Viral Video: ಆಕಾಶದಲ್ಲಿ ಮದುವೆಯಾದ ಜೋಡಿ; ಏನಿದು ವೈರಲ್ ವಿಡಿಯೊ?
ಖ್ಯಾತ ಏವಿಯೇಶನ್ ಸ್ಯಾಮ್ ಚುಯಿ, ಹಾಗೂ ಅವನ ಪತ್ನಿ ಫಿಯೋನಾ ಆಕಾಶದಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಅದಕ್ಕಾಗಿ ಅವರು ಅರಬ್ ಎಮಿರೇಟ್ಸ್‌ನ ಫುಜೈರಾ ವಿಮಾನ ನಿಲ್ದಾಣದಲ್ಲಿ ಖಾಸಗಿ ಬೋಯಿಂಗ್ 747 ವಿಮಾನದಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ಮದುವೆಯಾಗಿದ್ದಾರೆ. ಅವರ ಮದುವೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಪ್ರತಿಯೊಬ್ಬರಿಗೆ ತಮ್ಮ ಮದುವೆ ಹಾಗೇ ಆಗಬೇಕು, ಹೀಗೆ ಆಗಬೇಕು ಎಂಬ ಆಸೆ ಇರುತ್ತದೆ.ಇದೀಗ ಖ್ಯಾತ ಏವಿಯೇಶನ್ ಸ್ಯಾಮ್ ಚುಯಿ, ತನ್ನ ಮದುವೆಯನ್ನು ಆಚರಿಸಲು ಒಂದು ವಿಶಿಷ್ಟ ಮಾರ್ಗವನ್ನು ಆರಿಸಿಕೊಂಡಿದ್ದಾನೆ. ಅದೇನೆಂದರೆ ಸ್ಯಾಮ್ ಚುಯಿ ಮತ್ತು ಅವನ ಪತ್ನಿ ಫಿಯೋನಾ ಆಕಾಶದಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು ಅರಬ್ ಎಮಿರೇಟ್ಸ್‌ನ ಫುಜೈರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಬೋಯಿಂಗ್ 747 ವಿಮಾನದಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ಮದುವೆಯಾದರು. ಅವರ ಮದುವೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಚುಯಿ ತನ್ನ ಪತ್ನಿ ಫಿಯೋನಾ ಜೊತೆ ರೆಡ್ ಕಾರ್ಪೆಟ್ ಮೇಲೆ ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಬಿಳಿ ಬಣ್ಣದ ಉಡುಪಿನಲ್ಲಿರುವ ಈ ದಂಪತಿ ಆಕಾಶದಲ್ಲಿ ತಮ್ಮ ಮದುವೆಯ ಸ್ಥಳಕ್ಕೆ ಹೋಗುವಾಗ ನಗುತ್ತಾ ಕ್ಯಾಮೆರಾಗಳತ್ತ ಕೈ ಬೀಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಇದು "ನಮ್ಮ ಜೀವನದ ಅತ್ಯುತ್ತಮ ದಿನ" ಎಂದು ವಿವರಿಸುತ್ತಾ, ಚುಯಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್, ಹಂಚಿಕೊಂಡಿದ್ದಾನೆ. ಫಿಯೋನಾ ಈ ಹಿಂದೆ ಬರೆದ ಹಾಡನ್ನು ಪ್ರೇಮಿಗಳ ದಿನದ ಉಡುಗೊರೆಯಾಗಿ ನೀಡುವ ಮೂಲಕ ಆಚರಣೆಯನ್ನು ಇನ್ನಷ್ಟು ವಿಶೇಷವಾಗಿಸಿದಳು. ಅಲ್ಲಿ ಅತಿಥಿಗಳು ಸುತ್ತುವರಿದಿದ್ದು, ದಂಪತಿಯನ್ನು ಅಭಿನಂದಿಸಿದರು. ಹಾಗೂ ಎಲ್ಲರೂ ಸೇರಿ ವಿಮಾನದಲ್ಲಿ ನೃತ್ಯ ಮಾಡಿದರು ಮತ್ತು ಆಟಗಳನ್ನು ಆಡಿದ್ದಾರೆ. ಸಾವಿರಾರು ಅಡಿ ಎತ್ತರದ ಗಾಳಿಯಲ್ಲಿ ದಂಪತಿ ತಮ್ಮ ವಿಶೇಷ ದಿನವನ್ನು ಬಹಳ ಅದ್ಧೂರಿಯಾಗಿ, ಆಚರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಒಬ್ಬರು, “ಮದುವೆಯಾಗಲು ಎಂತಹ ಉತ್ತಮ ಮಾರ್ಗ” ಎಂದು ಬರೆದಿದ್ದಾರೆ. ಮತ್ತೊಬ್ಬರು, "ತಪ್ಪಿಸಿಕೊಳ್ಳಲೇಬಾರದ ಕಾರ್ಯಕ್ರಮ! ಗಾಳಿಯಲ್ಲಿ ನಡೆಯುವ ಮದುವೆಯ ಬಗ್ಗೆ ನಾನು ಎಂದಿಗೂ ಕೇಳಿಲ್ಲ" ಎಂದು ಹಂಚಿಕೊಂಡರು. "ಪ್ರೀತಿಯನ್ನು ಅಕ್ಷರಶಃ ಗಾಳಿಯಲ್ಲಿ ತೇಲಾಡಿಸಿದ್ದಾರೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅಶ್ಲೀಲ ರೀಲ್‌ಗಳೇ ಇವರ ಬಂಡವಾಳ; ಇಬ್ಬರು ಇನ್‌ಸ್ಟಾಗ್ರಾಂ ಇನ್‌ಫ್ಲುವೆನ್ಸರ್ಸ್ ಅರೆಸ್ಟ್!
ಮದುವೆಯ ಸಂಪೂರ್ಣ ವೆಚ್ಚವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ವಿಮಾನ ನಿಲ್ದಾಣದ ಶುಲ್ಕಗಳು, ಆಹಾರ ಮತ್ತು ಅಲಂಕಾರಗಳಂತಹ ಇತರ ವಿಷಯಗಳನ್ನು ಹೊರತುಪಡಿಸಿ ಬೋಯಿಂಗ್ 747 ಹಾರಾಟಕ್ಕೆ ಬೇಕಾದ ಇಂಧನಕ್ಕಾಗಿ ಗಂಟೆಗೆ ಸುಮಾರು $20,000 ವೆಚ್ಚವಾಗಬಹುದು ಎಂದು ಸ್ಯಾಮ್ ಚುಯಿ ಹಂಚಿಕೊಂಡನು. ಆದರೆ, ಸ್ಯಾಮ್‌ಗೆ, ಖರ್ಚು ಮಾಡಿದ ಹಣವು ಮುಖ್ಯವಾಗಿರಲಿಲ್ಲ ಬದಲಾಗಿ ಆ ಅನುಭವವು ಅಮೂಲ್ಯವಾಗಿತ್ತು. ಮುಂದಿನ ವರ್ಷಗಳಲ್ಲಿ ಮತ್ತೆ ಇದೇ ರೀತಿಯ ವಿಶಿಷ್ಟವಾಗಿರುವುದನ್ನು ಮಾಡುವ ಬಗ್ಗೆ ಅವನು ಈಗಾಗಲೇ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.