ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Darshan Bail Cancelled: ಮತ್ತೆ ಜೈಲು ಪಾಲಾದ ದರ್ಶನ್‌ ಮುಂದಿನ ನಡೆ ಏನು? ʼದಿ ಡೆವಿಲ್‌ʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌ ಮುಂದೂಡಿಕೆ

ಮುಂದೂಡಿಕೆಯಾಯ್ತು ʼದಿ ಡೆವಿಲ್‌ʼ ಚಿತ್ರದ ಸಾಂಗ್‌ ರಿಲೀಸ್‌ ಡೇಟ್‌

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ, ಸ್ಯಾಂಡಲ್‌ವುಡ್‌ ನಟ ದರ್ಶನ್‌ ಮತ್ತೆ ಜೈಲು ಪಾಲಾಗಲಿದ್ದಾರೆ. ಈ ಮಧ್ಯೆ ದರ್ಶನ್‌ ಅಭಿನಯದ ʼಡಿ ಡೆವಿಲ್‌ʼ ಚಿತ್ರದ ಹಾಡಿನ ರಿಲೀಸ್‌ ಮುಂದೂಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಹಾಡು ಆಗಸ್ಟ್‌ 15ರ ಬೆಳಗ್ಗೆ 10:05ಕ್ಕೆ ರಿಲೀಸ್‌ ಆಗಬೇಕಿತ್ತು.

DK Shivakumar: ಧರ್ಮಸ್ಥಳಕ್ಕೆ ಡಿಕೆಶಿ ಬೆಂಬಲ; ವೀರೇಂದ್ರ ಹೆಗ್ಗಡೆ, ದೇವಸ್ಥಾನ, ಧಾರ್ಮಿಕ ಸೇವೆ ಬಗ್ಗೆ ಬಿಜೆಪಿಗಿಂತ ಹೆಚ್ಚು ಕಾಳಜಿ, ನಂಬಿಕೆ ನಮಗಿದೆ ಎಂದ ಡಿಸಿಎಂ

ಧರ್ಮಸ್ಥಳಕ್ಕೆ ಡಿಕೆಶಿ ಬೆಂಬಲ

Dharmasthala Temple: ಧರ್ಮಸ್ಥಳ ಪ್ರಕರಣ ಸದ್ಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವಿಚಾರದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಇದನ್ನು ಯಾರು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಧರ್ಮಸ್ಥಳದ ಆಡಳಿತ ಮಂಡಳಿ ಮೇಲೆ ಕಪ್ಪು ಚುಕ್ಕೆ ತರಲು ಅತ್ಯಂತ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಲಾಗಿದೆ ಎಂದು ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದು, ವೀರೇಂದ್ರ ಹೆಗ್ಗಡೆ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.

DK Shivakumar: ಭ್ರಷ್ಟ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಖಡಕ್‌ ಎಚ್ಚರಿಕೆ

ಭ್ರಷ್ಟ ಅಧಿಕಾರಿಗಳಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

DK Shivakumar: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎನ್. ಜವರಾಯಿ ಗೌಡ ಅವರು, ಕೆಂಪೇಗೌಡ ಬಡಾವಣೆ ವಿಚಾರವಾಗಿ ಪ್ರಶ್ನೆ ಕೇಳಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಹೇಳಿದಾಗ, ಇದಕ್ಕೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ಕೆಂಪೇಗೌಡ ಬಡಾವಣೆಯಲ್ಲಿ ಯಾವ ಅಧಿಕಾರಿ ಹಣ ಪಡೆದಿದ್ದಾನೆ ಹೇಳಿ, ಹೊತ್ತು ಮುಳುಗುವುದರಲ್ಲಿ ಅವರನ್ನು ಅಮಾನತು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Darshan Thoogudeepa: ಬಳ್ಳಾರಿ ಜೈಲಿಗೆ ಹೋಗಲಿದ್ದಾರಾ ದರ್ಶನ್‌? ʼದಾಸʼನ ಮುಂದಿನ ನಡೆ ಏನು?

ಬಳ್ಳಾರಿ ಜೈಲಿಗೆ ಹೋಗಲಿದ್ದಾರಾ ದರ್ಶನ್‌?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದ ಎ 2 ಆರೋಪಿ ನಟ ದರ್ಶನ್‌ನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್‌ ಜಾಮೀನು ರದ್ದು ಪಡಿಸಿದ ಬೆನ್ನಲ್ಲೇ ಅವರನ್ನು ಬೆಂಗಳೂರಿನ ಹೊಸಕೆರೆ ಹಳ್ಳಿಯಿಂದ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇದೀಗ ಅವರನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗುತ್ತದ ಎನ್ನಲಾಗಿದೆ.

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿಕೆಶಿ

ಸ್ಟಾರ್‌ ಸ್ಪ್ರಿಂಟರ್‌, ಕನ್ನಡತಿ ವಿಜಯಕುಮಾರಿಗೆ ಡಿಸಿಎಂ ಡಿಕೆಶಿ ಸನ್ಮಾನ

ಆರೋಗ್ಯ ಮತ್ತು ಹಣಕಾಸು ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಂದ ಕ್ರೀಡೆಯಲ್ಲಿ ಉತ್ಸಾಹ ಕಳೆದುಕೊಂಡಿದ್ದೆ. ಆದರೀಗ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಶಾಸಕರಾದ ದಿನೇಶ್ ಗೂಳಿಗೌಡ ಅವರ‌ ಮುಖಾಂತರ ನನ್ನನ್ನು ಸಂಪರ್ಕಿಸಿ ನನ್ನ ಸಾಧನೆಯನ್ನು ಗುರುತಿಸಿ 5 ಲಕ್ಷ ರೂ.ಗಳ ಚೆಕ್ ಅನ್ನು ನೀಡಿ ಗೌರವಿಸಿರುವುದು ನನಗೆ ಮರೆಯಲಾಗದ ಕ್ಷಣ. ಇದರಿಂದ ನನ್ನ ಹುಮ್ಮಸ್ಸು ಮತ್ತಷ್ಟು ಹೆಚ್ಚಾಗಿದೆ ಎಂದು ವಿಜಯಕುಮಾರಿ ಹೇಳಿದರು.

Actor Darshan: ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌; ನಟ ದರ್ಶನ್‌ನನ್ನು ಮತ್ತೆ ಬಂಧಿಸಿದ ಪೊಲೀಸರು

ನಟ ದರ್ಶನ್‌ನನ್ನು ಬಂಧಿಸಿದ ಪೊಲೀಸರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಮತ್ತು ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ರದ್ದುಗೊಂಡಿದೆ. ಇದರ ಬೆನ್ನಲ್ಲೇ ಇದೀಗ ದರ್ಶನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮೊದಲು ಪ್ರಕರಣದ ಎ 1 ಆರೋಪಿ ಪವಿತ್ರಾ ಗೌಡ ಅವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದರು.

Chalavadi Narayanaswamy: ಒಳ ಮೀಸಲಾತಿಯಲ್ಲಿ ಮೋಸ, ವಂಚನೆ ಸಹಿಸುವುದಿಲ್ಲ: ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ

ಒಳ ಮೀಸಲಾತಿಯಲ್ಲಿ ಮೋಸ, ವಂಚನೆ ಸಹಿಸುವುದಿಲ್ಲ: ಛಲವಾದಿ ನಾರಾಯಣಸ್ವಾಮಿ

Internal Reservation Caste: ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಿ ದಲಿತ ಸಮುದಾಯಗಳನ್ನು ವಂಚಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Independence Day: ಸ್ವಾತಂತ್ರ್ಯ ದಿನಾಚರಣೆಯ ಸ್ಪೆಷಲ್‌- ಪಿವಿಆರ್ ಐನಾಕ್ಸ್ ಲೋಗೋದಲ್ಲಿ ʼಕಾಂತಾರʼ ಚಿತ್ರದ ಮಾಯೆ

ಪಿವಿಆರ್ ಐನಾಕ್ಸ್ ಲೋಗೋದಲ್ಲಿ ʼಕಾಂತಾರʼ ಚಿತ್ರದ ಮಾಯೆ

PVR Inox: ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರೀಮಿಯಂ ಸಿನಿಮಾ ಪ್ರದರ್ಶಕ ಸಂಸ್ಥೆಯಾದ ಪಿವಿಆರ್ ಐನಾಕ್ಸ್, ಹೊಂಬಾಳೆ ಫಿಲ್ಮ್ಸ್ ಜತೆಗೂಡಿ ಹೊಸತನ ಮತ್ತು ವೈಶಿಷ್ಟ್ಯಪೂರ್ಣ ಪ್ರೇಕ್ಷಕ ಅನುಭವಗಳನ್ನು ನೀಡುತ್ತಿದೆ. ಈ ಸ್ವಾತಂತ್ರ್ಯ ದಿನಾಚರಣೆಯ ವಾರಾಂತ್ಯದಲ್ಲಿ, ಪಿವಿಆರ್ ಐನಾಕ್ಸ್ ತನ್ನ ಲೋಗೋಗೆ ಕಾಂತಾರ ಚಿತ್ರದ ಅಗ್ನಿ ಅಂಶಗಳನ್ನು ಸೇರಿಸಿರುವುದು ವಿಶೇಷ.

Bengaluru News: ಇಂದು ಸಂಜೆ ʻಪರಮ್ ಕಲ್ಚರ್ʼ ನಿಂದ 'ವಂದೇ ಮಾತರಂ' ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ

ಇಂದು ಸಂಜೆ ʻಪರಮ್ ಕಲ್ಚರ್ʼ ನಿಂದ 'ವಂದೇ ಮಾತರಂ' ಸಂಗೀತ ಕಾರ್ಯಕ್ರಮ

Bengaluru News: 79ನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ʻಪರಮ್ ಕಲ್ಚರ್ʼ ವತಿಯಿಂದ ಪರಂಪರಾ ಸರಣಿಯ 07ನೇ ಕಾರ್ಯಕ್ರಮ 'ವಂದೇ ಮಾತರಂ' ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವು ಆ.14 ರಂದು ಗುರುವಾರ ಸಂಜೆ 6.30ಕ್ಕೆ ಬೆಂಗಳೂರು ನಗರದ ಎನ್‌.ಆರ್‌. ಕಾಲೋನಿಯ ಡಾ.ಸಿ. ಅಶ್ವತ್ಥ್ ಕಲಾಭವನದಲ್ಲಿ ಜರುಗಲಿದೆ.

Plastic Ban: ಈ ಪುಣ್ಯಕ್ಷೇತ್ರದಲ್ಲಿ ನಾಳೆಯಿಂದ ಪ್ಲಾಸ್ಟಿಕ್‌ ಸಂಪೂರ್ಣ ಬ್ಯಾನ್‌!

ಈ ಪುಣ್ಯಕ್ಷೇತ್ರದಲ್ಲಿ ನಾಳೆಯಿಂದ ಪ್ಲಾಸ್ಟಿಕ್‌ ಸಂಪೂರ್ಣ ಬ್ಯಾನ್‌!

Kukke Subrahmanya: ಆ.15 ಸ್ವಾತಂತ್ರ್ಯೋತ್ಸವದ ದಿನದಂದು ನಮ್ಮ ನಡೆ ಪ್ಲಾಸ್ಟಿಕ್ ಮುಕ್ತದೆಡೆಗೆ ಅಭಿಯಾನದ ಮೂಲಕ ಪ್ಲಾಸ್ಟಿಕ್ ಮುಕ್ತ ದೇವಸ್ಥಾನವನ್ನಾಗಿ ಘೋಷಣೆಯನ್ನು ಮಾಡಲಾಗುವುದು. ಸರ್ವರೂ ಸಹಕರಿಸಬೇಕು. ಸರ್ವರ ಸಹಕಾರದಿಂದ ಪ್ಲಾಸ್ಟಿಕ್ ಮುಕ್ತ ಕ್ಷೇತ್ರ ಅಭಿಯಾನ ಯಶಸ್ವಿಯಾಗುವುದು ಎಂದು ತಿಳಿಸಿದ್ದಾರೆ.

Pavitra Gowda: ಬೇಲ್‌ ಕ್ಯಾನ್ಸಲ್‌... ಪವಿತ್ರಾ ಗೌಡ ಅರೆಸ್ಟ್‌!

ಬೇಲ್‌ ಕ್ಯಾನ್ಸಲ್‌... ಪವಿತ್ರಾ ಗೌಡ ಅರೆಸ್ಟ್‌!

Renuka swamy murder case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಇನ್ನು ಬೇಲ್‌ ರದ್ದಾಗಿರುವ ಹಿನ್ನೆಲೆ ದರ್ಶನ್‌ ಹಾಗೂ ಇತರ ಆರೋಪಿಗಳನ್ನು ಇಂದೇ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಪವಿತ್ರಾ ಗೌಡ ಅವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

Actor Darshan: ದರ್ಶನ್‌ ಬೇಲ್‌ ರದ್ದು, ರೇಣುಕಾ ಸ್ವಾಮಿ ಕುಟುಂಬದ ಫಸ್ಟ್‌ ರಿಯಾಕ್ಷನ್ ಹೇಗಿತ್ತು?

ದರ್ಶನ್‌ ಬೇಲ್‌ ರದ್ದು, ರೇಣುಕಾ ಸ್ವಾಮಿ ಕುಟುಂಬದ ಫಸ್ಟ್‌ ರಿಯಾಕ್ಷನ್

Supreme Court: ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್, ದರ್ಶನ್ ಅವರ ಬೇಲ್ ಸುಪ್ರೀಂ ಕೋರ್ಟ್‌ನಲ್ಲಿ ರದ್ದಾಗಿರುವುದರಿಂದ ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದಿದ್ದಾರೆ. ಕಾನೂನಿನಲ್ಲಿ ಯಾವ ರೀತಿ ಶಿಕ್ಷೆ ಆಗಬೇಕು ಅದನ್ನು ಕೊಡಲಿ ಅನ್ನೋದಷ್ಟೇ ನಮ್ಮ ಪ್ರಾರ್ಥನೆ ಎಂದು ರೇಣುಕಾ ಸ್ವಾಮಿ ಪತ್ನಿ ಹೇಳಿದರು.

Actor Darshan: ದರ್ಶನ್‌ ಜಾಮೀನು ಸುಪ್ರೀಂ ಕೋರ್ಟ್‌ ರದ್ದು ಮಾಡಿದ್ದಕ್ಕೆ ಇಲ್ಲಿವೆ ಕಾರಣಗಳು

ದರ್ಶನ್‌ ಜಾಮೀನು ಸುಪ್ರೀಂ ಕೋರ್ಟ್‌ ರದ್ದು ಮಾಡಿದ್ದಕ್ಕೆ ಇಲ್ಲಿವೆ ಕಾರಣಗಳು

Supreme Court: ದರ್ಶನ್‌ ಬೆನ್ನು ನೋವಿನ ನೆಪ ನೀಡಿ, ಅದಕ್ಕೆ ಸರ್ಜರಿ ಆಗಬೇಕು ಎಂಬ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಆದರೆ ಬೆನ್ನು ನೋವಿಗೆ ಯಾವುದೇ ಚಿಕಿತ್ಸೆ ಪಡೆದಿಲ್ಲ ಎಂದು ಸರ್ಕಾರಿ ವಕೀಲರು ಗಮನ ಸೆಳೆದಿದ್ದರು. ಕಳೆದ ಬಾರಿಯ ವಿಚಾರಣೆಗೆ ದರ್ಶನ್‌ ಪರ ವಕೀಲರಾಗಿದ್ದ ಕಪಿಲ್‌ ಸಿಬಲ್‌ ಹಾಜರಾಗಿರಲಿಲ್ಲ.

Actor Darshan: ದರ್ಶನ್‌ ಜಾಮೀನು ರದ್ದು ಬೆನ್ನಲ್ಲೇ ಗಮನ ಸೆಳೆದ ರಮ್ಯಾ ಪೋಸ್ಟ್‌

ದರ್ಶನ್‌ ಜಾಮೀನು ರದ್ದು ಬೆನ್ನಲ್ಲೇ ಗಮನ ಸೆಳೆದ ರಮ್ಯಾ ಪೋಸ್ಟ್‌

‌Renuka swamy murder case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಭಾರೀ ಗಮನ ಸೆಳೆಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ರಮ್ಯಾ ಹಾಗೂ ಡಿಬಾಸ್‌ ಫ್ಯಾನ್ಸ್‌ ವಾರ್‌ ಬಹಳ ಸದ್ದು ಮಾಡಿತ್ತು.

ಮನೆ ಖರೀದಿಸುವವರಿಗೆ ಹಸಿರು ಬೇಕು: ಪ್ರಕೃತಿಯತ್ತ ಮನೆ ಖರೀದಿದಾರರ ಮನಸ್ಥಿತಿ

ಮನೆ ಖರೀದಿಸುವವರಿಗೆ ಹಸಿರು ಬೇಕು

ಕೇವಲ ನಾಶಪಡಿಸಿ ಹೊಸದನ್ನು ಕಟ್ಟುವುದು ರಿಯಲ್‌ ಎಸ್ಟೇಟ್‌ ಉದ್ಯಮವಲ್ಲ. ಇದರಲ್ಲಿ ಹೊಸ ಆವಿಷ್ಕಾರಗಳನ್ನೂ ಮಾಡುವದಕ್ಕೆ ಅವಕಾಶಗಳಿವೆ. ಉದಾಹರಣೆಗೆ 2೦14 ರಲ್ಲಿ ಇಟಲಿಯ ಮಿಲನ್‌ ಎನ್ನುವ ಪ್ರಾಂತದಲ್ಲಿ ಕಂಪನಿಯೊಂದು ಹಸಿರು ಬಿಲ್ಡಿಂಗ್‌ಗಳನ್ನು ನಿರ್ಮಿಸಿತ್ತು. ಅದು ರಿಯಲ್‌ ಎಸ್ಟೇಟ್‌ ಜಗತ್ತಿನಲ್ಲೊಂದು ಹೊಸ ಸಂಚಲನವನ್ನೇ ಉಂಟು ಮಾಡಿತ್ತು.

ಇಂದು ʻಪರಮ್ ಕಲ್ಚರ್ʼ ಅರ್ಪಿಸುವ ಪರಂಪರಾ ಸರಣಿಯ 7ನೇ ಕಾರ್ಯಕ್ರಮ 'ವಂದೇ ಮಾತರಮ್'

ದೇಶಭಕ್ತಿಯ ರೋಮಾಂಚನಕ್ಕೆ ಸಾಕ್ಷಿಯಾಗಲಿದೆ ವಂದೇ ಮಾತರಮ್‌

ಸ್ವಾತಂತ್ರ್ಯಕ್ಕಾಗಿ ಬಲಿದಾನ ಕೊಟ್ಟ ಸಂದರ್ಭವನ್ನೂ, ವೀರರನ್ನೂ ಸ್ಮರಿಸಿ, ರಾಷ್ಟ್ರ ಭಕ್ತಿಯನ್ನು ಜಾಗೃತ ಗೊಳಿಸುವಂತಹ ಗೀತೆಗಳ ಗಾಯನ ಕಾರ್ಯಕ್ರಮ ಇದಾಗಿದೆ. ಸಹಗಾಯನದಲ್ಲಿ ಮೇಘನಾ ಹಳಿಯಾಳ, ಕೀಬೋರ್ಡ್‌ನಲ್ಲಿ ಕೃಷ್ಣ ಉಡುಪ, ತಬಲಾದಲ್ಲಿ ಸುದತ್ತ ಎಲ್ ಶ್ರೀಪಾದ್, ಕೊಳಲಿ ನಲ್ಲಿ ರಮೇಶ್ ಕುಮಾರ್ ಜಿ.ಎಲ್., ರಿದಂ ಪ್ಯಾಡ್ಸ್‌ನಲ್ಲಿ ಪದ್ಮನಾಭ ಕಾಮತ್ ಹಾಗೂ ಢೋಲಕ್‌ ನಲ್ಲಿ ಲೋಕೇಶ್ ಆರ್. ಅವರು ಸಹಕರಿಸಲಿದ್ದಾರೆ.

ಇದು ಹಸೆ ಚಿತ್ತಾರ ಕಲೆಗಾರ್ತಿಗೆ ಒಲಿದ ಸ್ವಾತಂತ್ರ್ಯೋತ್ಸವ ಪರೇಡ್ ಭಾಗ್ಯ

ಇದು ಹಸೆ ಚಿತ್ತಾರ ಕಲೆಗಾರ್ತಿಗೆ ಒಲಿದ ಸ್ವಾತಂತ್ರ್ಯೋತ್ಸವ ಪರೇಡ್ ಭಾಗ್ಯ

ದೇಶದ ಹಲವಾರು ವಿರಳ ಹಾಗೂ ನಶಿಸಿ ಹೋಗುತ್ತಿರುವಂತಹ ಪುರಾತನ ಕಲೆಗಳನ್ನ ಕೇಂದ್ರ ಸರ್ಕಾರ ಗುರುತಿಸಿ ವಿಶ್ವದೆಲ್ಲೆಡೆ ಅದನ್ನ ಪಸರಿಸೋ ಕಾರ್ಯಗಳನ್ನ ಮಾಡ್ತಿದೆ. ಪ್ರತಿ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಪರೇಡ್ ಗೆ ಇಂತಹ ವಿರಳ ಕಲೆಗಾರರನ್ನ ಕರೆಸಿ ಅವರಿಗೆ ಗೌರವ ನೀಡೋ ಕಾರ್ಯಕ್ರಮಗಳನ್ನ ಮಾಡ್ತಿದೆ. ಅದರಂತೆ ಈ ವರ್ಷದ ಸ್ವಾತಂತ್ರ್ಯೋ ತ್ಸವದಲ್ಲಿ ಪಾಲ್ಗೊಳ್ಳೋಕೆ ರಾಜ್ಯದ 5 ಕಲಾವಿದರನ್ನ ಕೇಂದ್ರ ಸರ್ಕಾರ ಗುರುತಿಸಿದೆ.

Actor Darshan: ನಟ ದರ್ಶನ್‌ ಬೇಲ್‌ ಕ್ಯಾನ್ಸಲ್‌; ದಾಸನಿಗೆ ಜೈಲೇ ಗತಿ! ಸುಪ್ರೀಂನಿಂದ ಮಹತ್ವದ ತೀರ್ಪು

ನಟ ದರ್ಶನ್‌ಗೆ ಬಿಗ್‌ ಶಾಕ್‌! ‍ಬೇಲ್‌ ಕ್ಯಾನ್ಸಲ್‌ ಮಾಡಿ ಸುಪ್ರೀಂ ಕೋರ್ಟ್‌

ದರ್ಶನ್‌ಗೆ ನೀಡಿದ ಜಾಮೀನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ (Supreme court) ಗುರುವಾರ ಮಹತ್ವದ ತೀರ್ಪು ನೀಡಿದೆ. ದರ್ಶನ್‌ ಮತ್ತು ಪ್ರಕರಣದ ಇತರೆ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಕಳೆದ ವರ್ಷ ಡಿ.13ರಂದು ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಲೇರಿತ್ತು.

Independence Day: ನಾಳೆ ಸ್ವಾತಂತ್ರ್ಯ ದಿನಾಚರಣೆ ಪರೇಡ್‌, ನೀವೂ ಭಾಗವಹಿಸಲು ಹೀಗೆ ಮಾಡಿ

ನಾಳೆ ಸ್ವಾತಂತ್ರ್ಯ ದಿನಾಚರಣೆ ಪರೇಡ್‌, ನೀವೂ ಭಾಗವಹಿಸಲು ಹೀಗೆ ಮಾಡಿ

Bengaluru: ಸ್ವಾತಂತ್ರ್ಯೋತ್ಸವದ ಪರೇಡ್ ವೀಕ್ಷಣೆಗೆ ಸಿಲಿಕಾನ್ ಸಿಟಿ ಜನರಿಗೆ ಸುವರ್ಣ ಅವಕಾಶ ನೀಡಲಾಗಿದ್ದು, ಈ ವರ್ಷ 3 ಸಾವಿರ ಸಾರ್ವಜನಿಕರಿಗೆ ಪರೇಡ್ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಆನ್‌ಲೈನ್ ಪೋರ್ಟಲ್ ʼಸೇವಾ ಸಿಂಧೂʼವಿನಲ್ಲಿ ಉಚಿತ ಪಾಸ್ ಅಪ್ಲೈ ಮಾಡಿ ಪಡೆಯುವುದಕ್ಕೆ ಅವಕಾಶ ನೀಡಲಾಗಿದೆ.

Independence Day: ಎಣ್ಣೆ ಪ್ರಿಯರಿಗೆ ಕಹಿ ಸುದ್ದಿ: ನಾಳೆ, ನಾಡಿದ್ದು ಲಿಕ್ಕರ್‌ ಸಿಗಲ್ಲ

ಎಣ್ಣೆ ಪ್ರಿಯರಿಗೆ ಕಹಿ ಸುದ್ದಿ: ನಾಳೆ, ನಾಡಿದ್ದು ಲಿಕ್ಕರ್‌ ಸಿಗಲ್ಲ

Dry Day: ಜನ ಸೇರುವ ಸಾರ್ವಜನಿಕ ಸಭೆಗಳು ಮತ್ತು ಹಬ್ಬದ ಕಾರ್ಯಕ್ರಮಗಳ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಗುರಿಯೊಂದಿಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಗತ್ಯ ಬಿದ್ದವರು ತಮ್ಮ ಮದ್ಯ ಖರೀದಿಗಳನ್ನು ಮುಂಚಿತವಾಗಿ ಯೋಜಿಸಲು ಸೂಚಿಸಲಾಗಿದೆ.

Independence Day: ಸಾರ್ವಜನಿಕರೇ, ನೀವೂ ಈಗ ರಾಜಭವನ ವೀಕ್ಷಿಸಬಹುದು!

ಸಾರ್ವಜನಿಕರೇ, ನೀವೂ ಈಗ ರಾಜಭವನ ವೀಕ್ಷಿಸಬಹುದು!

Raj Bhavan: ರಾಜ್ಯಪಾಲರು (Governor) ನಿವಾಸವಾಗಿರುವ ರಾಜಭವನವನ್ನು ವರ್ಷಕ್ಕೊಮ್ಮೆ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ತೆರೆಯುವ ಪರಿಪಾಠವಿದ್ದು, ರಾಜಭವನಕ್ಕೆ ಪ್ರವೇಶ ಉಚಿತವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ನಿರ್ಮಿಸಲಾಗಿರುವ ಈ ರಾಜಭವನ ಅಪೂರ್ವ ವಾಸ್ತುಶಿಲ್ಪದೊಂದಿಗೆ ಗಮನ ಸೆಳೆಯುತ್ತದೆ.

Independence Day 2025: ಯುವತಿಯರ ಸೆಲೆಬ್ರೇಷನ್‌ಗೆ ಸಾಥ್ ನೀಡಲು ಬಂತು ತ್ರಿವರ್ಣದ ದುಪಟ್ಟಾ

ಯುವತಿಯರ ಸೆಲೆಬ್ರೇಷನ್‌ಗೆ ಸಾಥ್ ನೀಡಲು ಬಂತು ತ್ರಿವರ್ಣದ ದುಪಟ್ಟಾ

ಸ್ವಾತಂತ್ರ್ಯ ದಿನಾಚರಣೆಯಂದು ಯುವತಿಯರ ಸಂಭ್ರಮಕ್ಕೆ ಸಾಥ್ ನೀಡಲು ತ್ರಿವರ್ಣವಿರುವ ಬಗೆಬಗೆಯ ದುಪಟ್ಟಾಗಳು ಮಾರುಕಟ್ಟೆಗೆ ಆಗಮಿಸಿವೆ. ಅವು ಯಾವ್ಯುವು? ಧರಿಸುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಎಂಬುದರ ಬಗ್ಗೆ ಫ್ಯಾಷನ್ ಎಕ್ಸ್‌ಪರ್ಟ್ಸ್ ವಿದ್ಯಾ ವಿವೇಕ್ ಇಲ್ಲಿ ತಿಳಿಸಿದ್ದಾರೆ. ಆ ಕ

Road Accident: ಆಟೋ ತಾಗಿ ಉರುಳಿದ ಬೈಕ್‌, ಬಿಎಂಟಿಸಿ ಚಕ್ರ ಹರಿದು ಸವಾರ ಸಾವು

ಆಟೋ ತಾಗಿ ಉರುಳಿದ ಬೈಕ್‌, ಬಿಎಂಟಿಸಿ ಚಕ್ರ ಹರಿದು ಸವಾರ ಸಾವು

Killer BMTC: ಚಂದಾಪುರದಿಂದ ಬನಶಂಕರಿ ಮಾರ್ಗವಾಗಿ ಬಸ್ ತೆರಳುತ್ತಿತ್ತು. 21ನೇ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ಕೆಎ 57, ಎಫ್ 5778 ಸಂಖ್ಯೆಯದ್ದಾಗಿತ್ತು. ಆಟೋಗೆ ಬೈಕ್ ತಗುಲಿ ಕೆಳಗೆ ಬಿದ್ದ ಸವಾರನ ಮೇಲೆಯೇ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Road Accidents: ರಾಜ್ಯದಲ್ಲಿ ಪ್ರತಿದಿನ ಅಪಘಾತದಿಂದ 30 ಜನ ಸಾವು

ರಾಜ್ಯದಲ್ಲಿ ಪ್ರತಿದಿನ ಅಪಘಾತದಿಂದ 30 ಜನ ಸಾವು

Ramalinga reddy: ರಸ್ತೆ ಅಪಘಾತಗಳಲ್ಲಿ ಯುವಕರ ಸಾವಿನ ಸಂಖ್ಯೆ ಹೆಚ್ಚಾಗಿದೆ. ವ್ಹೀಲಿಂಗ್‌, ಹೆಲ್ಮೆಟ್‌ ಧರಿಸದಿರುವುದು, ಅತಿ ವೇಗ, ಕುಡಿದು ವಾಹನ ಚಾಲನೆ ಪ್ರಮುಖ ಕಾರಣವಾಗಿದೆ. ಕಳೆದ ಐದೂವರೆ ವರ್ಷದಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು 21,910 ಅಪಘಾತ ಸಂಭವಿಸಿ, 4,154 ಜನರ ಸಾವಿಗೀಡಾಗಿದ್ದು, 16247 ಜನ ಗಾಯಗೊಂಡಿದ್ದಾರೆ.

Loading...