ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: 1564 ಬಾಕಿ ಯುಡಿಐಡಿ ಕಾರ್ಡ್ಗಳ ವಿಲೇ ಬಗ್ಗೆ ತ್ವರಿತ ಕ್ರಮ ವಹಿಸಿ: ಜಿಲ್ಲಾಧಿಕಾರಿ ಜಿ.ಪ್ರಭು

“ವಿಕಲಚೇತನ ವಿಶಿಷ್ಟ ಗುರುತಿನ ಚೀಟಿ” ಸೃಜನೆಗಾಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ದೃಢೀಕರಣ ಪ್ರಮಾಣ ಪತ್ರ ನೀಡುವ ಹಂತದಲ್ಲಿ ಪ್ರಸ್ತುತ 1564 ಅರ್ಜಿಗಳು ಬಾಕಿ ಇವೆ. ಈ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಯೋಜಿತ ಕಾರ್ಯಕ್ರಮ ರೂಪಿಸಬೇಕು

1564 ಬಾಕಿ ಯುಡಿಐಡಿ ಕಾರ್ಡ್ಗಳ ವಿಲೇ ಬಗ್ಗೆ ತ್ವರಿತ ಕ್ರಮ ವಹಿಸಿ

ವಿಶೇಷ ಗುರುತಿನ ಚೀಟಿ ಯುಡಿಐಡಿ ಪಡೆಯಲು ಅರ್ಜಿ ಹಾಕಿರುವ ವಿಕಲಚೇತನರನ್ನು ಆರೋಗ್ಯ ತಪಾಸಣೆ ಮಾಡಿ ಅರ್ಜಿ ವಿಲೆ ಬಗ್ಗೆ ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. -

Profile
Ashok Nayak Apr 4, 2026 11:43 PM

ಚಿಕ್ಕಬಳ್ಳಾಪುರ: ವಿಶೇಷ ಗುರುತಿನ ಚೀಟಿ ಯುಡಿಐಡಿ ಪಡೆಯಲು ಅರ್ಜಿ ಹಾಕಿರುವ ವಿಕಲಚೇತನರನ್ನು ಆರೋಗ್ಯ ತಪಾಸಣೆ ಮಾಡಿ ಅರ್ಜಿ ವಿಲೇ ಬಗ್ಗೆ ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಪ್ರಭು(District Collector G.Prabhu) ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯತ್ ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ವಿಕಲ ಚೇತನರ ಕುಂದು ಕೊರತೆ ನಿವಾರಣೆಯ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ವಿಕಲಚೇತನ ವಿಶಿಷ್ಟ ಗುರುತಿನ ಚೀಟಿ” ಸೃಜನೆಗಾಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ದೃಢೀಕರಣ ಪ್ರಮಾಣ ಪತ್ರ ನೀಡುವ ಹಂತ ದಲ್ಲಿ ಪ್ರಸ್ತುತ 1564 ಅರ್ಜಿಗಳು ಬಾಕಿ ಇವೆ. ಈ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾ ಧಿಕಾರಿಗಳು ಯೋಜಿತ ಕಾರ್ಯಕ್ರಮ ರೂಪಿಸಬೇಕು.

ಇದನ್ನೂ ಓದಿ: Chikkaballapur News: ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದಾಖಲೆ ರಹಿತ ನಿವಾಸಿಗಳ ಆಶಾಕಿರಣವಾದ ಕಂದಾಯ ಗ್ರಾಮ ಅಭಿಯಾನ

ಯಾವ ಯಾವ ದಿನಾಂಕಗಳಂದು ಯಾವ ತಾಲ್ಲೂಕಿನ ವಿಕಲಚೇತನರನ್ನು ಜಿಲ್ಲಾಸ್ಪತ್ರೆಗೆ ಕರೆತಂದು ತಪಾಸಣೆ ಮಾಡಿಸಬೇಕು ಎಂಬುದನ್ನು ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯುಗಳ ಸಹಕಾರ ಪಡೆದು ದಿನಾಂಕವಾರು ಪಟ್ಟಿ ಮಾಡಬೇಕು. ವಿಕಲತೆಯ ಪ್ರಮಾಣವನ್ನು ಕರಾರುವಕ್ಕಾಗಿ ಪರಿಶೀಲಿಸಿ ವೈದ್ಯಾಧಿಕಾರಿಗಳು ನೈಜ ಪ್ರಮಾಣ ಪತ್ರ ನೀಡಬೇಕು. ಅಂಗ ವಿಕಲತೆ ಇದ್ದರೆ ಅರ್ಜಿಯನ್ನು ಅನುಮೋದಿಸಬೇಕು, ಇಲ್ಲವೆ ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಬಾಕಿ ಇಟ್ಟುಕೊಳ್ಳುವಂತಿಲ್ಲ.

ಈ ಎಲ್ಲ ಪ್ರಕ್ರಿಯೆಗಳು ಮುಂದಿನ 3 ತಿಂಗಳ ಒಳಗಾಗಿ ಪೂರ್ಣ ಆಗಬೇಕು. ಒಂದು ವೇಳೆ ಬೆನ್ನುಮೂಳೆ ಸಮಸ್ಯೆಯಿಂದ ಅಥವಾ ಇನ್ನಾವುದೇ ತೀವ್ರತರವಾದ ಅಂಗವಿಕಲತೆಗೆ ಒಳಗಾಗಿ ಬೆಡ್ ರಿಡನ್ ಆಗಿರುವ ವಿಕಲಚೇತನರ ಮಾಹಿತಿಯನ್ನು ಪಡೆದು ಅಂತಹವರ ನಿವಾಸ ಸ್ಥಳಕ್ಕೆ ವೈದ್ಯರ ತಂಡ ಹೋಗಿ ತಪಾಸಣೆ ಮಾಡಿ ವಿತರಣೆ ಮಾಡುವ ನಿಟ್ಟಿನಲ್ಲಿ ಸಮರ್ಪಕ ವಿಲೇವಾರಿ ಕ್ರಮಕ್ಕೆ ಮುಂದಾಗಲು ಸೂಚನೆ ನೀಡಿದರು.

bpm3mrw

ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳ, ಬ್ಯಾಂಕುಗಳ, ಕಟ್ಟಡಗಳಿಗೆ ಮುಂದಿನ ಒಂದು ತಿಂಗಳ ಒಳಗಾಗಿ ವಿಕಲಚೇತನರ ಅನುಕೂಲಕ್ಕಾಗಿ ರ್ಯಾಂಪ್ ವ್ಯವಸ್ಥೆ ಇರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ರ್ಯಾಂಪ್ ವ್ಯವಸ್ಥೆ ಮಾಡದ ಅಂತಹ ಕಚೇರಿ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಕಡಕ್ ಎಚ್ಚರಿಕೆ ನೀಡಿದರು.

ವಿಕಲಚೇತನರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ತಲುಪಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಜವಾಬ್ದಾರಿ ವಿಕಲಚೇತನರ ಸಬಲೀಕರಣ ಇಲಾಖೆಯ ಹಾಗೂ ಜಿಲ್ಲಾಡಳಿತದ ಮೇಲಿದೆ. ಜಿಲ್ಲೆಯಲ್ಲಿರುವ ಒಟ್ಟು 22286 ವಿಕಲಚೇತನರ ಆರೋಗ್ಯ ತಪಾಸಣೆಯನ್ನು ಕಾಲೋಚಿತವಾಗಿ ಮಾಡಿಸಬೇಕು.

ಪ್ರತಿ ತಾಲ್ಲೂಕು ಕೇಂದ್ರ ಗಳಲ್ಲಿ ವಿಕಲಚೇತನರಿಗಾಗಿ ದೈಹಿಕ ಪಿಸಿಯೋಥೆರಪಿ ಚಿಕಿತ್ಸಾ ಘಟಕಗಳನ್ನು ತೆರೆದು ಸೇವೆ ನೀಡುವ ಕಾರ್ಯ ಕಡ್ಡಾಯವಾಗಿ ಆಗಬೇಕು. ಗುಣಮಟ್ಟದ ಹಾಗೂ ಅತ್ಯಾಧುನಿಕ ಸಾಧನ ಸಲಕರಣೆಗಳನ್ನು ವಿಕಲಚೇತನರಿಗೆ ವಿತರಿಸಬೇಕು. ಕಿವುಡುತನ ಪರೀಕ್ಷೆ ಮಾಡುವ ಯಂತ್ರಗಳನ್ನು ಖರೀದಿಸಿ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ನೀಡಲು ಸೂಚನೆ ನೀಡಲಾ ಯಿತು.

ವಿಕಲಚೇತನರ ಕುಂದುಕೊರತೆಗಳನ್ನು ಆಲಿಸುವ ಹಾಗೂ ಸರ್ಕಾರದ ಯೋಜನೆಗಳನ್ನು ತಲುಪಿಸಲು ತಾಲ್ಲೂಕು ಮಟ್ಟದಲ್ಲಿ ನಿಯಮಿತವಾಗಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಬೇಕು. ಅಲ್ಲಿ ತೆಗೆದುಕೊಂಡ ಕ್ರಮಗಳ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಡ್ಡಾಯವಾಗಿ ತಲುಪಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ 103 ವಿಕಲಚೇತನರ ಬೆರಳಿನ ಗುರುತಿನ ಚಹರೆಯನ್ನು ತಂತ್ರಾಂಶಕ್ಕೆ ಒಳಪಡಿಸ ಲಾಗದೆ ಆಧಾರ್ ಕಾರ್ಡ್ ಸೌಲಭ್ಯ ಪಡೆಯಲು ಸಾಧ್ಯವಾಗದಿರುವುದು ಗಮನಕ್ಕೆ ಬಂದಿದೆ. ಅಂತಹವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತಾಂತ್ರಿಕ ಸಿಬ್ಬಂದಿ ಯವರು ಪರ್ಯಾಯ ಕ್ರಮ ಕೈಗೊಂಡು ಮುಂದಿನ 15 ದಿನಗಳ ಒಳಗಾಗಿ ಆಧಾರ್ ಕಾರ್ಡ್ ನೀಡಲು ಸೂಚನೆ ನೀಡಿದರು.

ಅನರ್ಹರನ್ನು ಗುರುತಿಸಿ ಪಟ್ಟಿಯಿಂದ ತೆಗೆಯಿರಿ

ಅಪಘಾತ ಸೇರಿದಂತೆ ಇನ್ನಿತರ ಅನಿವಾರ್ಯ ಕಾರಣಗಳಿಂದ ದೈಹಿಕ ಅಂಗ ವೈಕಲ್ಯಕ್ಕೆ ಒಳಗಾಗಿದ್ದಾಗ “ವಿಕಲಚೇತನ ಪ್ರಮಾಣ ಪತ್ರವನ್ನು ವೈದ್ಯರಿಂದ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ಪ್ರಸ್ತುತದಲ್ಲಿ ಅವರ ಅಂಗ ವೈಕಲ್ಯವು ಸರಿಯಾಗಿದ್ದರೂ ಸಹ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಅಂತಹವರನ್ನು ಪ್ರಸ್ತುತವಾಗಿ ತಪಾಸಣೆಗೆ ಒಳಪಡಿಸಿ ಅನರ್ಹರಿದ್ದಲ್ಲಿ ಅವರನ್ನು ವಿಕಲಚೇತನರ ಪಟ್ಟಿ ಯಿಂದ ತೆಗೆಯಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ .ನವೀನ್ ಭಟ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯ ಉಪನಿರ್ದೇಶಕ ಆರ್.ವೆಂಕಟೇಶರೆಡ್ಡಿ, ವಿಕಲಚೇತನರ ಕಲ್ಯಾಣಾಧಿಕಾರಿ ಜ್ಯೋತಿ ಲಕ್ಷ್ಮೀ, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಮಂಜುಳ ದೇವಿ, ತಾಲ್ಲೂಕು ಪಂಚಾಯ್ತಿಯಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡಬ್ಲ್ಯೂ), ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ವಿ.ಆರ್.ಡಬ್ಲ್ಯೂ) ಇದ್ದರು.