ರೀಲ್ಸ್ ಹುಚ್ಚಿಗೆ ಕಾಡಾನೆಗಳಿಗೆ ಕಿರುಕುಳ ನೀಡಿದ ಯುವಕರು: ಕ್ರಮ ಕೈಗೊಳ್ಳಲು ಪ್ರಾಣಿ ಪ್ರಿಯರ ಆಕ್ರೋಶ!
Viral Video: ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡುವುದು, ಪ್ರಾಣಿಗಳ ಜತೆ ಅತಿರೇಕದ ವರ್ತನೆ ತೋರುವುದು, ಹೀಗೆ ಟೀಕೆ ವ್ಯಕ್ತ ಪಡಿಸುವ ಅನೇಕ ವಿಡಿಯೊಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಒಡಿಶಾದ ಮಯೂರ್ ಭಂಜ್ ನ ಸಿಮಿಲಿಪಾಲ್ ನಲ್ಲಿ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಯುವಕರ ಗುಂಪೊಂದು ರೀಲ್ಸ್ ಗಾಗಿ ಕಾಡಾನೆಗಳ ಮೇಲೆ ತೀವ್ರ ಕಿರುಕುಳ ಎಸಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕರ ವಿರುದ್ಧ ಕಿಡಿಕಾರಿದ್ದಾರೆ...
ಒಡಿಶಾದಲ್ಲಿ ಕಾಡಾನೆಗಳಿಗೆ ಕಿರುಕುಳ ನೀಡಿದ ಯುವಕರ ಗುಂಪು -
ಒಡಿಶಾ,ಜೂ.18: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು, ಲೈಕ್ ಹಾಗೂ ವೀವ್ಸ್ ಗಳಿಸಬೇಕು ಎನ್ನುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗಿದೆ. ಹೀಗಾಗಿ ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡುವುದು, ಪ್ರಾಣಿಗಳ ಜತೆ ಅತಿರೇಕದ ವರ್ತನೆ ತೋರುವುದು, ಹೀಗೆ ಟೀಕೆ ವ್ಯಕ್ತಪಡಿಸುವ ಅನೇಕ ವಿಡಿಯೊಗಳು ವೈರಲ್ (Viral Video) ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಒಡಿಶಾದ ಮಯೂರ್ ಭಂಜ್‌ನ ಸಿಮಿಲಿಪಾಲ್‌ನಲ್ಲಿ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಯುವಕರ ಗುಂಪೊಂದು ರೀಲ್ಸ್ ಗಾಗಿ ಕಾಡಾನೆಗಳ ಮೇಲೆ ತೀವ್ರ ಕಿರುಕುಳ ಎಸಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕರ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಮೊಬೈಲ್ ಗೀಳು ಹೆಚ್ಚಾಗಿದ್ದು ಎಷ್ಟೇ ಬುದ್ದಿ ಮಾತು ಹೇಳಿದರೂ ಜನ ಬದಲಾಗುತ್ತಿಲ್ಲ. ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೂಡ ರೀಲ್ಸ್ ಮಾಡಲು ಮುಂದಾಗುತ್ತಿದ್ದಾರೆ. ಇದೀಗ ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಸಿಮಿಲಿಪಾಲ್ ಅರಣ್ಯ ಪ್ರದೇಶ ದಲ್ಲಿ ಯುವಕರ ಗುಂಪೊಂದು ಕಾಡಾನೆಗಳಿಗೆ ತೊಂದರೆ ನೀಡಿದ್ದಾರೆ. ಶಾಂತವಾಗಿ ಇದ್ದ ಕಾಡನೆಗಳನ್ನು ಕೆಣಕಲು ಹೋಗಿದ್ದು ಅವುಗಳ ಅತ್ಯಂತ ಸಮೀಪಕ್ಕೆ ಹೋಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾರೆ.
ವಿಡಿಯೋ ನೋಡಿ:
THREAD: Exposing the Reels Gang Harassing Elephants in Simlipal
— Prasant Rai (@PRaiLAC) June 15, 2026
1/5
These 5 individuals are making life a living hell for the elephants around Simlipal, #Mayurbhanj
Just for cheap social media clout and reels, they are relentlessly provoking these gentle giants.
This… pic.twitter.com/4WXmimoQU1
ಐದು ಜನ ಯುವಕರ ಗುಂಪೊಂದು ಕಾಡನೆಗಳ ಆವಾಸಸ್ಥಾನಕ್ಕೆ ನುಗ್ಗಿ ಅವುಗಳನ್ನು ಕೆಣಕುತ್ತಿದೆ. ಆನೆಗಳು ಸಿಕ್ಕ ತಕ್ಷಣ ಅವುಗಳ ಅತ್ಯಂತ ಸಮೀಪಕ್ಕೆ ಹೋಗಿ ರೀಲ್ಸ್ ಮಾಡಿದ್ದಾರೆ. ಅಷ್ಟೆ ಅಲ್ಲದೆಆನೆ ಮರಿಯೊಂದರ ಹತ್ತಿರ ಹೋಗಿ ವ್ಯಕ್ತಿಯೊಬ್ಬ ಆನೆಗೆ ಕೋಲಿನಿಂದ ಚುಚ್ಚಿ ಕೆಣಕಿದ್ದಾನೆ. ಈ ದೃಶ್ಯಾವಳಿಗಳು ವನ್ಯಜೀವಿ ಉತ್ಸಾಹಿಗಳು ಮತ್ತು ಸಂರಕ್ಷಣಾವಾದಿಗಳಲ್ಲಿ ಕಳವಳವನ್ನು ಹುಟ್ಟುಹಾಕಿದೆ.
Viral News: ರಾತ್ರೋರಾತ್ರಿ ಕೆಂಪು ಬಣ್ಣಕ್ಕೆ ತಿರುಗಿದ ಹಾರ್ಮುಜ್ ದ್ವೀಪದ ಸಮುದ್ರ! ಏನಿದರ ಅಸಲಿಯತ್ತು?
ವನ್ಯಜೀವಿಗಳನ್ನು ಪದೇ ಪದೇ ಬೆನ್ನಟ್ಟುವುದು ಅಥವಾ ಪ್ರಚೋದಿಸುವುದರಿಂದ ಅಪಾಯಕಾರಿ ಪರಿಣಾಮ ಬೀರಬಹುದು ಎಂದು ವನ್ಯಜೀವಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ತನಿಖೆ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಇಂತಹ ಯುವಕರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆನೆಗಳ ಹಿಂಡು ದಾಳಿ ಮಾಡಿದರೆ ಎಲ್ಲ ರೀಲ್ಸ್ ನಿಲ್ಲುತ್ತಿತ್ತು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.