New Year Partywears 2024: ನ್ಯೂ ಇಯರ್ ಇವ್ ಪಾರ್ಟಿವೇರ್ ಧರಿಸಲು ಇಲ್ಲಿದೆ ಟಿಪ್ಸ್

ನ್ಯೂ ಇಯರ್ ಇವ್ ಪಾರ್ಟಿಗೆ (New Year Partywears 2024) ಯಾವ್ಯಾವ ಔಟ್‌ಫಿಟ್‌ಗಳು ಬಂದಿವೆ? ಯಾವುದೆಲ್ಲಾ ಟ್ರೆಂಡಿಯಾಗಿದೆ? ಎಂಬುದರ ಕುರಿತಂತೆ ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಚಂದನ್ ಗೌಡ ವಿಶ್ವವಾಣಿ ನ್ಯೂಸ್‌ಗೆ ತಿಳಿಸಿದ್ದಾರೆ.

Profile Vishwavani News December 28, 2024
-ಶೀಲಾ ಸಿ. ಶೆಟ್ಟಿ, ಬೆಂಗಳೂರು ನ್ಯೂ ಇಯರ್ ಬಂದೇ ಬಿಡ್ತು. ನ್ಯೂ ಲುಕ್‌ನಲ್ಲಿ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಳ್ಳುವ ಆಸೆ ಯಾರಿಗಿಲ್ಲ ಹೇಳಿ ನೋಡೋಣ! ಇದಕ್ಕೆ ಪೂರಕ ಎಂಬಂತೆ, ಹೊಸ ವರ್ಷದ ಇವ್ ಪಾರ್ಟಿಯಲ್ಲಿ (New Year Partywears 2024) ಗ್ಲಾಮ್ ಡಾಲ್‌ನಂತೆ ಕಾಣಲು ನಾನಾ ಬಗೆಯ ವೈವಿಧ್ಯಮಯ ಫ್ಯಾಷನ್‌ವೇರ್‌ಗಳು ಫ್ಯಾಷನ್‌ಲೋಕಕ್ಕೆ ಲಗ್ಗೆ ಇಟ್ಟಿವೆ. ಹೌದು, ಈ ಕುರಿತಂತೆ ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಚಂದನ್ ಗೌಡ ಒಂದಿಷ್ಟು ವಿವರ ನೀಡಿದ್ದಾರೆ. ಟ್ರೆಂಡಿ ಶಿಮ್ಮರ್ ಶೇಡ್ಸ್ ಔಟ್‌ಫಿಟ್ಸ್ ಈ ಸೀಸನ್‌ನಲ್ಲಿ ನ್ಯೂ ಇಯರ್‌ನಲ್ಲಿ ವೆಸ್ಟರ್ನ್ ಶೈಲಿಯ ಅತಿ ಹೆಚ್ಚು ಡಿಸೈನವೇರ್‌ಗಳು ಕಾಲಿಟ್ಟಿವೆ. ಜಗಮಗಿಸುವ ಶಿಮ್ಮರ್, ಶೈನಿಂಗ್ ಫ್ಯಾಬ್ರಿಕ್‌ನಿಂದಿಡಿದು, ಸಿಕ್ವೀನ್ಸ್ , ಮರ್ಸಲಾ ಹಾಗೂ ಮೆಟಾಲಿಕ್ ಶೇಡ್‌ಗಳ ಡಿಸೈನವೇರ್‌ಗಳು ಈಗಾಗಲೇ ಪಾಪುಲರ್ ಆಗಿವೆ. ಇನ್ನು, ಎಂದಿನಂತೆ ರೆಡ್ ಶೇಡ್‌ನ ನಾನಾ ವರ್ಣಗಳು, ಮಿಕ್ಸ್ ಕಾಂಬಿನೇಷನ್ ಇರುವ ಡಿಸೈನವೇರ್‌ಗಳು ಕೂಡ ಪ್ರತಿ ವರ್ಷದಂತೆ ಈ ಬಾರಿಯೂ ಆಗಮಿಸಿವೆ. ಚಿತ್ರಗಳು: ರೆಂಟ್ ಲುಕ್ ಬೈ ಚಂದನ್ ಗೌಡ ಕಲೆಕ್ಷನ್ಸ್ ಶಿಮ್ಮರ್ ಬಾಡಿಕಾನ್ ಶಾರ್ಟ್ ಡ್ರೆಸ್‌ಗಳು ಹೊಸ ವರ್ಷದ ಪಾರ್ಟಿಗೆ ಧರಿಸಬಹುದಾದ ವೈಬ್ರೆಂಟ್ ಶೇಡ್‌ನ ಬಗೆಬಗೆಯ ಡಿಸೈನ್ ಬಾಡಿಕಾನ್ ಶಾರ್ಟ್ ಡ್ರೆಸ್‌ಗಳು ಈ ಸೀಸನ್‌ನ ಹಾಟ್ ಟ್ರೆಂಡ್‌ನಲ್ಲಿ ಸೇರಿವೆ. ಇನ್ನು ಅವುಗಳಲ್ಲಿ ಕಾರ್ಸೆಟ್ ಬಾಡಿ ಫಿಟ್ ಡಿಸೈನ್‌ನವು, ನೆಟ್ಟೆಡ್ ಶೀರ್ ಫ್ಯಾಬ್ರಿಕ್‌ನವು, ಸಿಕ್ವಿನ್ಸ್ , ಟೈಟ್ ಫಿಟ್ಟಿಂಗ್ ನೀಡುವ ಗ್ಲಾಮರಸ್ ಡಿಸೈನವೇರ್‌ಗಳು ಸೆಲೆಬ್ರೆಟಿ ಲುಕ್ ಬಯಸುವವರಿಗೆ ಬಂದಿವೆ ಎನ್ನುತ್ತಾರೆ ಚಂದನ್ ಗೌಡ. ಅತ್ಯಾಕರ್ಷಕವಾಗಿ ಕಾಣಿಸುವ ಬಗೆಬಗೆಯ ಗೌನ್‌ಗಳು ಗೌನ್ ಪ್ರಿಯರಿಗಾಗಿ ಲೆಕ್ಕವಿಲ್ಲದಷ್ಟು ಬಗೆಯ ಗೌನ್‌ಗಳು ಕೂಡ ಎಂಟ್ರಿ ನೀಡಿವೆ. ಪಾಸ್ಟೆಲ್ ಶೇಡ್‌ನವು ಟೀನೇಜ್ ಹುಡುಗಿಯರಿಗೆ ಪ್ರಿಯವಾಗುವಂತಹ ಡಿಸೈನ್‌ನಲ್ಲಿ ಕಾಲಿಟ್ಟಿವೆ. ಬ್ಲ್ಯೂ, ನಿಯಾನ್, ಹೀಗೆ ನಾನಾ ಹೊಸ ಇಂಗ್ಲೀಷ್ ಶೇಡ್‌ಗಳ ಕೋಲ್ಡ್ ಶೋಲ್ಡರ್, ನೆಟ್ಟೆಡ್, ಕೇಪ್, ಸ್ಲಿವ್ಲೆಸ್ ಗೌನ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಕೆಲವಂತೂ ಹೆವ್ವಿ ವೈಟ್‌ನವು ಹಾಗೂ ಲೇಯರ್ ಡಿಸೈನ್‌ನವು ಕೂಡ ಬೇಡಿಕೆ ಪಡೆದುಕೊಂಡಿವೆ. ಅವುಗಳಲ್ಲಿ, ಅತಿ ಹೆಚ್ಚಾಗಿ ಬಾಲ್ ಗೌನ್, ಕೇಪ್ ಗೌನ್, ಜಿಮ್ಮಿ ಚೂ ಫ್ಯಾಬ್ರಿಕ್‌ನ ಗೌನ್, ಬೀಡ್ಸ್, ಕ್ರಿಸ್ಟಲ್, ಪರ್ಲ್ ಹೀಗೆ ನಾನಾ ಹ್ಯಾಂಡ್‌ವರ್ಕ್ ಗೌನ್‌ಗಳು ಎಲ್ಲಾ ವಯಸ್ಸಿನ ಮಾನಿನಿಯರನ್ನು ಸೆಳೆದಿವೆ ಎನ್ನುತ್ತಾರೆ. ಫಾಲ್ ವಿಂಟರ್ ಇವನಿಂಗ್ ಡ್ರೆಸ್ ಇನ್ನು, ನ್ಯೂ ಇಯರ್‌ನ ಫಾಲ್ ವಿಂಟರ್ ಇವನಿಂಗ್ ಪಾರ್ಟಿ ಡ್ರೆಸ್ ಕೆಟಗರಿಯಲ್ಲಿ ಶಾರ್ಟ್ ಫ್ರಾಕ್‌ಗಳು, ಸಿಂಡ್ರೆಲ್ಲಾ-ಅಂಬ್ರೆಲ್ಲಾ ಫ್ಲೇರ್ ಫ್ರಾಕ್‌ಗಳು ಹೆಚ್ಚು ಯುವತಿಯರನ್ನು ಸೆಳೆದಿವೆ. ಡಾನ್ಸ್ ಪ್ರಿಯರ ಔಟ್‌ಫಿಟ್ಸ್ ಡಿಸ್ಕೋ, ಪಬ್ ಹಾಗೂ ಡಾನ್ಸ್ ಸ್ಟೇಜ್‌ಗಳಲ್ಲಿ ಕುಣಿದು ಕುಪ್ಪಳಿಸಲು ಬಯಸುವ ಡಾನ್ಸ್ ಪ್ರಿಯ ಹುಡುಗಿಯರಿಗೆಂದೇ ಜಗಮಗಿಸುವ ಲೈಟ್‌ವೇಟ್ ಗೌನ್ಸ್, ಫ್ರಾಕ್ಸ್ ಹಾಗೂ ಬಾಡಿಕಾನ್ ಔಟ್‌ಫಿಟ್‌ಗಳು ಲಗ್ಗೆ ಇಟ್ಟು ಹಂಗಾಮ ಎಬ್ಬಿಸಿವೆ ಎನ್ನುತ್ತಾರೆ ಚಂದನ್ ಗೌಡ. ಈ ಸುದ್ದಿಯನ್ನೂ ಓದಿ | New Year Mens Partywear 2024: ಪರ್ಫೆಕ್ಟ್ ಇಮೇಜ್ ನೀಡುವ ನ್ಯೂ ಇಯರ್ ಮೆನ್ಸ್ ಪಾರ್ಟಿವೇರ್ ನ್ಯೂ ಇಯರ್ ಪಾರ್ಟಿ ಡ್ರೆಸ್ ಪ್ರಿಯರಿಗೆ ಟಿಪ್ಸ್ ಆದಷ್ಟೂ ಫ್ರೆಶ್ ಲುಕ್ ನೀಡುವಂತಹ ಡಿಸೈನವೇರ್‌ಗೆ ಮಾನ್ಯತೆ ನೀಡಿ. ವೈಬ್ರೆಂಟ್ ಶೇಡ್ಸ್ ಪಾರ್ಟಿಯ ರಂಗು ಹೆಚ್ಚಿಸುತ್ತವೆ. ಮೊದಲೇ ಟ್ರಯಲ್ ನೋಡಿ ಪಾರ್ಟಿ ಡ್ರೆಸ್ ಧರಿಸಿ. ಡಾನ್ಸ್ ಪ್ರಿಯರು, ತೀರಾ ಬಿಗಿಯಾದ ಔಟ್‌ಫಿಟ್ ಆಯ್ಕೆ ಮಾಡಬೇಡಿ. ಶಿಮ್ಮರಿಂಗ್ ಇರುವಂತಹ ಡ್ರೆಸ್‌ಗಳು ಆಕರ್ಷಕವಾಗಿ ಕಾಣಿಸುತ್ತವೆ. (ಲೇಖಕಿ ಫ್ಯಾಷನ್ ಪತ್ರಕರ್ತೆ)
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ