ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯೂತ್ ಒಲಿಂಪಿಕ್ಸ್ 2026: ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಬಂಗಾರ ಗೆದ್ದ ಅಂಬೇಕರ್ ಮೀತೈ

Youth Olympics 2026: ಅಂಬೇಕರ್ ಅವರ ಈ ಗೆಲುವು ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಬಾಕ್ಸಿಂಗ್‌ಗೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ಕ್ರೀಡೆಯಲ್ಲಿ ಇದಕ್ಕೂ ಮೊದಲು ಭಾರತದ ಅತ್ಯುತ್ತಮ ಸಾಧನೆಯೆಂದರೆ, 2010ರ ಕ್ರೀಡಾಕೂಟದಲ್ಲಿ ಶಿವ ಥಾಪಾ (60 ಕೆಜಿ ವಿಭಾಗ) ಗೆದ್ದ ಬೆಳ್ಳಿ ಪದಕವಾಗಿತ್ತು.

ಯೂತ್ ಒಲಿಂಪಿಕ್ಸ್ 2026: ಭಾರತಕ್ಕೆ ಮೊದಲ ಚಿನ್ನ ಗೆದ್ದ ಮೀತೈ

Ambekar Meetei -

Abhilash BC
Abhilash BC Nov 13, 2026 8:55 AM

ನವದೆಹಲಿ, ನ.13: ಸೆನೆಗಲ್‌ನ ಡಕಾರ್‌ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್‌ನಲ್ಲಿ, ಬಾಕ್ಸಿಂಗ್ ವಿಭಾಗದಲ್ಲಿ ಲೈರೆನ್‌ಲಾಕ್‌ಪಮ್ ಅಂಬೇಕರ್ ಮೀಟೈ ಅವರು ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕವನ್ನು ಗೆದ್ದುಕೊಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪುರುಷರ 50 ಕೆಜಿ ವಿಭಾಗದ ಫೈನಲ್‌ನಲ್ಲಿ ಅಂಬೇಕರ್ ಅವರು ಐರ್ಲೆಂಡ್‌ನ ಕ್ರಿಸ್ಟಿಯನ್ ಜುಬಾನಿ ಅವರನ್ನು 3-2 ಅಂತರದಿಂದ ಸೋಲಿಸಿದರು.

ಅಂಬೇಕರ್ ಅವರ ಈ ಗೆಲುವು ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಬಾಕ್ಸಿಂಗ್‌ಗೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ಕ್ರೀಡೆಯಲ್ಲಿ ಇದಕ್ಕೂ ಮೊದಲು ಭಾರತದ ಅತ್ಯುತ್ತಮ ಸಾಧನೆಯೆಂದರೆ, 2010ರ ಕ್ರೀಡಾಕೂಟದಲ್ಲಿ ಶಿವ ಥಾಪಾ (60 ಕೆಜಿ ವಿಭಾಗ) ಗೆದ್ದ ಬೆಳ್ಳಿ ಪದಕವಾಗಿತ್ತು.



ಪಟಿಯಾಲಾದ 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್'ನಲ್ಲಿ ತರಬೇತಿ ಪಡೆಯುತ್ತಿರುವ ಮಣಿಪುರದ ಅಂಬೇಕರ್, ಫೈನಲ್‌ವರೆಗಿನ ಹಾದಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಅವರು ನಮೀಬಿಯಾದ ಅಬ್ರಹಾಂ ಕಾಲೆಂಗೆ ಅವರನ್ನು ಮೊದಲ ಸುತ್ತಿನಲ್ಲೇ ಸೋಲಿಸಿದರು. ನಂತರ ಸೆಮಿಫೈನಲ್‌ನಲ್ಲಿ ಕೊಲಂಬಿಯಾದ ಇಝೋನ್ ಜೆಫ್ರಿ ಗಾಲಿಯಾ ಅರೆವಾಲೊ ವಿರುದ್ಧ 5-0 ಅಂತರದ ಭರ್ಜರಿ ಜಯ ದಾಖಲಿಸಿದರು.

ಉಸ್ಮಾನ್ ಖವಾಜಾ 'ಸ್ಯಾಂಡ್‌ಪೇಪರ್‌ಗೇಟ್' ಕುರಿತ ಹೇಳಿಕೆ ಬೇಜವಾಬ್ದಾರಿಯುತವಾಗಿದೆ: ಪ್ಯಾಟ್ ಕಮಿನ್ಸ್

ಯೂತ್‌ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡವು ಇಲ್ಲಿಯವರೆಗೆ ಗಮನಾರ್ಹ ಪ್ರದರ್ಶನ ನೀಡಿದೆ. ಮೀಟೆಯವರ ಐತಿಹಾಸಿಕ ಚಿನ್ನದ ಪದಕ ಗೆಲುವಿಗೂ ಮೊದಲು, ದೇಶವು ವಿವಿಧ ಕ್ರೀಡಾ ವಿಭಾಗಗಳಲ್ಲಿ ಮೂರು ಬೆಳ್ಳಿ ಪದಕಗಳು ಮತ್ತು ಐದು ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು.

ಬ್ಯಾಡ್ಮಿಂಟನ್, ಜೂಡೋ ಮತ್ತು ಬೀಚ್ ಕುಸ್ತಿಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು. ಹಾಗೆಯೇ ಈಜು, ಮಹಿಳೆಯರ 100 ಮೀಟರ್ ಹರ್ಡಲ್ಸ್ ಮತ್ತು ವುಶು ಕ್ರೀಡೆಗಳಲ್ಲಿ ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು. ಮಹಿಳೆಯರ 48 ಕೆಜಿ ವಿಭಾಗದ ಬಾಕ್ಸಿಂಗ್‌ ಫೈನಲ್‌ನಲ್ಲಿ ಗುಂಜನ್ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಮತ್ತೊಂದು ಪದಕ ನಿರೀಕ್ಷೆಯಲ್ಲಿದೆ.