ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಜೆಟ್ ಫ್ರೆಂಡ್ಲಿ ಟ್ರಿಪ್ ಹೆಸರಿನಲ್ಲಿ ಬಾಂಗ್ಲಾದೇಶದಲ್ಲಿ ನರಕ‌ ಅನುಭವಿಸಿದ ವಿದೇಶಿ ಮಹಿಳೆ: ಲಾಡ್ಜ್‌ ಎಷ್ಟು ಕೆಟ್ಟದಾಗಿದೆ ನೋಡಿ

Viral Video: ಕಡಿಮೆ ಖರ್ಚಿನಲ್ಲಿ ಪ್ರಪಂಚ ಸುತ್ತಬೇಕು ಎಂದು ಬಾಂಗ್ಲಾದೇಶದ ಹಳ್ಳಿಯೊಂದಕ್ಕೆ ಭೇಟಿ ನೀಡಿದ ನೆದರ್‌ಲ್ಯಾಂಡ್ಸ್‌ನ ಮಹಿಳೆಗೆ ಮರೆಯಲಾಗದ ಕಹಿ ಅನುಭವ ಆಗಿದೆ. ತಾನು ಇದುವರೆಗೆ ತಂಗಿದ್ದ ಅತ್ಯಂತ ಕೆಟ್ಟ ಹೋಟೆಲ್ ಇದು ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

ಬಾಂಗ್ಲಾದೇಶ ಟ್ರಿಪ್‌ನಲ್ಲಿ ನರಕ‌ ಅನುಭವಿಸಿದ ವಿದೇಶಿ ಯುವತಿ

ಬಾಂಗ್ಲಾದೇಶದಲ್ಲಿ ನರಕ‌ ಅನುಭವಿಸಿದ ವಿದೇಶಿ ಯುವತಿ -

Profile
Pushpa Kumari Jan 8, 2026 8:27 PM

ಢಾಕಾ, ಡಿ. 8: ಹೆಚ್ಚಿನವರು ವಿದೇಶಕ್ಕೆ ಹೋಗಬೇಕು, ಅಲ್ಲಿನ ಅನುಭವ ಪಡೆಯಬೇಕು ಎಂದು ಟ್ರಿಪ್ ಪ್ಲಾನ್ ಮಾಡಿಕೊಳ್ಳುತ್ತಾರೆ. ಆದರೆ ಲಕ್ಷಾಂತರ ರುಪಾಯಿ ಖರ್ಚು, ಅಲ್ಲಿನ ಜೀವನಶೈಲಿ ದುಬಾರಿ ಅಂತೆಲ್ಲ ಅನೇಕ ಸಲ ಹಿಂಜರಿಯುವುದೂ ಇದೆ. ಕಡಿಮೆ ಖರ್ಚಿನಲ್ಲಿ ಪ್ರಪಂಚ ಸುತ್ತಬೇಕು ಎಂದು ಬಾಂಗ್ಲಾದೇಶದ ಹಳ್ಳಿಯೊಂದಕ್ಕೆ ಭೇಟಿ ನೀಡಿದ ನೆದರ್‌ಲ್ಯಾಂಡ್ಸ್‌ನ ಮಹಿಳೆಗೆ ಮರೆಯಲಾಗದ ಕಹಿ ಅನುಭವ ಆಗಿದೆ. ʼʼನಾನು ಇದುವರೆಗೆ ತಂಗಿದ್ದ ಅತ್ಯಂತ ಕೆಟ್ಟ ಹೋಟೆಲ್ ಇದುʼʼ ಎಂದು ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.

ಬಜೆಟ್ ಫ್ರೆಂಡ್ಲಿಯಾಗಿ ಪ್ರಯಾಣ ಮಾಡಬೇಕೆಂದು ನೆದರ್‌ಲ್ಯಾಂಡ್ಸ್‌ನ ಮಹಿಳೆಯೊಬ್ಬರು ಪ್ಲಾನ್ ಮಾಡಿದ್ದರು. ಹೀಗಾಗಿ ಅವರು ಬಾಂಗ್ಲಾದೇಶದ ಒಂದು ಸಣ್ಣ ಹಳ್ಳಿಗೆ ಹೋಗಿದ್ದಾರೆ. ಆದರೆ ಆ ಹಳ್ಳಿಯಲ್ಲಿ ತಂಗಲು ಯಾವುದೇ ಸರಿಯಾದ ಹೋಟೆಲ್‌ ಸಿಗದಿದ್ದಾಗ, ಸ್ಥಳೀಯೊಬ್ಬರ ಸಹಾಯದಿಂದ ಅತ್ಯಂತ ಕಡಿಮೆ ದರದ ಲಾಡ್ಜ್‌ ಒಂದರಲ್ಲಿ ರೂಮ್ ಮಾಡಿದ್ದರು. ಆದರೆ ಅಲ್ಲಿನ ಅನುಭವ ಭೀಕರವಾಗಿತ್ತು. ತಾನು ಇದುವರೆಗೆ ತಂಗಿದ್ದ ಅತ್ಯಂತ ಕೆಟ್ಟ ಹೋಟೆಲ್ ಎಂದು ಅವರು ಹೇಳಿಕೊಂಡಿದ್ದಾರೆ.

ವಿಡಿಯೊ ನೋಡಿ:

ನೆದರ್‌ಲ್ಯಾಂಡ್ಸ್‌ ಮೂಲದ ಟ್ರಾವೆಲ್ ವ್ಲಾಗರ್ ಮೈಕ್ ಹಿಜ್ಮನ್ ಬಾಂಗ್ಲಾದೇಶದ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದರು. ಹಳ್ಳಿಯೊಳಗೆ ಹೋಟೆಲ್ ಸಿಗಲಿಲ್ಲ. ಹೀಗಾಗಿ ಬಜೆಟ್ ಸರಿದೂಗಿಸಲು ಹತ್ತಿರದ ಸೌಲಭ್ಯವೊಂದರಲ್ಲಿ ತಂಗಬೇಕಾಯಿತು. ಆದರೆ ಆ ಕೋಣೆಯ ಸ್ಥಿತಿ ಮಾತ್ರ ಅತ್ಯಂತ ಭೀಕರವಾಗಿತ್ತು. ಕೋಣೆಗೆ ಹೊಂದಿಕೊಂಡಿದ್ದ ಶೌಚಾಲಯವು ಬಳಸಲು ಅಸಾಧ್ಯವಾದಷ್ಟು ಕೊಳಕಾಗಿತ್ತು.

ಬ್ಯಾಂಕ್‍ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್

ಅತಿ ಕಡಿಮೆ ಹಣದಲ್ಲಿ ಪ್ರವಾಸ ಮುಗಿಸಬೇಕೆಂದು ಪ್ಲಾನ್ ಮಾಡಿ ಕೊನೆಗೆ ಇಂತಹ ಪರಿಸ್ಥಿತಿಯಲ್ಲಿ ಇರುವಂತಾಯಿತು ಎಂದು ಹೇಳಿದ್ದಾರೆ. ʼʼನಾನು ಬಾಂಗ್ಲಾದೇಶವನ್ನು ಪ್ರೀತಿಸುತ್ತೇನೆ. ಆದರೆ ಇದು ನಾನು ತಂಗಿದ್ದ ಅತ್ಯಂತ ಕೆಟ್ಟ ಹೋಟೆಲ್ ಆಗಿದೆ. ಅದೃಷ್ಟವಶಾತ್ ಅಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರು ನನಗೆ ಸಹಾಯ ಮಾಡಿದರು. ಹೀಗಾಗಿ ರಸ್ತೆಯಲ್ಲಿ ಮಲಗುವುದಕ್ಕಿಂತ ಈ ರೂಮ್ ಉತ್ತಮ ಎಂದು ಯೋಚಿಸಿದೆ. ಮಾರನೇ ದಿನ ಎದ್ದಾಗ ಯಾವುದೇ ತಿಗಣೆಗಳು ಕಚ್ಚಿರಲಿಲ್ಲ. ಅದೇ ಒಂದು ದೊಡ್ಡ ನೆಮ್ಮದಿʼʼ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಾಂಗ್ಲಾದೇಶಿಯಾಗಿದ್ದರೂ ಸಹ, ನಾನು ಇಂತಹ ನರಕವನ್ನು ಅನುಭವಿಸಿಲ್ಲ‌ ಎಂದು ಒಬ್ಬ ವ್ಯಕ್ತಿ ಬರೆದುಕೊಂಡಿದ್ದಾರೆ. ಕೇವಲ ಹಣ ಉಳಿಸುವ ಉದ್ದೇಶದಿಂದ ಸುರಕ್ಷತೆಯನ್ನು ಕಡೆಗಣಿಸಬೇಡಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಬೀದಿಗಳಲ್ಲಿ ಮಲಗುವುದಕ್ಕಿಂತ ಇದೇ ಉತ್ತಮ ಆಯ್ಕೆ ಎಂದು ಇನ್ನೊಬ್ಬರು ಹೇಳಿದ್ದಾರೆ.