ತುಲಾ ರಾಶಿಯವರ ಉದ್ಯೋಗದ ಮೇಲೆ ಚಂದ್ರ ಗ್ರಹದ ಪರಿಣಾಮವೇನು?
ಈ ವರ್ಷ ತುಲಾ ರಾಶಿಗೆ ಚಂದ್ರನು ಉದ್ಯೋಗ ವಿಚಾರದಲ್ಲಿ ಹತ್ತನೆ ಮನೆಯ ಯಜಮಾನ ಆಗಿದ್ದಾನೆ. ಹಾಗದರೆ ತುಲಾ ರಾಶಿಯವರ ಮೇಲೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.
Pushpa Kumari
Apr 14, 2026 10:57 PM
ಬೆಂಗಳೂರು, ಏ. 14: ತುಲಾ ರಾಶಿಯವರಿಗೆ ಈ ವರ್ಷ ಚಂದ್ರನು ದುಷ್ಟನಾಗಿ ಕಾಡುವ ಸಾಧ್ಯತೆ ಕೂಡ ಇರುತ್ತದೆ. ಕೆಲಸದ ವಿಚಾರದಲ್ಲಿ ಚಂದ್ರ ಯಜಮಾನ ಆಗಿದ್ದರೂ ಕೆಲಸದ ಸ್ಥಳದಲ್ಲಿ ಸರಿಯಾದ ಪರಿಶ್ರಮಕ್ಕೆ ತಕ್ಕ ಲಾಭ ಸಿಗಲಿದೆ. ಆದರೆ ಕೆಲವೊಮ್ಮೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಕೂಡ ಬರಬಹುದು. ಚಂದ್ರನ ಪ್ರಭಾವದಿಂದ ಸರಿಯಾದ ಯೋಜನೆ, ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಕಷ್ಟವಾಗಬಹುದು ಎಂದು ಭಾರತೀಯ ಜ್ಯೋತಿಷ ವಿಜ್ಞಾನ ಸಂಶೋಧಕ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.