ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕುಡಿದ ಮತ್ತಿನಲ್ಲಿ ಹಾಡಹಗಲೇ ಮಹಿಳೆಯ ಮೇಲೆ ಭೀಕರ ಹಲ್ಲೆ; ವಿಡಿಯೋ ವೈರಲ್‌

Viral Video: ಮಲಾಡ್‌ನ ಮಾಲ್ವಾನಿಯಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೂ ಹಗಲು ಹೊತ್ತಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ‌. ಸದ್ಯ ನಗರದಲ್ಲಿ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಆಕ್ರೋಶ ಮತ್ತು ಕಳವಳವನ್ನು ಹುಟ್ಟುಹಾಕಿದೆ. ಮೊದಲು ಮಹಿಳೆ ಮತ್ತು ವ್ಯಕ್ತಿಗೆ ಮಾತಿನ ಚಕಮಕಿ ನಡೆದಿದ್ದು ಕೆಲವೇ ಕ್ಷಣಗಳಲ್ಲಿ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಹಿಂಸಾತ್ಮಕವಾಗಿ ತಿರುಗಿ ಮಹಿಳೆಯ ಮೇಲೆ ದಾಳಿ ಮಾಡುತ್ತಾನೆ.

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿ: ವಿಡಿಯೊ ವೈರಲ್

ಮುಂಬೈನಲ್ಲಿ ಹಾಡಹಗಲೇ ಮಹಿಳೆಯರ ಮೇಲೆ ಭೀಕರ ಹಲ್ಲೆ -

Profile
Pushpa Kumari May 6, 2026 1:37 PM

ಮುಂಬೈ,ಮೇ 6: ಮುಂಬೈನ ಮಲಾಡ್ ನಲ್ಲಿ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಹಾಡಹಗಲೇ ಮಹಿಳೆಯರ ಮೇಲೆ ಭೀಕರ ಹಲ್ಲೆ ಎಸಗಿದ್ದಾನೆ. ಮಹಿಳೆಯೊಬ್ಬರ ಮುಖಕ್ಕೆ ಸರಿಯಾಗಿ ಗುದ್ದಿ ದೈಹಿಕವಾಗಿ ಕ್ರೂರ ರೀತಿಯಲ್ಲಿ ಹಲ್ಲೆ ಎಸಗಿದ್ದಾನೆ. ವ್ಯಕ್ತಿಯ ಈ ದೌರ್ಜನ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಮಲಾಡ್‌ನ ಮಾಲ್ವಾನಿಯಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೂ ಹಗಲು ಹೊತ್ತಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ‌. ಸದ್ಯ ನಗರದಲ್ಲಿ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಆಕ್ರೋಶ ಮತ್ತು ಕಳವಳವನ್ನು ಹುಟ್ಟುಹಾಕಿದೆ. ಮೊದಲು ಮಹಿಳೆ ಮತ್ತು ವ್ಯಕ್ತಿಗೆ ಮಾತಿನ ಚಕಮಕಿ ನಡೆದಿದ್ದು ಕೆಲವೇ ಕ್ಷಣಗಳಲ್ಲಿ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಹಿಂಸಾತ್ಮಕವಾಗಿ ತಿರುಗಿ ಮಹಿಳೆಯ ಮೇಲೆ ದಾಳಿ ಮಾಡುತ್ತಾನೆ.

ವಿಡಿಯೋ ನೋಡಿ:

ವೈರಲ್ ಆಗಿರುವ ದೃಶ್ಯದಲ್ಲಿ‌ ಜನ ಸಂದಣಿ ಸೇರಿರುವ ರಸ್ತೆಯಲ್ಲೇ ವ್ಯಕ್ತಿಯೊಬ್ಬ ಮಹಿಳೆ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಲು ಮುಂದಾಗುತ್ತಾನೆ. ಈ ವೇಳೆ ಅಲ್ಲಿ ಜನ ಸೇರಿದ್ದರೂ ಗಲಾಟೆಯನ್ನು ಸರಿಪಡಿಸಲು ಮುಂದಾಗಿಲ್ಲ. ಜಗಳ ತಾರಕಕ್ಕೆ ಹೋಗುತ್ತಿದ್ದಂತೆ ಅಮಲಿನಲ್ಲಿದ್ದ ವ್ಯಕ್ತಿ ಏಕಾಏಕಿ ಮಹಿಳೆಯ ಕೆನ್ನೆಗೆ ಗುದ್ದಿ ದೈಹಿಕವಾಗಿ ಹಿಂಸೆ ಮಾಡಲು ಹೋಗುತ್ತಾನೆ‌. ಮಹಿಳೆ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟರೂ ಮತ್ತೆ ಮತ್ತೆ ಹಿಂಸೆಗೆ ಮುಂದಾಗಿದ್ದಾನೆ.

Viral Video: ರೀಲ್ಸ್ ತಂದ ಅವಾಂತರ; ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ

ಹಲ್ಲೆ ನಡೆಯುತ್ತಿದ್ದಂತೆ, ಹತ್ತಿರದ ಇನ್ನೊಬ್ಬ ಮಹಿಳೆ ಮಧ್ಯಪ್ರವೇಶಿಸಿ, ದಾಳಿಕೋರನ ಮುಂದೆ ಬಂದು ನಿನ್ನ ಕೃತ್ಯ ರೆಕಾರ್ಡ್ ಮಾಡಲಾಗುತ್ತಿದೆ ಎಂದು ಎಚ್ಚರಿಸುತ್ತಾಳೆ.ಇದರಿಂದ ರೊಚ್ಚಿಗೆದ್ದ ದುಷ್ಕರ್ಮಿ ಆ ಮಹಿಳೆಯ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಗೊಂದಲದ ನಡುವೆ, ಪಕ್ಕದಲ್ಲಿದ್ದ ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಎರಡನೇ ಮಹಿಳೆಯನ್ನು ಘರ್ಷಣೆಯಿಂದ ರಕ್ಷಿಸುತ್ತಾನೆ‌. ಕೆಲವೇ ಕ್ಷಣದಲ್ಲಿ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ.

ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಇಷ್ಟೆಲ್ಲಾ ನಡಿತಿದ್ದರೂ ಜನ ರಕ್ಷಣೆಗೆ ಧಾವಿಸಿಲ್ಲ ಎಂದು ಜನರ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ. ಮತ್ತೊಬ್ಬರು ಈತನಿಗೆ ಸರಿಯಾದ ಶಿಕ್ಷೆ ವಿಧಿಸಬೇಕೆಂದು ಕಾಮೆಂಟ್ ಮಾಡಿದ್ದಾರೆ.