ಆನ್‌ಲೈನ್ ವಹಿವಾಟಿನಲ್ಲಿ ತಪ್ಪಾಗಿ 10 ಸಾವಿರ ರುಪಾಯಿ ಪಾವತಿ: ಪ್ರಯಾಣಿಕನಿಗೆ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಉಬರ್ ಚಾಲಕ
Viral News: ಒಡಿಶಾದ ಉಬರ್ ಚಾಲಕರೊಬ್ಬರು ತೋರಿದ ಪ್ರಮಾಣಿಕತೆ ಎಲ್ಲರ ಮನ ಗೆದ್ದಿದೆ. ಒಡಿಶಾದ ಉದ್ಯೋಗಿಯೊಬ್ಬರು ತಪ್ಪಾಗಿ 10,000 ರುಪಾಯಿಯನ್ನು ಉಬರ್ ಚಾಲಕನಿಗೆ ವರ್ಗಾಯಿಸಿದ್ದರು. ಅವರನ್ನು ಪತ್ತೆಹಚ್ಚಿ ಪೂರ್ಣ ಮೊತ್ತವನ್ನು ಚಾಲಕ ಹಿಂತಿರುಗಿಸಿದ್ದಾರೆ. ಇವರ ಪ್ರಾಮಾಣಿಕ ವ್ಯಕ್ತಿತ್ವ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಭುವನೇಶ್ವರ, ಮೇ 5: ಸಮಾಜದಲ್ಲಿ ಮಾನವೀಯತೆ ಮರೆಯಾಗಿದ್ದು, ನೈತಿಕ ಜವಾಬ್ದಾರಿ ಕಡಿಮೆಯಾಗುತ್ತಿದೆ. ಇಂತಹ ಕಾಲದಲ್ಲೂ ಒಡಿಶಾದ ಉಬರ್ (Odisha) ಚಾಲಕರೊಬ್ಬರು ತೋರಿದ ಪ್ರಮಾಣಿಕತೆ ಎಲ್ಲರ ಮನಗೆದ್ದಿದೆ. ಒಡಿಶಾದ ಉದ್ಯೋಗಿಯೊಬ್ಬರು ತಪ್ಪಾಗಿ 10,000 ರುಪಾಯಿಯನ್ನು ಉಬರ್ ಚಾಲಕನಿಗೆ ವರ್ಗಾಯಿಸಿದ್ದರು. ಆದರೆ ಅವರನ್ನು ಪತ್ತೆಹಚ್ಚಿ ಪೂರ್ಣ ಮೊತ್ತವನ್ನು ಚಾಲಕ ಹಿಂತಿರುಗಿಸಿದ್ದಾರೆ. ಇವರ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಇತ್ತೀಚೆಗೆ ಹೆಚ್ಚಿನ ಗ್ರಾಹಕರು ಆನ್‌ಲೈನ್ ವಹಿವಾಟುಗಳಾದ ಗೂಗಲ್ ಪೇ, ಪೋನ್ ಪೇಯನ್ನು ಬಳಸುತ್ತಾರೆ. ಅದೇ ರೀತಿ ಪ್ರಯಾಣಿಕನು ತಪ್ಪಾಗಿ ಚಾಲಕನ ಖಾತೆಗೆ ಹಣ ಕಳುಹಿಸಿದ್ದಾರೆ. ಈ ಘಟನೆಯನ್ನು ದೆಬಾಶಿಸ್ ತ್ರಿಪಾಠಿ ಎಂಬವರು ಪೋಸ್ಟ್ ಮಾಡಿದ್ದಾರೆ. ಸಹೋದ್ಯೋಗಿಗೆ ಹಣ ಕಳುಹಿಸುವ ಬದಲಾಗಿ ಉಬರ್ ಚಾಲಕನಿಗೆ 10,000 ರುಪಾಯಿ ಹಾಕಿದ್ದರು. ಅವರು ಈ ಘಟನೆಯನ್ನು ವಿವರಿಸಿದ್ದಾರೆ.
ದೆಬಾಶಿಶ್ ತ್ರಿಪಾಠಿ ಯಾವುದೋ ಕೆಲಸದ ನಿಮಿತ್ತ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ್ದರು. ಪ್ರಯಾಣದ ವೇಳೆ ತಮ್ಮ ಸಹದ್ಯೋಗಿಯೊಬ್ಬರಿಗೆ 10,000 ರುಪಾಯಿಯನ್ನು ಜಿ-ಪೇ ಮೂಲಕ ಪಾವತಿಸಿದ್ದರು. ಸಹದ್ಯೋಗಿ ಮತ್ತು ಉಬರ್ ಚಾಲಕನ ಇಬ್ಬರ ಹೆಸರು ಶ್ರೀಕಾಂತ್ ಎಂದಾಗಿದ್ದು ಗೊಂದಲಕ್ಕೆ ಕಾರಣ. ಈ ಗಡಿಬಿಡಿಯಲ್ಲಿ ಉಬರ್ ಚಾಲಕನಿಗೆ ಹಣ ಪಾವತಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
Yet another Uber story.
— Debashis Tripathy (@deba1602) May 3, 2026
Took a cab for some work and accidentally G-Paid the driver 10k instead of my business contact (they had the exact same name!). I couldn't reach him through the app and figured the money was gone.
Then at 9:30 PM, my apartment security calls... (1/2)
ಆದರೆ ಬಳಿಕ ತಪ್ಪಿನ ಅವರಿವಾಗಿ ಚಾಲಕನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಣ ಕಳೆದೇ ಹೋಯಿತು ಎಂದು ಭಾವಿಸಿದಾಗ ರಾತ್ರಿ 9:30ರ ಸುಮಾರಿಗೆ, ತ್ರಿಪಾಠಿ ಅವರ ಅಪಾರ್ಟ್‌ಮೆಂಟ್ ಹುಡುಕಿಕೊಂಡು ಚಾಲಕ ಆಗಮಿಸಿದರು.
ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಹೈರಾಣ
ಚಾಲಕ ತನಗೆ ತ್ರಿಪಾಠಿ ಕಳುಹಿಸಿದ್ದ ಸಂಪೂರ್ಣ 10,000 ರುಪಾಯಿಯನ್ನು ಹಿಂದಿರುಗಿಸಿದರು. ವಿಶೇಷವೆಂದರೆ ದೆಬಾಶಿಶ್ ನೀಡಿದ ಬಹುಮಾನವನ್ನೂ ಪಡೆಯಲು ಚಾಲಕ ನಿರಾಕರಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಶ್ರೀಕಾಂತ ಎಂದು ಗುರುತಿಸಲ್ಪಟ್ಟ ಚಾಲಕನಿಗೆ ತ್ರಿಪಾಠಿ ಕೃತಜ್ಞತೆ ಸೂಚಿಸಿದ್ದಾರೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಾಮಾಣಿಕತೆ ನೋಡುವುದು ಅಪರೂಪ. ಶ್ರೀಕಾಂತ ಅವರಿಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.
ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು ಬಳಕೆದಾರರು ಚಾಲಕನ ಮಾನವೀಯತೆಗೆ ಫಿದಾ ಆಗಿದ್ದಾರೆ. ಬಳಕೆದಾರರೊಬ್ಬರು, “ಒಳ್ಳೆಯ ಜನರಿಂದ ಮಾತ್ರ ಒಳ್ಳೆಯದು ಸಂಭವಿಸುತ್ತದೆ" ಎಂದಿದ್ದಾರೆ. ಮತ್ತೊಬ್ಬರು "ಇದು ತುಂಬಾ ಹೃದಯ ಸ್ಪರ್ಶಿಯಾಗಿದೆ" ಎಂದು ಬರೆದುಕೊಂಡಿದ್ದಾರೆ.