Viral News: ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ್ಯಾಕ್‌ಗೆ ಕಾರು ನುಗ್ಗಿಸಿದ ಭೂಪ! ತಪ್ಪಿದ ಭಾರೀ ಅನಾಹುತ
Viral News: ಕುಡಿದ ಮತ್ತಿನಲ್ಲಿದ್ದ ಚಾಲಕ ಕಾರನ್ನು ರೈಲು ಹಳಿಗೆ ನುಗ್ಗಿಸಿದ್ದು ಕಾರು ರೈಲ್ವೇ ಟ್ರ್ಯಾಕ್‌ಗೆ ಅಪ್ಪಳಿಸಿದೆ. ಆದರೆ ಚಾಲಕನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ಭಯಾನಕ ಘಟನೆ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನೆಟ್ಟಗರು ಶಾಕ್ ಆಗಿದ್ದಾರೆ.


ಪಟನಾ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕಾರನ್ನು ರೈಲ್ವೆ ಹಳಿಯ ಮೇಲೆ ಚಲಾಯಿಸಿದ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಕುಡಿತದ ನಶೆಯಲ್ಲಿ ಇದ್ದ ಕಾರು ಚಾಲಕನು ಗೂಗಲ್ ಮ್ಯಾಪ್‌ನ ಮಾರ್ಗ ಫಾಲೋ ಮಾಡಿಕೊಂಡು ಬಂದು ರೈಲು ಹಳಿಗಳ ಮೇಲೆ ಕಾರು ನುಗ್ಗಿಸಿದಾನೆ. ಅದೃಷ್ಟವಶಾತ್ ರೈಲು ಚಾಲಕ ದೂರದಿಂದಲೇ ಕಾರನ್ನು ಗಮನಿಸಿ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾನೆ. ಈ ಮೂಲಕ ಭೀಕರ ದುರ್ಘಟನೆ ತಪ್ಪಿದಂತಾಗಿದೆ. ಕುಡಿದ ಮತ್ತಿನಲ್ಲಿದ್ದ ಚಾಲಕ ಕಾರನ್ನು ರೈಲು ಹಳಿಗೆ ನುಗ್ಗಿಸಿದ್ದು ಕಾರು ರೈಲ್ವೇ ಟ್ರ್ಯಾಕ್‌ಗೆ ಅಪ್ಪಳಿಸಿದೆ. ಆದರೆ ಚಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಈ ಭಯಾನಕ ದೃಶ್ಯದ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral News)ಆಗಿದ್ದು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಕಾರು ಚಾಲಕನನ್ನು ಗೋಪಾಲ್‌ಗಂಜ್ ನಿವಾಸಿ ಆದರ್ಶ್ ರೈ ಎಂದು ಗುರುತಿಸಲಾಗಿದ್ದು ಗೋರಖ್‌ಪುರದಲ್ಲಿ ಪಾರ್ಟಿಯೊಂದನ್ನು ಮುಗಿಸಿ ತಡರಾತ್ರಿ ವಾಪಸ್ಸು ಆಗುವ ವೇಳೆ ಈ ಘಟನೆ ಸಂಭವಿಸಿದೆ. ಕುಡಿತದ ನಶೆಯಲ್ಲಿದ್ದ ಕಾರು ಚಾಲಕನು ಗೂಗಲ್ ಮ್ಯಾಪ್ ನಲ್ಲಿ ಸಂಪೂರ್ಣ ವಿಳಾಸವನ್ನು ಹಾಕದೆ, ಕೇವಲ ಗೋಪಾಲ್‌ಪುರ ಎಂದು ಟೈಪ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ವ್ಯಕ್ತಿ ಪಾರ್ಟಿ ಮುಗಿಸಿ ವಾಪಸ್ಸು ಆಗುವ ವೇಳೆ ಸರಿಯಾಗಿ ದಾರಿ ತಿಳಿಯದೆ ಗೂಗಲ್ ಮ್ಯಾಪ್ ಹಾಕಿದ್ದಾನೆ. ಆದರೆ ಸಂಪೂರ್ಣ ಸರಿಯಾದ ವಿಳಾಸ ಹಾಕದೇ ಉತ್ತರ ಪ್ರದೇಶದ ಲಕ್ನೋದ ಡೊಮಿಂಗಢ್ ಹತ್ತಿರ ಇರುವ ರೈಲು ಹಳಿಗಳ ಮೇಲೆ ಕಾರು ಚಲಾಯಿಸಿದ್ದಾನೆ. ಈ ಸಂದರ್ಭ ಕಾರು ಹಳಿಯ ಪಕ್ಕಕ್ಕೆ ಹೋಗಿ ಸಿಕ್ಕಿಹಾಕಿಕೊಂಡಿದೆ.ಕೆಲವೇ ಕ್ಷಣಗಳಲ್ಲಿ, ಅದೇ ಹಳಿಯಲ್ಲಿ ರೈಲು ಬಂದಿದೆ. ಹಳಿ ಮೇಲೆ ಕಾರು ಇರುವುದನ್ನು ಗಮನಿಸಿದ ಲೋಕೋಪೈಲಟ್ ಬ್ರೇಕ್ ಹಾಕಿ ರೈಲು ನಿಲ್ಲಿಸಿ ಭಾರೋ ಅನಾಹುತ ತಪ್ಪಿಸಿದ್ದಾನೆ.
ಇದನ್ನು ಓದಿ: Viral News: 3 ವರ್ಷಕ್ಕೂ ಅಧಿಕ ಕಾಲ ಮಹಿಳೆಗೆ ಋತುಚಕ್ರ; ವಿಚಿತ್ರ ಸ್ಥಿತಿ ಕಂಡು ವೈದ್ಯರು ದಿಗ್ಭ್ರಮೆ!
ಕೂಡಲೇ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಕಾರು ತೆರವುಗೊಳಿಸಿದ್ದಾರೆ. ಕಾರು ಚಾಲಕನ ಅವಾಂತ ರದಿಂದ ಸುಮಾರು 35 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಲಾಯಿತು.ಘಟನೆಯ ಸ್ಥಳಕ್ಕೆ ತಕ್ಷಣ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಕಾರು ಚಾಲಕನ ವೈದ್ಯಕೀಯ ತಪಾಸಣೆ ನಡೆಸಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕುಡಿದ ಮತ್ತಿನಲ್ಲೇ ಈ ಘಟನೆ ನಡೆದಿದೆ ಎಂಬುದು ಸ್ಪಷ್ಟವಾಗಿದ್ದು ಆತನ ಕಾರು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಅಮ್ರೋಹದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಎಸ್‌ಯುವಿ ಕಾರನ್ನು ರೈಲ್ವೆ ಹಳಿಯ ಮೇಲೆ ಚಲಾಯಿಸಿದ ಘಟನೆ ಕೂಡ ನಡೆದಿತ್ತು. ಅದೃಷ್ಟವಶಾತ್ ಯಾವುದೇ ರೈಲು ಸಂಚಾರವಿಲ್ಲದ ಕಾರಣ ದೊಡ್ಡ ಅಪಾಯ ತಪ್ಪಿದ್ದು ಈ ಘಟನೆಯ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿತ್ತು.