Viral Video: ಇದೆಂಥ ಕ್ರೇಜ್; ಸಿಂಹದ ಜತೆ ಪೋಸ್ ನೀಡಲು ಮಗುವನ್ನೇ ಅಪಾಯಕ್ಕೆ ತಳ್ಳಿದ ತಂದೆ: ವಿಡಿಯೊ ವೈರಲ್
ತಂದೆಯೊಬ್ಬ ತನ್ನ ಮಗನನ್ನು ಸಿಂಹದ ಹತ್ತಿರ ನಿಲ್ಲಿಸಿ ಫೋಟೊ ತೆಗೆಯುವುದಕ್ಕೆ ಪ್ರಯತ್ನಿಸಿದ್ದಾನೆ. ಆದರೆ ಆ ಮಗು ಸಿಂಹವನ್ನು ಕಂಡು ಹೆದರಿ ಜೋರಾಗಿ ಕೂಗಾಡಿದೆ. ಮಗುವಿನ ಕಿರುಚಾಟ ಕಂಡು ಸಿಂಹ ಕೂಡ ಕೋಪಗೊಂಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.


ಈಗೀಗ ಎಲ್ಲರಿಗೂ ಫೋಟೊ ಕ್ರೇಜ್! ಇದಕ್ಕಾಗಿ ಯಾವ ಸಾಹಸ ಮಾಡಲೂ ಹಿಂಜರಿಯುವುದಿಲ್ಲ. ಇದೀಗ ತಂದೆಯೊಬ್ಬ ತನ್ನ ಮಗನನ್ನು ದೊಡ್ಡ ಸಿಂಹದ ಬಳಿ ನಿಲ್ಲಿಸಿ ಫೋಟೊ ತೆಗೆಯುವುದಕ್ಕೆ ಪ್ರಯತ್ನಿಸಿದ್ದಾನೆ. ಆದರೆ ಆ ಮಗು ಸಿಂಹ(Lion)ವನ್ನು ಕಂಡು ಹೆದರಿ ಜೋರಾಗಿ ಕೂಗಿದೆ. ಇದು ಸಿಂಹಕ್ಕೂ ಕೂಡ ಕಿರಿಕಿರಿಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಆದರೆ ಅಪ್ಪನ ಈ ಕೃತ್ಯ ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ವಿಡಿಯೊದಲ್ಲಿ, ವ್ಯಕ್ತಿಯೊಬ್ಬ ಸಿಂಹದ ಮೇಲೆ ಮಗುವನ್ನು ಕೂರಿಸಿ ಫೋಟೊ ತೆಗೆಯುವುದಕ್ಕೆ ನೋಡಿದ್ದಾನೆ. ಆಗ ಹೆದರಿದ ಮಗು ಜೋರಾಗಿ ಕೂಗಿದೆ. ಇದರಿಂದ ಸಿಂಹ ಕೂಡ ಕಿರಿಕಿರಿಗೊಂಡಿದೆ.
ವಿಡಿಯೊ ಇದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತಂದೆಯ ವಿರುದ್ಧ ಕಿಡಿಕಾರಿದ್ದಾರೆ. ನೆಟಿಜನ್‌ಗಳು ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ ಮತ್ತು ಪ್ರಾಣಿ ಹಿಂಸೆಯ ಬಗ್ಗೆಯೂ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಜಲಪಾತದಲ್ಲಿ ಜಲಕ್ರೀಡೆ ಆಡುತ್ತಿದ್ದವರು ಜೀವ ಉಳಿಸಿಕೊಳ್ಳಲು ಎದ್ದೋ ಬಿದ್ದು ಓಡಿದ್ಯಾಕೆ? ಬೆಚ್ಚಿಬೀಳಿಸುವ ವಿಡಿಯೊ ವೈರಲ್
"ನೀವು ಫೋಟೊಕ್ಕಾಗಿ ಮಕ್ಕಳ ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದೀರಾ? ಮಗುವಾಗುವ ಮೊದಲು ಎಲ್ಲ ಜನರಿಗೆ ಪೇರೆಂಟಿಂಗ್ ಕೋರ್ಸ್‍ಗಳನ್ನು ನೀಡುವ ಅಗತ್ಯವಿದೆ" ಎಂದು ಬರೆದಿದ್ದಾರೆ. "ಮಗುವಿಗೆ ಅಪಾಯ ತಂದೊಡ್ಡಿದ್ದಕ್ಕಾಗಿ ಅವನನ್ನು ಬಂಧಿಸಬೇಕು ಮತ್ತು ಈ ಮಗುವನ್ನು ಅವನ ಪೋಷಕರ ಆರೈಕೆಯಿಂದ ದೂರವಿಡಬೇಕು" ಎಂದು ಮತ್ತೊಬ್ಬರು ಬರೆದಿದ್ದಾರೆ.