ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ನಾಯಿಮರಿಗಳನ್ನು ಜೀವಂತವಾಗಿ ಸುಟ್ಟು ಹಾಕಿ ವಿಕೃತಿ ಮೆರೆದ ಪಾಪಿಗಳು!

ಇತ್ತೀಚೆಗೆ ಪ್ರಾಣಿಗಳನ್ನು ವಿನಾಕಾರಣ ಹಿಂಸಿಸುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇವೆ. ಇದೀಗ ಇಸ್ಲಾಮಾಬಾದ್‌ನ ಗುಲ್ಬರ್ಗ್ ಗ್ರೀನ್ಸ್‌ನಲ್ಲಿ ಈ ಘಟನೆ ನಡೆದಿದ್ದು 9 ನಾಯಿಮರಿಗಳನ್ನು ನಿರ್ದಯವಾಗಿ ಸುಟ್ಟು ಕೊಲ್ಲಲಾಗಿದೆ. ಈಗಾಗಲೇ ಆ ಪ್ರದೇಶದ ಸಿಸಿಟಿವಿ ಫೂಟೇಜ್‌ಗಳನ್ನು ಕಲೆಹಾಕಿ ಈ ಕೃತ್ಯ ಎಸಗಿದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ದೃಶ್ಯ ನೋಡಿದ ಪ್ರಾಣಿಪ್ರಿಯರು ಈ ಘಟನೆಯನ್ನು ಪರಿಶೀಲಿಸಿ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ನಾಯಿಮರಿಯನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳು!

ಸಾಂದರ್ಭಿಕ ಚಿತ್ರ.

Profile Pushpa Kumari Mar 11, 2025 3:55 PM

ಇಸ್ಲಾಮಾಬಾದ್: ದುಷ್ಕರ್ಮಿಗಳು ಅಮಾನವೀಯ ರೀತಿಯಲ್ಲಿ ಜೀವಂತ ನಾಯಿಮರಿಗಳನ್ನು ಬೆಂಕಿ ಇಟ್ಟು ಕೊಂದ ಆಘಾತಕಾರಿ ಘಟನೆಯೊಂದು ಇಸ್ಲಾಮಾಬಾದ್‌ನ ಗುಲ್ಬರ್ಗ್ ಗ್ರೀನ್ಸ್‌ನಲ್ಲಿ ನಡೆದಿದೆ. ಸದ್ಯ ಈ ದೃಶ್ಯ ಕರುಳು ಕಿವುಚುವಂತಿದ್ದು ಕಣ್ಣು ತೆರೆಯದ 9 ನಾಯಿ ಮರಿಗಳನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು (Viral News) ನಾಯಿ ಮರಿಗಳಿಗೆ ಬೆಂಕಿ ಇಟ್ಟು ವಿಕೃತಿ ಮೆರೆದ ಪಾಪಿಗಳನ್ನು ಹಿಡಿದು ಸರಿಯಾದ ಶಿಕ್ಷೆ ನೀಡಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಸುಟ್ಟು ಹಾಕಿದ ಒಂಭತ್ತು ನಾಯಿ ಮರಿಗಳನ್ನು ಚೀಲದ ಮೇಲೆ ಇರಿಸಲಾಗಿದ್ದು, ಅವುಗಳಲ್ಲಿ 1 ಮಾತ್ರ ಜೀವನ್ಮರಣದ ಹೋರಾಡುತ್ತಿದ್ದರೆ, ಉಳಿದವುಗಳು ಈ ಭಯಾನಕ ಕೃತ್ಯಕ್ಕೆ ಬಲಿಯಾದ ದೃಶ್ಯ ನಿಜಕ್ಕೂ ಮನ ಕುಲುಕುವಂತಿದೆ. ಆದಾಗ್ಯೂ ಜೀವ ಉಳಿದಿದ್ದ ಒಂದು ನಾಯಿ ಮರಿಗೆ ವೈದ್ಯಕೀಯ ಆರೈಕೆ ನೀಡಿದರೂ ಪ್ರಾಣವನ್ನು ಕಳೆದುಕೊಂಡಿದ್ದು ಈ ಘಟನೆಯ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶವನ್ನು ಉಂಟುಮಾಡಿದೆ.

ಇತ್ತೀಚೆಗೆ ಪ್ರಾಣಿಗಳನ್ನು ವಿನಾಕಾರಣ ಹಿಂಸಿಸುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇವೆ. ಇದೀಗ ಇಸ್ಲಾಮಾಬಾದ್‌ನ ಗುಲ್ಬರ್ಗ್ ಗ್ರೀನ್ಸ್‌ನಲ್ಲಿ ಈ ಘಟನೆ ನಡೆದಿದ್ದು 9 ನಾಯಿಮರಿಗಳನ್ನು ನಿರ್ದಯವಾಗಿ ಸುಟ್ಟು ಕೊಲ್ಲಲಾಗಿದೆ. ಈಗಾಗಲೇ ಆ ಪ್ರದೇಶದ ಸಿಸಿಟಿವಿ ಫೂಟೇಜ್ ಗಳನ್ನು ಕಲೆಹಾಕಿ ಈ ಕೃತ್ಯ ಎಸಗಿದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ದೃಶ್ಯ ನೋಡಿದ ಪ್ರಾಣಿ ಪ್ರಿಯರು ಈ ಘಟನೆಯನ್ನು ಪರಿಶೀಲಿಸಿ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ದೃಶ್ಯ ಕಂಡ ಪ್ರಾಣಿ ದಯಾಸಂಘದ ಸದಸ್ಯರು ಮರಿಗಳನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಬಹುಪಾಲು ಸುಟ್ಟು ಹೋಗಿದ್ದ ನಾಯಿಗಳು ಮೃತವಾಗಿವೆ. ವಿಡಿಯೊದಲ್ಲಿ ಒಂಬತ್ತು ಎಳೆಯ ನಾಯಿ ಪ್ರಾಣಿಗಳನ್ನು ಗೋಣಿ ಚೀಲದ ಮೇಲೆ ಇರಿಸಿರುವ ದೃಶ್ಯ ನೋಡಬಹುದು. ಇದರಲ್ಲಿ ಒಂದು ನಾಯಿಮರಿ ಜೀವಕ್ಕಾಗಿ ಹೋರಾಡುತ್ತಿದ್ದರೆ ಇತರ ಎಂಟು ನಾಯಿ ಮರಿಗಳು ಪ್ರಾಣ ಕಳೆದುಕೊಂಡಿವೆ. ಆದಾಗ್ಯೂ,ಜೀವ ಇದ್ದ ನಾಯಿ ಮರಿಗೆ ವೈದ್ಯಕೀಯ ಚಿಕಿತ್ಸೆ ನೀಡಿದರೂ ಕೊನೆಗೆ ಪ್ರಾಣ ಕಳೆದುಕೊಂಡಿದೆ.

ಪಾಕಿಸ್ತಾನ ಮೂಲದ ಪ್ರಾಣಿ ಪ್ರಿಯ ಝಡ್ ರಾಝಾ ಈ ಘಟನೆಯನ್ನು ಹಂಚಿಕೊಂಡಿದ್ದು ಈ ದೃಶ್ಯಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. “ಕಣ್ಣು ತೆರೆಯದ 9 ಮರಿಗಳನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ ಎಂದು ಶೀರ್ಷಿಕೆ ಬರೆದು ವಿಡಿಯೊ ಹಂಚಿಕೊಂಡಿದ್ದಾರೆ. ಈ ಭಯಾನಕ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಮುಗ್ಧ ನಾಯಿಮರಿಗಳಿಗೆ ನ್ಯಾಯ ಒದಗಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.

ಇದನ್ನು ಓದಿ: Viral Video: ಆಸ್ಪತ್ರೆಯೊಳಗೆ ನಮಾಜ್ ಮಾಡಿದ ವ್ಯಕ್ತಿ; ಕೊನೆಗೆ ಆಗಿದ್ದೇನು?

ಪ್ರಾಣಿ ಕಲ್ಯಾಣ ಸಂಸ್ಥೆಗಳು, ಪ್ರಾಣಿ ಪ್ರೇಮಿಗಳು ಮತ್ತು ಭಾರತೀಯರು ಸೇರಿದಂತೆ ಈ ವಿಚಾರವನ್ನು ಗಂಭೀರವಾಗಿ ಪರಿಶೀಲಿಸುವಂತೆ ಮತ್ತು ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಪಾಕಿಸ್ತಾನದ ಅಧಿಕಾರಿಗಳಿಗೆ ಕೇಳಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ‌ ನಾಯಿಯನ್ನು ಕೊಲ್ಲುವ ಘಟನೆ ಇತ್ತೀಚೆಗೆ ಹೆಚ್ಚಾಗಿದ್ದು ಬಳಕೆದಾರರು ಪ್ರಾಣಿ ಹಿಂಸೆ ಪ್ರಕರಣದ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ನಡುವೆ ಪಾಕಿಸ್ತಾನದಲ್ಲಿ ಪ್ರತಿ ವರ್ಷ 50,000 ನಾಯಿಗಳು ಸಾಯುತ್ತವೆ ಎಂದು ಆಘಾತಕಾರಿ ಸುದ್ದಿಯು ವೈರಲ್ ಆಗಿದೆ.