2026ರ ಸಂಕ್ರಾಂತಿ/ಪೊಂಗಲ್ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ಸಿನಿಮಾ ಸುನಾಮಿ
ಈ ಸಲ 2026ರ ಸಂಕ್ರಾಂತಿ/ಪೊಂಗಲ್ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ಸಿನಿಮಾ ಹಂಗಾಮವೇ ನಡೆಯಲಿದೆ. ಅದರಲ್ಲೂ ಮುಖ್ಯವಾಗಿ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾಗಳು ಸಾಲುಗಟ್ಟಿ ತೆರೆಗೆ ಬರಲಿವೆ. ತಮಿಳಿನಲ್ಲಿ ಎರಡು ಮೇಜರ್ ಸಿನಿಮಾಗಳು ರಿಲೀಸ್ ಆದರೆ ತೆಲುಗಿನಲಿ 5 ಸಿನಿಮಾಗಳು ಒಂದಾದ ಮೇಲೊಂದು ತೆರೆಗೆ ಬರಲಿವೆ. ಈ ಏಳು ಚಿತ್ರಗಳಲ್ಲಿ ಯಾವ ಸಿನಿಮಾಗೆ ಪ್ರೇಕ್ಷಕರ ಪ್ರೀತಿ ಸಿಗಲಿದೆ ಎಂಬುದನ್ನು ಕಾದುನೋಡಬೇಕು.