ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

81ರ ವೃದ್ಧೆ, 24ರ ಯುವಕ: ಸೋಶಿಯಲ್ ಮೀಡಿಯಾ ಪ್ರೀತಿ, ಏರ್‌ಪೋರ್ಟ್‌ನಲ್ಲಿ ಭಾವುಕ ಭೇಟಿ! ವಿಡಿಯೊ ವೈರಲ್

Viral Video: ಫ್ರಾನ್ಸ್‌ನ 81 ವರ್ಷದ ಮಹಿಳೆ ಮತ್ತು ಸೆನೆಗಲ್‌ನ 24 ವರ್ಷದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಎರಡು ವರ್ಷಗಳ ಆನ್‌ಲೈನ್‌ ಸಂಪರ್ಕದ ಬಳಿಕ ಸೆನೆಗಲ್‌ನಲ್ಲಿ ಮೊದಲ ಬಾರಿ ಭೇಟಿಯಾದ ಇವರ ಭಾವುಕ ವಿಡಿಯೊ ವೈರಲ್ ಆಗಿದೆ. 57 ವರ್ಷಗಳ ವಯಸ್ಸಿನ ಅಂತರದ ನಡುವೆಯೂ 2026ರ ಸೆಪ್ಟೆಂಬರ್‌ನಲ್ಲಿ ಮದುವೆಯಾಗಲು ಈ ಜೋಡಿ ಮುಂದಾಗಿದೆ.

81ರ ಅಜ್ಜಿ, 24ರ ಯುವಕ: ಸೋಶಿಯಲ್ ಮೀಡಿಯಾ ಪ್ರೇಮ ಈಗ ಮದುವೆಯತ್ತ

ಮೊದಲ ಬಾರಿ ಭೇಟಿಯದ ಪ್ರೇಮಿಗಳು -

Profile
Sushmitha Jain Aug 6, 2026 11:17 PM

ಡಕಾರ್ (ಸೆನೆಗಲ್), ಆ. 6: ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬ ಮಾತನ್ನು ಸಾಬೀತುಪಡಿಸುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರೇಮಕಥೆಯೊಂದು ಸಖತ್ ಸದ್ದು ಮಾಡುತ್ತಿದೆ. ಫ್ರಾನ್ಸ್ ಮೂಲದ 81 ವರ್ಷದ ವೃದ್ಧೆ ಮತ್ತು ಆಫ್ರಿಕಾದ ಸೆನೆಗಲ್‌ನ 24 ವರ್ಷದ ಯುವಕನ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಪ್ರೀತಿ ಚಿಗುರಿದೆ. ಇಬ್ಬರೂ ಸುಮಾರು ಎರಡು ವರ್ಷಗಳ ಕಾಲ ವೀಡಿಯೊ ಕರೆ ಹಾಗೂ ಸಂದೇಶಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ಆನ್‌ಲೈನ್ ಮೂಲಕ ಸುದೀರ್ಘ ಸಂಭಾಷಣೆ ನಡೆಸಿದ ನಂತರ, ಮಹಿಳೆಯು ಆ ಯುವಕನನ್ನು ನೇರವಾಗಿ ಭೇಟಿಯಾಗಲು ನಿರ್ಧರಿಸಿದರು. ಅದರಂತೆ ಸಾವಿರಾರು ಕಿಲೋ ಮೀಟರ್ ಪ್ರಯಾಣಿಸಿ ಸೆನೆಗಲ್‌ಗೆ ತಲುಪಿದರು. ಸದ್ಯ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) Agide.

ವಿಮಾನ ನಿಲ್ದಾಣದ ಭೇಟಿ ವೀಡಿಯೊ ವೈರಲ್

ಸೆನೆಗಲ್ ವಿಮಾನ ನಿಲ್ದಾಣದಲ್ಲಿ ಅವರಿಬ್ಬರ ಮೊದಲ ಭೇಟಿ ಅತ್ಯಂತ ಭಾವುಕವಾಗಿತ್ತು. ವೈರಲ್ ಆದ ವಿಡಿಯೊದಲ್ಲಿ ಇಬ್ಬರೂ ಪರಸ್ಪರ ಅಪ್ಪಿಕೊಳ್ಳುವುದು ಕಂಡುಬಂದಿದೆ. ಅಲ್ಲಿದ್ದ ವ್ಯಕ್ತಿಯೊಬ್ಬರು ಈ ಸುಂದರ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಈ ವಿಶಿಷ್ಟ ಪ್ರೇಮಕಥೆಗೆ ನೆಟ್ಟಿಗರಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ವೈರಲ್‌ ವಿಡಿಯೊ ಇಲ್ಲಿದೆ:

57 ವರ್ಷಗಳ ವಯಸ್ಸಿನ ವ್ಯತ್ಯಾಸ ಚರ್ಚೆಗೆ ಗ್ರಾಸ

81 ವರ್ಷದ ಮಹಿಳೆ ಹಾಗೂ 24 ವರ್ಷದ ಯುವಕನ ನಡುವೆ ಬರೋಬ್ಬರಿ 57 ವರ್ಷಗಳ ವಯಸ್ಸಿನ ಅಂತರವಿದೆ. ಇದೇ ಕಾರಣಕ್ಕೆ ಈ ಸಂಬಂಧವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ನಿಜವಾದ ಪ್ರೀತಿಗೆ ಸಾಕ್ಷಿ ಎಂದು ಬಣ್ಣಿಸುತ್ತಿದ್ದರೆ, ಇನ್ನು ಕೆಲವರು ಈ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ

ಈ ಅಸಾಧಾರಣ ಪ್ರೇಮಕಥೆಯು ಇಂಟರ್‌ನೆಟ್‌ ಜಗತ್ತಿನಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ನೆಟ್ಟಿಗರು ಪ್ರೀತಿಗೆ ವಯಸ್ಸಿನ ಹಿತಾಸಕ್ತಿಗಳಿಲ್ಲ ಎಂದು ಹೇಳಿ ಈ ಜೋಡಿಗೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ. ಆದರೆ ಮತ್ತೊಂದೆಡೆ, ಕೆಲವು ಬಳಕೆದಾರರು ಈ ಸಂಬಂಧದ ಹಿಂದೆ ಬೇರೆ ಏನಾದರೂ ಉದ್ದೇಶಗಳಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಟೀಕಿಸುತ್ತಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಮದುವೆಗೆ ತಯಾರಿ

ವರದಿಗಳ ಪ್ರಕಾರ, ಸೆನೆಗಲ್‌ನಲ್ಲಿ ಭೇಟಿಯಾದ ನಂತರ ಈ ಜೋಡಿ ಈಗ ಫ್ರಾನ್ಸ್‌ಗೆ ಹಿಂತಿರುಗಲು ಸಿದ್ಧತೆ ನಡೆಸುತ್ತಿದೆ. ಇಬ್ಬರೂ 2026ರ ಸೆಪ್ಟೆಂಬರ್‌ನಲ್ಲಿ ಅಧಿಕೃತವಾಗಿ ವಿವಾಹವಾಗಲು ಮುಂದಾಗಿದ್ದಾರೆ. ವಿಮರ್ಶೆಗಳು ಏನೇ ಇದ್ದರೂ, ಇಬ್ಬರೂ ತಮ್ಮ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಡಲು ಸಂಪೂರ್ಣ ಸಿದ್ಧತೆ ನಡೆಸುತ್ತಿದ್ದು, ಸದ್ಯ ಇವರ ಪ್ರೇಮಕಥೆ ತೀವ್ರ ಚರ್ಚೆಯಲ್ಲಿದೆ.