Gubbi News: ಏ.6ಕ್ಕೆ ಕಾರ್ಯ ನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ತಾಲ್ಲೂಕಿನಲ್ಲಿ ಪತ್ರಕರ್ತರ ಸಂಘದ ಚಟುವಟಿಕೆ ಚುರುಕಿನಿಂದ ಸಾಗಿದ್ದು ಪದಾಧಿಕಾರಿ ಗಳು, ಸದಸ್ಯರು ಹಾಗೂ ಸದಸ್ಯತ್ವ ಆಕಾಂಕ್ಷಿ ಪತ್ರಕರ್ತರು ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಗೆ ರೂಪುರೇಷೆ ಸಿದ್ಧಪಡಿಸಿದ್ದಾರೆ. ಪತ್ರಕರ್ತರ ಸಕ್ರಿಯ ಚಟುವಟಿಕೆ ಮೂಲಕ ಸಂಘದ ಇರುವಿಕೆ ಗುರುತಿಸಲು ಕಚೇರಿ ಆರಂಭಿಸಿ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಸಲಹೆ ನೀಡಿದರು
-
ಗುಬ್ಬಿ: ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಕಾರ್ಯಾಲಯ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇದೇ ತಿಂಗಳ 6 ರಂದು ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಡೆಯಲಿದೆ ಎಂದು ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಲ್.ಯೋಗೇಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿನ ನೂತನ ಕಾರ್ಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆ ನಂತರ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಂಘದ ಕಚೇರಿ ತೆರೆಯಲು ಈಗಾಗಲೇ ಕ್ರಮ ವಹಿಸಲಾಗಿದೆ. ಅದೇ ರೀತಿಯಲ್ಲಿ ಗುಬ್ಬಿ ತಾಲ್ಲೂಕಿನಲ್ಲಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕಟ್ಟಡವನ್ನು ಸಂಘದ ಕಚೇರಿಗೆ ಬಳಸಿಕೊಳ್ಳಲು ಅನುಮತಿ ಪಡೆದು ಏ.6 ಸೋಮವಾರ ಉದ್ಘಾಟನೆಗೊಳ್ಳಲಿದೆ ಎಂದರು.
ತಾಲ್ಲೂಕಿನಲ್ಲಿ ಪತ್ರಕರ್ತರ ಸಂಘದ ಚಟುವಟಿಕೆ ಚುರುಕಿನಿಂದ ಸಾಗಿದ್ದು ಪದಾಧಿಕಾರಿ ಗಳು, ಸದಸ್ಯರು ಹಾಗೂ ಸದಸ್ಯತ್ವ ಆಕಾಂಕ್ಷಿ ಪತ್ರಕರ್ತರು ಎಲ್ಲರೂ ಒಗ್ಗೂಡಿ ಕಾರ್ಯ ಕ್ರಮ ಯಶಸ್ವಿಗೆ ರೂಪುರೇಷೆ ಸಿದ್ಧಪಡಿಸಿದ್ದಾರೆ. ಪತ್ರಕರ್ತರ ಸಕ್ರಿಯ ಚಟುವಟಿಕೆ ಮೂಲಕ ಸಂಘದ ಇರುವಿಕೆ ಗುರುತಿಸಲು ಕಚೇರಿ ಆರಂಭಿಸಿ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಸಲಹೆ ನೀಡಿದರು.
ಇದನ್ನೂ ಓದಿ: Gubbi News: ವಿಜೃಂಭಣೆಯಿಂದ ಜರುಗಿದ ಶ್ರೀ ಬೇಟೆರಾಯಸ್ವಾಮಿ ಬ್ರಹ್ಮರಥೋತ್ಸವ
ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ ಸಂಘದ ಕಚೇರಿ ಆರಂಭಿಸಿ ಪತ್ರಕರ್ತರ ಒಗ್ಗಟ್ಟು ಪ್ರದರ್ಶನ ಹಾಗೂ ಚುರುಕಿನ ಚಟು ವಟಿಕೆಗೆ ಅಗತ್ಯ ಸವಲತ್ತು ಕಚೇರಿಯಲ್ಲಿ ಒದಗಿಸಲಾಗುವುದು. ನಮ್ಮಲ್ಲಿನ ಬಿಕ್ಕಟ್ಟು ಶಮನಗೊಳಿಸಿ ಒಗ್ಗಟ್ಟು ಪ್ರದರ್ಶನ ಜಿಲ್ಲಾ ಘಟಕದಿಂದ ನಡೆದಿದೆ. ಸಂಘದ ಎಲ್ಲಾ ನಿಯಮಾವಳಿಯಂತೆ ಗುಬ್ಬಿ ತಾಲ್ಲೂಕು ಘಟಕ ಕೆಲಸ ಮಾಡಲಿದೆ ಎಂದರು.
ಏ.6 ಸೋಮವಾರ ಬೆಳಿಗ್ಗೆ 10.30 ಕ್ಕೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸಂಘದ ನೂತನ ಕಾರ್ಯಾಲಯವನ್ನು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹಾಗೂ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟಿಸಲಿದ್ದಾರೆ. ತಾಲ್ಲೂಕು ಅಧ್ಯಕ್ಷ ಡಿ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಉದ್ಘಾಟಿಸಲಿದ್ದಾರೆ. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಜಿಲ್ಲಾಧ್ಯಕ್ಷ ಎಲ್.ಯೋಗೇಶ್ ಬೋಧಿಸಲಿದ್ದಾರೆ. ಪ್ರಮಾಣಪತ್ರವನ್ನು ಜಿಪಂ ಸಿಇಓ ಬಿ.ವಿ.ಅಶ್ವಿಜಾ ವಿತರಿಸಲಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಸಂಜಯ್ ಮಾತನಾಡಿ ಕಚೇರಿ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭಕ್ಕೆ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್, ತಹಶೀಲ್ದಾರ್ ಆರತಿ.ಬಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತ ರಾಜು, ತಾಪಂ ಇಓ ರಂಗನಾಥ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಭಾಗವಹಿಸ ಲಿದ್ದಾರೆ. ಜೊತೆಗೆ ಸಂಘದ ರಾಜ್ಯ ಪ್ರತಿನಿಧಿ ಚಿ.ನಿ.ಪುರುಷೋತ್ತಮ್ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಮಾರುತಿ ಗಂಗಹನುಮಯ್ಯ, ಮೆಳೆಕಲ್ಲಹಳ್ಳಿ ಯೋಗೀಶ್ ಸೇರಿದಂತೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಸದಸ್ಯರು ಇದ್ದರು.