ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮೃತ ತಾಯಿಯ ಖಾತೆಗೆ 1.13 ಲಕ್ಷ ಕೋಟಿ ರೂ. ಹಣ ಜಮೆ: ಒಂದೇ ದಿನದಲ್ಲಿ ಶಾರೂಖ್ ಖಾನ್‌ಗಿಂತ ಶ್ರೀಮಂತನಾದ ಯುವಕ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ದಿಗ್ಭ್ರಮೆಗೊಳಿಸಿದ ವಿಚಿತ್ರ ಘಟನೆಯೊಂದು ನಡೆದಿದೆ. 20 ವರ್ಷದ ದೀಪಕ್ ಎಂಬ ಯುವಕನ ಮೃತ ತಾಯಿಯ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಗೆ ಬರೋಬ್ಬರಿ 1,13,56,000 ಕೋಟಿ ರೂ. ಜಮೆಯಾಗಿರುವುದು ಪತ್ತೆಯಾಗಿದೆ. ಈ ಆಘಾತಕಾರಿ ಮೊತ್ತವು ಬಾಲಿವುಡ್ ತಾರೆ ಶಾರುಖ್ ಖಾನ್‌ ಅವರ 7,438 ಕೋಟಿ ರೂ. ಆಸ್ತಿಗಿಂತ 15,000 ಪಟ್ಟು ಹೆಚ್ಚು.

ಕೋಟಾಕ್ ಬ್ಯಾಂಕ್‌ನಿಂದ ಮಹಿಳೆ ಖಾತೆಗೆ 1.13 ಲಕ್ಷ ಕೋಟಿ ರೂ. ಜಮೆ

ಜಮೆಯಾದ ಮೊತ್ತ

Profile Sushmitha Jain Aug 5, 2025 6:16 PM

ಲಖನೌ: ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ (Noida) ಬ್ಯಾಂಕ್ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ದಿಗ್ಭ್ರಮೆಗೊಳಿಸಿದ ವಿಚಿತ್ರ ಘಟನೆಯೊಂದು ನಡೆದಿದೆ. 20 ವರ್ಷದ ದೀಪಕ್ ಎಂಬ ಯುವಕನ ಮೃತ ತಾಯಿಯ ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಖಾತೆಗೆ 37 ಅಂಕಿಗಳ ಭಾರಿ ಮೊತ್ತವಾದ ಸುಮಾರು 1,13,56,000 ಕೋಟಿ ರೂ. ಜಮೆಯಾಗಿರುವುದು ಪತ್ತೆಯಾಗಿದೆ. ಈ ಆಘಾತಕಾರಿ ಮೊತ್ತವು ಬಾಲಿವುಡ್ ತಾರೆ ಶಾರುಖ್ ಖಾನ್‌ (Shah Rukh Khan) ಅವರ 7,438 ಕೋಟಿ ರೂ. ಆಸ್ತಿಗಿಂತ 15,000 ಪಟ್ಟು ಹೆಚ್ಚು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ (Viral News) ವೈರಲ್ ಆಗಿದೆ.

ಗ್ರೇಟರ್ ನೋಯ್ಡಾದ ಉಂಚಿ ದನ್‌ಕೌರ್ ಗ್ರಾಮದ ದೀಪಕ್ ತನ್ನ ತಾಯಿ ಗಾಯತ್ರಿ ದೇವಿ ಅವರ ಖಾತೆಯನ್ನು ಆಗಸ್ಟ್ 3ರಂದು ಪರಿಶೀಲಿಸುತ್ತಿದ್ದಾಗ, 1.13 ಲಕ್ಷ ಕೋಟಿ ರೂಪಾಯಿಗಳ ಜಮೆಯಾಗಿರುವುದು ತಿಳಿದು ಬಂತು. ಗಾಯತ್ರಿ ದೇವಿ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಈ ಸಂದೇಶವನ್ನು ಓದಿದ ದೀಪಕ್ ಗೊಂದಲಕ್ಕೊಳಗಾದ, ಜಮೆಯಾಗಿದ್ದ ಮೊತ್ತದಲ್ಲಿದ್ದ ಸೊನ್ನೆಯನ್ನು ಎಣಿಕೆ ಮಾಡಲು ಸ್ನೇಹಿತರ ಸಹಾಯವನ್ನು ಕೇಳಿದ್ದಾನೆ ಎನ್ನಲಾಗಿದೆ.

ಮರುದಿನ ಬೆಳಗ್ಗೆ ದೀಪಕ್ ಬ್ಯಾಂಕ್‌ಗೆ ಭೇಟಿ ನೀಡಿದಾಗ, ಅಧಿಕಾರಿಗಳು ಆರಂಭದಲ್ಲಿ ಆಘಾತಕ್ಕೊಳಗಾದರು. ಪರಿಶೀಲನೆಯ ನಂತರ ಖಾತೆಯನ್ನು ಫ್ರೀಜ್ ಮಾಡಲಾಗಿದ್ದು, ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ವರದಿ ನೀಡಲಾಗಿದೆ. ಈ ಭಾರಿ ಮೊತ್ತದ ಮೂಲದ ಬಗ್ಗೆ ಸಂಪೂರ್ಣ ತನಿಖೆ ಆರಂಭವಾಗಿದೆ. ಸುದ್ದಿ ತಿಳಿದ ನಂತರ ದೀಪಕ್‌ಗೆ ಸಂಬಂಧಿಕರು, ಸ್ನೇಹಿತರು ಮತ್ತು ನೆರೆಹೊರೆಯವರಿಂದ ಕರೆಗಳು ಬರಲಾರಂಭಿಸಿದವು. ಸ್ಥಿತಿಯನ್ನು ನಿಭಾಯಿಸಲಾಗದೆ ಆತ ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ.



ಈ ಸುದ್ದಿಯನ್ನು ಓದಿ: Fake Identity: ದೇವಸ್ಥಾನದಲ್ಲಿ ನಕಲಿ ಗುರುತಿನಿಂದ ವಾಸಿಸಿದ್ದ 55 ವರ್ಷದ ಮುಸ್ಲಿಂ ವ್ಯಕ್ತಿಯ ಬಂಧನ

ನೆಟ್ಟಿಗರ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಎಕ್ಸ್ ಬಳಕೆದಾರ, "ಮುಕೇಶ್ ಅಂಬಾನಿಗಿಂತ ಶ್ರೀಮಂತ! ದೀಪಕ್‌ನ ತಾಯಿಯ ಖಾತೆಗೆ 13,56,000 ಕೋಟಿ ರೂ. ಜಮೆಯಾಗಿವೆ. ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಈ ಮೊತ್ತದ ಮೂಲ ಇನ್ನೂ ಸ್ಪಷ್ಟವಾಗಿಲ್ಲ. ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿದ್ದು, ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ವರದಿಯಾಗಿದೆ" ಎಂದಿದ್ದಾರೆ.

ಈ ಘಟನೆಗೆ ತಾಂತ್ರಿಕ ದೋಷವೇ ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆ ಕಾರಣವೇ ಎಂಬುದು ತನಿಖೆಯಿಂದ ಸ್ಪಷ್ಟವಾಗಲಿದೆ. ಈ ಘಟನೆಯು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದ್ದು, ಬ್ಯಾಂಕಿಂಗ್ ವ್ಯವಸ್ಥೆಯ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.