ಜನಗಣತಿ ಆರಂಭ: ಆನ್‌ಲೈನ್‌ನಲ್ಲಿ ವಿವರಗಳನ್ನು ನೀವೇ ತುಂಬಲು ಇಲ್ಲಿದೆ ಗೈಡ್‌ಲೈನ್
ದೇಶದ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪ್ರಕ್ರಿಯೆ ಎನಿಸಿಕೊಂಡಿರುವ ಜನಗಣತಿಯ ಮೊದಲ ಹಂತ ಆರಂಭವಾಗಿದೆ. ಹೌದು, ಏಪ್ರಿಲ್ 1ರಂದು ಕರ್ನಾಟಕವೂ ಸೇರಿ 8 ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಆರಂಭವಾದ ಜನಗಣತಿ ಡಿಜಿಟಲ್ ವಿಧಾನದಲ್ಲಿ ನಡೆಯುತ್ತಿದೆ. ಜತೆಗೆ ಸ್ವಯಂ ಗಣತಿಗೂ ಅವಕಾಶ ನೀಡಲಾಗಿದೆ. ಅಂದರೆ ನಿಮ್ಮ ವಿವರವನ್ನು ನೀವೇ ಸರ್ಕಾರಕ್ಕೆ ನೀಡಬಹುದು. ಅದು ಹೇಗೆ? ಏನಿದು ಡಿಜಿಟಲ್ ಜನಗಣತಿ? ಇದರಿಂದ ಏನೆಲ್ಲ ಅನುಕೂಲವಿದೆ? ಮುಂತಾದ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
Ramesh Ballamoole
Apr 4, 2026 9:58 PM
ಬೆಂಗಳೂರು, ಏ. 4: ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಸ್ವಯಂ ಗಣತಿ ಹಾಗೂ ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ ಪಟ್ಟಿ ಮಾಡುವುದು ಮತ್ತು ಮನೆ ಗಣತಿ ನಡೆಯಲಿದೆ. ಆ ಮೂಲಕ ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಮುನ್ನವೇ ಸ್ವಯಂ ನೋಂದಣಿಗೆ 15 ದಿನಗಳ ಅವಕಾಶ ನೀಡಲಾಗಿದೆ. ಮನೆಯಲ್ಲಿಯೇ ಕುಳಿತು 10 ನಿಮಿಷದೊಳಗೆ ಆನ್‌ಲೈನ್‌ನಲ್ಲಿ ನೀವೇ ಮಾಹಿತಿ ನೀಡಬಹುದು. ಈ ವೇಳೆ ಯಾವುದೇ ದಾಖಲೆ ನೀಡಬೇಕಾಗಿಲ್ಲ. ಸಂಪೂರ್ಣ ಮಾಹಿತಿ ಈ ವಿಡಿಯೊದಲ್ಲಿದೆ.