾನಿಪುರಿಯ ರುಚಿಯನ್ನು ಸವಿದು ತೃಪ್ತಿ ಪಟ್ಟಿರುವ ಈ ದೃಶ್ಯ ಭಾರತೀಯ ಆಹಾರದ ರುಚಿಯ ಪ್ರೀತಿಯನ್ನು ಹೆಚ್ಚಿಸಿದೆ..
ಪಾನಿಪುರಿ ರುಚಿಗೆ ಫಿದಾ ಆದ ನೈಜೀರಿಯಾದ ಮಹಿಳೆ -
ಮುಂಬೈ, ಡಿ.11: ಭಾರತೀಯ ಆಹಾರ ಪದ್ದತಿಗಳಿಗೆ ಮನಸೋಲದವರು ಯಾರು ಇಲ್ಲ.. ಅದರಲ್ಲೂ ಚಾಟ್ಸ್ ಅಂತ ಬಂದಾಗ ಪಾನಿಪುರಿ, ಮಸಾಲೆಪುರಿ, ಸೇವ್ ಪುರಿಯಂತಹ ಆಹಾರವನ್ನು ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಸಂಜೆಯಾದರೆ ಸಾಕು, ಅದರ ಖಾರ- ಹುಳಿ ರುಚಿಗೆಯೇ ಪಾನಿ ಪುರಿ ಮಾರುವವನ ಸುತ್ತ ರಾಶಿ ಬಿದ್ದು ಜನ ಪಾನಿಪುರಿ ಸೇವಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ನೈಜೀರಿಯಾದ ಮಹಿಳೆಯೊಬ್ಬರು ಭಾರತೀಯ ವಿವಾಹವೊಂದರಲ್ಲಿ ಪಾನಿಪುರಿ ಸವಿದು ಖುಷಿ ಪಟ್ಟಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ. ಮಹಿಳೆಯೂ ಪಾನಿಪುರಿಯ ರುಚಿಯನ್ನು ಸವಿದು ತೃಪ್ತಿ ಪಟ್ಟಿರುವ ಈ ದೃಶ್ಯ ಭಾರತೀಯ ಆಹಾರದ ರುಚಿಯ ಪ್ರೀತಿಯನ್ನು ಹೆಚ್ಚಿಸಿದೆ
ಭಾರತೀಯ ಮದುವೆಗಳಲ್ಲಿ ವಿಶೇಷವಾದ ಔತಣಕೂಟ ಇರಲಿದೆ. ವಿಭಿನ್ನವಾದ ಆಹಾರ ಖಾದ್ಯಗಳು ಮದುವೆ ಸಮಾರಂಭದಲ್ಲಿ ಸಿದ್ದಮಾಡಲಾಗುತ್ತದೆ. ಅದೇ ರೀತಿ ಭಾರತೀಯ ವಿವಾಹದ ಚಾಟ್ ಕೌಂಟರ್ ನಲ್ಲಿ ನೈಜೀರಿಯನ್ ಮಹಿಳೆಯೊಬ್ಬರು ಸಾಂಪ್ರದಾಯಿಕವಾಗಿ ಸೀರೆ ಉಟ್ಟು ಪಾನಿ ಪುರಿ ಸವಿಯುತ್ತಿರುವ ದೃಶ್ಯ ಕಂಡು ಬಂದಿದೆ. ಪಾನೀ ಪುರಿಯ ರುಚಿಗೆ ಮಹಿಳೆಯೂ ಮನಸೋತ್ತಿದ್ದಾರೆ.
ವಿಡಿಯೋ ನೋಡಿ:
@chefbraakman ಪೇಜ್ ನಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ, ಭಾರತೀಯ ಮದುವೆಯೊಂದರಲ್ಲಿ ಚಾಟ್ ಕೌಂಟರ್‌ನಲ್ಲಿ ನಿಂತ ಮಹಿಳೆ ಸಾಂಪ್ರದಾಯಿಕ ಸೀರೆಯನ್ನು ಧರಿಸಿದ್ದಾರೆ. ವಿಡಿಯೊದಲ್ಲಿ ಯಾವುದೇ ಗೊಂದಲವಿಲ್ಲದೆ ಇಡೀ ಪಾನಿ ಪುರಿಯನ್ನು ಸಂಪೂರ್ಣವಾಗಿ ತಿನ್ನುವ ರೀತಿ ವೀಕ್ಷಕರನ್ನು ತಕ್ಷಣವೇ ಆಕರ್ಷಿಸಿದೆ. ಅವರು ಪಾನಿಪುರಿಯನ್ನು ಅಚ್ಚು ಕಟ್ಟಾಗಿ ಚೆಲ್ಲದೆ ತಿನ್ನುವ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಪಾನೀಪುರಿ ಸವಿಯುತ್ತ ಅವರು ತೃಪ್ತಿಯಿಂದ ನೃತ್ಯ ಮಾಡುವ ದೃಶ್ಯ ಭಾರತೀಯ ಆಹಾರದಲ್ಲಿ ಅವರಿಗೆ ಎಷ್ಟು ಒಲವಿದೆ ಎಂಬುದನ್ನು ತೋರಿಸುತ್ತದೆ.
Viral News: ನನ್ನ ಸಂಬಳ ನನಗೆ ಸಾಕು; ಸರ್ಕಾರಿ ಕಚೇರಿ ಎದುರಲ್ಲಿ "ಲಂಚ ಬೇಡ" ಬೋರ್ಡ್ ಹಾಕಿದ ದಕ್ಷ ಅಧಿಕಾರಿ
ಮಹಿಳೆಯೂ ತಮ್ಮ ಪೋಸ್ಟ್‌ನಲ್ಲಿ, ಮುಂಬೈಗೆ ಬಂದ ತಕ್ಷಣ ತಾನು ಚಿಕನ್ ಬಿರಿಯಾನಿ ತಿಂದಿ ದ್ದಾಗಿ ತಿಳಿಸಿದ್ದಾರೆ. ಅಂದಿನಿಂದ ತಾನು ಸಸ್ಯಾಹಾರವನ್ನು ಇಷ್ಟಪಟ್ಟು ಸವಿಯುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯ ಅವರ ಗಮನವನ್ನು ಸೆಳೆದಿರುವುದು ಪಾನಿ ಪುರಿ. "ಸದ್ಯಕ್ಕೆ, ನನಗೆ ಎಲ್ಲಾ ಪಾನಿಪುರಿಯನ್ನು ನೀಡಿ" ಎಂದು ಹೇಳಿರುವ ದೃಶ್ಯ ನೋಡಬಹುದು.
ಸದ್ಯ ಈ ವಿಡಿಯೋ 1.5 ಮಿಲಿಯನ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರೊಬ್ಬರು ಭಾರತೀಯರು ಅವರನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ.. ಹಾಗಾಗಿ ಪಾನೀಪುರಿಯ ರುಚಿ ಕೂಡ ಹೆಚ್ಚಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ನೀವು ಪಾನೀಪುರಿಯನ್ನು ಸವಿದು ಆನಂದಿಸುತ್ತಿರುವುದು ತುಂಬಾ ಖುಷಿ ನೀಡಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊವು ಭಾರತೀಯ ಆಹಾರದ ರುಚಿ ವಿದೇಶಿಗರನ್ನು ಕೂಡ ಆಕರ್ಷಿಸುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.