Viral Video: ಅಶ್ಲೀಲ ರೀಲ್‌ಗಳೇ ಇವರ ಬಂಡವಾಳ; ಇಬ್ಬರು ಇನ್‌ಸ್ಟಾಗ್ರಾಂ ಇನ್‌ಫ್ಲುವೆನ್ಸರ್ಸ್ ಅರೆಸ್ಟ್!
ಉತ್ತರ ಪ್ರದೇಶದ ಸಂಭಾಲ್‌ನ ಇಬ್ಬರು ಖ್ಯಾತ ಇನ್‍ಸ್ಟಾಗ್ರಾಮರ್ ಮೆಹಕ್ ಮತ್ತು ಪರಿ ಅಶ್ಲೀಲ ರೀಲ್‌ಗಳನ್ನು ರಚಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಇದು ವೈರಲ್(Viral Video) ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಸಂಭಾಲ್ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರಿಬ್ಬರು ಹಾಗೂ ಅವರ ತಂಡವನ್ನು ಬಂಧಿಸಿದ್ದಾರೆ.


ಲಖನೌ: ಉತ್ತರ ಪ್ರದೇಶದ ಸಂಭಾಲ್‌ನ ಇಬ್ಬರು ಖ್ಯಾತ ಇನ್‍ಸ್ಟಾಗ್ರಾಮರ್ ಇತ್ತೀಚೆಗೆ ಅಶ್ಲೀಲ ವಿಡಿಯೊಗಳನ್ನು ರಚಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು,ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂಭಾಲ್ ಪೊಲೀಸರು ಕ್ರಮ ಕೈಗೊಂಡು ಅವರನ್ನು ಈಗ ಬಂಧಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.
ಮೆಹಕ್ ಮತ್ತು ಪಾರಿ ಅವರ ತಂಡದ ಇತರ ಇಬ್ಬರು ಸದಸ್ಯರಾದ ಹಿನಾ ಮತ್ತು ಜರಾರ್ ಆಲಂ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಯುಪಿ ಪೊಲೀಸರು ದೃಢಪಡಿಸಿದ್ದಾರೆ. ಮೆಹಕ್ ಮತ್ತು ಪಾರಿ ಹಣ ಗಳಿಸಲು ಅಶ್ಲೀಲ ವಿಡಿಯೊಗಳನ್ನು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಕೂಡಲೇ ಪ್ರಕರಣ ದಾಖಲಿಸಿ ಈಗ ಅವರಿಬ್ಬರನ್ನೂ ಮತ್ತು ಅವರ ತಂಡವನ್ನು ಬಂಧಿಸಲಾಗಿದೆ.
सोशल मीडिया पर अश्लील कंटेंट पोस्ट करने के मामले में 4 गिरफ्तार।
— Ritika Rajora (@Rrajora07) July 15, 2025
गिरफ्तारी के बाद भी महक-परी का एटीट्यूड कायम…
थाने से बाहर निकलीं तो कैमरे के सामने ‘विक्ट्री साइन’ दिखा कर मुस्कुराईं!
जैसे कोई ट्रॉफी जीतकर लौटी हों!#sambhal #mehakpari #Reels @sambhalpolice @Krishan_IPS https://t.co/zywcBNilF9 pic.twitter.com/qTUSoJjSnr
ಇನ್‌ಸ್ಟಾಗ್ರಾಮ್‌ನಿಂದ ಬಂದ ಆದಾಯ
ಪೊಲೀಸರ ಹೇಳಿಕೆಯ ಪ್ರಕಾರ, ಮೆಹಕ್ ಮತ್ತು ಪರಿ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ತಿಂಗಳಿಗೆ ಸುಮಾರು ರೂ25,000 ರಿಂದ ರೂ30,000 ಆದಾಯ ಗಳಿಸುತ್ತಿದ್ದರು. ಮೆಹಕ್ ಮತ್ತು ಪರಿ ಹಣ ಗಳಿಸಲು ಮತ್ತು ಜನಪ್ರಿಯತೆ ಗಳಿಸಲು ಆಕ್ಷೇಪಾರ್ಹ ವಿಡಿಯೊಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ. ಹಾಗಾಗಿ ಪೊಲೀಸರು ಮೆಹಕ್, ಪರಿ ಮತ್ತು ತಂಡವನ್ನು 296 ಬಿ-ಬಿಎನ್ಎಸ್, 66-ಐಟಿ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ. ಅವರಿಂದ ಎರಡು ದುಬಾರಿ ಐಫೋನ್‌ಗಳು ಮತ್ತು ಇತರ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಅಶ್ಲೀಲ ವಿಡಿಯೋಗಳನ್ನು ಮಹಿಳೆಯರಿಗೆ ಕಳುಹಿಸಿದ ಬಿಜೆಪಿ ನಾಯಕ; ಚಪ್ಪಲಿಯಲ್ಲಿ ಬಿತ್ತು ಏಟು! ವಿಡಿಯೋ ನೋಡಿ
ಅಲ್ಲದೇ ಬಂಧನಕ್ಕೊಳಗಾದ ಇಬ್ಬರಲ್ಲಿ ಒಬ್ಬಳು ಪೊಲೀಸ್ ಠಾಣೆಯಲ್ಲಿದ್ದ ಮಾಧ್ಯಮದವರ ಕಡೆಗೆ ನಗುತ್ತಾ ವಿಜಯದ ಸನ್ನೆ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಂಧನಕ್ಕೊಳಗಾದಾಗಲೂ ಆಕೆಯ ಈ ವರ್ತನೆಯನ್ನು ಕಂಡು ನೆಟ್ಟಿಗರು ಮತ್ತೊಮ್ಮೆ ಈ ಜೋಡಿಯನ್ನು ಟೀಕಿಸಿದ್ದಾರೆ.ಮೆಹಕ್-ಪರಿಯ ಅಧಿಕೃತ ಖಾತೆಯನ್ನು ಸೋಶಿಯಲ್ ಮೀಡಿಯಾದಲ್ಲಿ ನಿಷೇಧಿಸಲಾಗಿದೆ.