ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

82 ವರ್ಷವಾದರೂ ಕುಗ್ಗದ ಜೀವನೋತ್ಸಾಹ: ಬೀದಿ ಬದಿಯಲ್ಲಿ ದಿನಕ್ಕೆ 12 ಗಂಟೆ ತಿಂಡಿ ಮಾರಿ ಬದುಕು ಸಾಗಿಸುವ ಮನ್ಸುಖ್ ಕಾಕಾ!

Viral Video; ಶ್ರಮ ಪಡಬೇಕು ಎನ್ನುವ ಛಲ ಇದ್ದರೆ ಯಾವುದರದಲ್ಲೂ ಸಕ್ಸಸ್ ಕಾಣಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಕೋವಿಡ್-19 ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ, 82 ವರ್ಷದ ಮನ್ಸುಖ್ ಕಾಕಾ ಮುಂಬೈನ ರಸ್ತೆಯಲ್ಲಿ ತಿಂಡಿ ಪ್ಯಾಕೇಟ್ ಮಾರಾಟ ಮಾಡುವ ಎಲ್ಲರ ಹೃದಯ ಗೆದ್ದಿದ್ದಾರೆ. ಸ್ವಂತ ಕಾಲಲ್ಲಿ ದುಡಿಯಬೇಕು,ಇತರರಿಗೆ ಅವಲಂಬಿತ ಆಗಬಾರದು ಎಂದು 82 ವರ್ಷದ ಮನ್ಸುಖ್ ಕಾಕಾ ಅವರೇ ತಿಂಡಿ ಮಾರಾಟ ಮಾಡಿ ಬದುಕು ಸಾಗಿಸುತ್ತಾರೆ. ಸದ್ಯ ಇವರ ಜೀವನಗಾಥೆಗೆ ಎಲ್ಲರು ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ...

ಮುಂಬೈ ಬೀದಿಯಲ್ಲಿ ತಿಂಡಿ ಪ್ಯಾಕೇಟ್ ಮಾರಿ ಬದುಕು ಸಾಗಿಸುವ  82ರ ವೃದ್ಧ!

ತಿಂಡಿ ಪ್ಯಾಕೇಟ್ ಮಾರಿ ಬದುಕು ಸಾಗಿಸುವ 82ರ ವೃದ್ಧ -

Profile
Pushpa Kumari Jun 18, 2026 4:22 PM

ಮುಂಬೈ,ಜೂ.18: ವಯಸ್ಸು ಅನ್ನೋದು ಕೇವಲ ನಂಬರ್ ಅಷ್ಟೇ.. ಸಾಧಿಸಬೇಕು, ಶ್ರಮ ಪಡಬೇಕು ಎನ್ನುವ ಛಲ ಇದ್ದರೆ ಯಾವುದರದಲ್ಲೂ ಸಕ್ಸಸ್ ಕಾಣಬಹುದು ಅನ್ನೋದಕ್ಕೆ ಈ (Viral News) ಘಟನೆಯೇ ಸಾಕ್ಷಿಯಾಗಿದೆ. ಕೋವಿಡ್-19 ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ, 82 ವರ್ಷದ ಮನ್ಸುಖ್ ಕಾಕಾ ಮುಂಬೈನ ರಸ್ತೆಯಲ್ಲಿ ತಿಂಡಿ ಪ್ಯಾಕೇಟ್ ಮಾರಾಟ ಮಾಡುವ ಎಲ್ಲರ ಹೃದಯ ಗೆದ್ದಿದ್ದಾರೆ. ಸ್ವಂತ ಕಾಲಲ್ಲಿ ದುಡಿಯಬೇಕು,ಇತರರಿಗೆ ಅವಲಂಬಿತ ಆಗಬಾರದು ಎಂದು 82 ವರ್ಷದ ಮನ್ಸುಖ್ ಕಾಕಾ ಅವರೇ ತಿಂಡಿ ಮಾರಾಟ ಮಾಡಿ ಬದುಕು ಸಾಗಿಸುತ್ತಾರೆ. ಸದ್ಯ ಇವರ ಜೀವನಗಾಥೆಗೆ ಎಲ್ಲರು ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಸಾಧಿಸುವ ಛಲ ಇದ್ದರೆ ನಾವು ಎಲ್ಲಿ ಕೂಡ ಬದುಕನ್ನು ಸಾಗಿಸಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೋವಿಡ್ ಸಮಯದಲ್ಲಿ ಈ ಹಿರಿಯ ಅಜ್ಜ ತನ್ನ ಕೆಲಸವನ್ನು ಕಳೆದುಕೊಂಡಿದ್ದರು‌. ಇಂದು ಮುಂಬೈನ ಫುಟ್ ಪಾತ್ ನಲ್ಲಿ ಹೋಮ್ ಮೇಡ್ ತಿಂಡಿ ಮಾರಾಟ ಮಾಡುತ್ತಿದ್ದಾರೆ.

ವಿಡಿಯೋ ನೋಡಿ:

ಮನ್ಸುಖ್ ಕಾಕಾ ಅವರು ದಶಕಗಳ ಕಾಲ ಸೀರೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸವನ್ನು ಮಾಡುತ್ತಿದ್ದರು. ಆದರೆ ಕೋವಿಡ್ ಸಂದರ್ಭದಲ್ಲಿ ಇವರ ಬದಕನ್ನೇ ತಲೆ ಕೆಳಗೆ ಮಾಡಿದೆ. ತೀವ್ರ ಅನಾರೋಗ್ಯಕ್ಕೆ ಒಳಗಾದಾಗ ಅವರು ಕೆಲಸ ಕಳೆದುಕೊಳ್ಳಬೇಕಾಯಿತು. ಇವರನ್ನು ನೋಡಿಕೊಳ್ಳಲು ಮಗ ಕೂಡ ತನ್ನ ಕೆಲಸವನ್ನು ಬಿಡಬೇಕಾಗಿ ಬಂತು.‌‌ ಇದರಿಂದ ಪರಿಸ್ಥಿತಿಯು ಅವರ ಕುಟುಂಬದ ಮೇಲೂ ಪರಿಣಾಮ ಬೀರಿತು.

Viral News: ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ

ಆರೋಗ್ಯ ಸರಿಯಾದ ನಂತರ, ಕಾಕಾ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ಮಾರಾಟ ಮಾಡುವ ಉದ್ಯಮವನ್ನು ಆರಂಭ ಮಾಡಿದ್ದಾರೆ. ತಂಗಿಯ ಸಹಾಯದಿಂದ ಮನೆಯಲ್ಲೇ ತಯಾರಿಸಿದ ತಾಜಾ ತಿಂಡಿಗಳನ್ನು ಇವರು ಮಾರಾಟಮಾಡುತ್ತಾರೆ. ಇಂದಿಗೂ, ಕಾಕಾ ತಮ್ಮ ರಸ್ತೆಬದಿಯ ಅಂಗಡಿಯಲ್ಲಿ ದಿನಕ್ಕೆ ಸುಮಾರು 12 ಗಂಟೆಗಳ ಕಾಲ ಕಳೆಯುತ್ತಾರೆ.

ಕುಟುಂಬದ ಸದಸ್ಯರ ಸಹಾಯದಿಂದ ಮನೆಯಲ್ಲಿಯೇ ತಿಂಡಿಯನ್ನು ತಾಜಾವಾಗಿ ತಯಾರಿಸುತ್ತಾರೆ. ವೈರಲ್ ಆದ ವಿಡಿಯೊದಲ್ಲಿ ಕಾಕಾ ಅವರು ಇನ್‌ ಶರ್ಟ್ ಮಾಡಿಕೊಂಡು ಅತ್ಯಂತ ಶಿಸ್ತಿನಿಂದ ಕಾಣಿಸಿಕೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ಚಟರ್ಜಿ, "ಈ ವಯಸ್ಸಿನಲ್ಲೂ ಮನ್ಸುಖ್ ಕಾಕಾ ತನ್ನ ಸ್ಟಾಲ್ ಅನ್ನು ತುಂಬಾ ಉತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬರೆದಿದ್ದಾರೆ

ನೆಟ್ಟಿಗರು ಕೂಡ ಈ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು ಬಳಕೆದಾರರೊಬ್ಬರು ನಾವೆಲ್ಲರೂ ಇವರನ್ನು ಬೆಂಬಲಿಸಲು ಒಟ್ಟಾಗಿ ಬರೋಣ ಎಂದು ಬರೆದಿದ್ದಾರೆ. ಮತ್ತೊಬ್ಬರು ದಯವಿಟ್ಟು ನಿಮ್ಮೆಲ್ಲರೂ ಸಾಧ್ಯವಾದರೆ ಇವರಿಂದ ತಿಂಡಿ ಖರೀದಿ ಮಾಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.